Advertisement
ಮೃತರನ್ನು ಹಾಲಿನ ಡೈರಿಯ ಕಾರ್ಯದರ್ಶಿಯಾದ ಬಿ.ಮುದ್ದೇನಹಳ್ಳಿ ಗ್ರಾಮದ ಚಿದಾನಂದ (55 ಹಾಗು ಮಾಜಿ ಕಾರ್ಯದರ್ಶಿಯಾದ ಬಳುವನೇರಲು ಗ್ರಾಮದ ನಾಗಣ್ಣ (65) ಎನ್ನಲಾಗಿದೆ.
ಹೊನ್ನವಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಗೇಟ್ ನಲ್ಲಿ ವಾಹನಗಳಿಗೆ ದಂಡ ವಿಧಿಸುತ್ತಿದ್ದು, ದಂಡ ಹಾಕುತ್ತಾರೆಂಬ ಭಯದಿಂದ ಅತಿವೇಗವಾಗಿ ಬಂದ ಬೊಲೆರೋ ವಾಹನ ಬೈಕ್ ಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತದೇಹಗಳನ್ನು ಗೇಟ್ ಬಳಿ ಇರಿಸಿ ಸಂಬಂಧಪಟ್ಟವರನ್ನು ಕೂಡಲೇ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
Related Articles
Advertisement
ಇದನ್ನೂ ಓದಿ : ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು: ಸಚಿವ ವಿ.ಸೋಮಣ್ಣ
ಸ್ಥಳಕ್ಕೆ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಜಯಲಕ್ಷ್ಮಮ್ಮ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಬಳುವನೇರಲು ಗೇಟ್ ನಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸುತ್ತಿರುವುದರಿಂದ ಅಪಘಾತಗಳ ಪ್ರಕರಣಗಳು ಪದೇ ಪದೇ ನಡೆಯುತ್ತಿರುತ್ತಿವೆ ಅಲ್ಲದೆ ಗೇಟ್ ಬಳಿ ನಾಲ್ಕು ತಾಲೂಕುಗಳನ್ನು ಸಂಪರ್ಕಿಸುವ ರಸ್ತೆಗಳಿದ್ದು ಇಲ್ಲಿ ಯಾವುದೇ ನಾಮಫಲಕಗಳಾಗಲಿ, ರಸ್ತೆ ವಿಭಾಜಕಗಳಾಗಲಿ, ರೋಡ್ ಹಂಪ್ಸ್ ಇಲ್ಲದೇ ಇರುವುದು ದುರ್ಘಟನೆಗೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.