ಬಂಟ್ವಾಳ : ಬಿ.ಸಿ.ರೋಡು – ಪೊಳಲಿ ರಸ್ತೆಯ ಕಲ್ಪನೆ ಎಂಬಲ್ಲಿ ಖಾಸಗಿ ಬಸ್ಸು ಮತ್ತು ಆಟೋ ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಅಪಘಾತದಿಂದ ನೇರಳಕಟ್ಟೆ ನಿವಾಸಿಗಳಾದ ಮುಹಮ್ಮದ್ ನಿಹಾಲ್ ಮತ್ತು ಮುಹಮ್ಮದ್ ಹನೀಫ್ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಳಲಿಯಿಂದ ಬಿ.ಸಿ.ರೋಡ್ ಕಡೆ ಬರುತ್ತಿದ್ದ ಶುಭಲಕ್ಷ್ಮೀ ಬಸ್ ಹಾಗೂ ಬಿ.ಸಿ.ರೋಡ್ ನಿಂದ ಅಡ್ಡೂರು ಕಡೆ ತೆರಳುತ್ತಿದ್ದ ಆಟೋ ರಿಕ್ಷ ಕಲ್ಪನೆ ಇಳಿಜಾರು ಪ್ರದೇಶದಲ್ಲಿ ಢಿಕ್ಕಿಯಾಗಿದೆ. ರಿಕ್ಷಾ ಚಾಲಕ ನಿಹಾಲ್ ಮತ್ತು ಪ್ರಯಣಿಕ ಹನೀಫ್ ಮದುವೆ ಕಾರ್ಯಕ್ರಮ ಒಂದಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಇದನ್ನೂ ಓದಿ :ಸಿಸ್ಕಾ ಬೋಲ್ಟ್ ಎಸ್ ಡಬ್ಲೂ 200 ವಾಚ್: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!