Advertisement

ರಸ್ತೆ ಅಪಘಾತ; ಗಾಯಾಳು ಯುವಕ ಸಾವು

10:02 PM Aug 02, 2023 | Team Udayavani |

ಕುಂದಾಪುರ: ಕಾವ್ರಾಡಿ ಗ್ರಾಮದ ದೂಪದಕಟ್ಟೆಯ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ದನಕ್ಕೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್‌ ಸವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

Advertisement

ಪ್ರದೀಪ ಶೆಟ್ಟಿ (28) ಬುಲೆಟ್‌ನಲ್ಲಿ ಕಂಡ್ಲೂರು ಕಡೆಯಿಂದ ವಾಲ್ತೂರು ಅರಾರಿ ಕಡೆಗೆ ಬರುತ್ತಿದ್ದಾಗ ರಸ್ತೆಗೆ ಅಡ್ಡ ಬಂದ 2 ದನಗಳಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದರು.

ಪ್ರದೀಪ ಶೆಟ್ಟಿ ಅವರ ತಲೆಗೆ ಗಂಭೀರ ಗಾಯವಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ಆ. 1ರಂದು ಮೃತಪಟ್ಟರು.

ಅಪಘಾತದಲ್ಲಿ 1 ಜಾನುವಾರು ಮೃತಪಟ್ಟಿದ್ದು, ಇನ್ನೊಂದು ಜಾನುವಾರು ಗಾಯಗೊಂಡಿತ್ತು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next