Advertisement

ರಸ್ತೆ ಅವ್ಯವಸ್ಥೆ: ಅಧಿಕಾರಿಗಳಿಗೆ ಸ್ಥಳೀಯರ ತರಾಟೆ

12:16 PM Nov 08, 2017 | Team Udayavani |

ಪಿರಿಯಾಪಟ್ಟಣ: ರಸ್ತೆ ಕಾಮಗಾರಿ ಹೆಸರಿನಲ್ಲಿ ಕಳೆದ 8 ತಿಂಗಳಿನಿಂದ ವಿದ್ಯುತ್‌, ಕುಡಿಯುವ ನೀರು, ಓಡಾಟ ಸೇರಿದಂತೆ ಹಲವು ಸಂಕಷ್ಟ ಎದುರಿಸುತ್ತಿರುವ ನಾಗರಿಕರು ಮಂಗಳವಾರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

Advertisement

ಪಟ್ಟಣದ ಶ್ರೀಬಸವೇಶ್ವರ ವೃತ್ತದಿಂದ ಆನೆಚೌಕೂರು ಗೇಟ್‌ವರೆಗೆ 19 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಆನೆಚೌಕೂರು ಗೇಟ್‌ನಿಂದ ಸೆಂಟ್‌ ಮೆರೀಸ್‌ ಆಸ್ಪತ್ರೆವರೆಗೆ ಕಳೆದ 7 ತಿಂಗಳ ಹಿಂದೆಯೇ ರಸ್ತೆ ಕಾಮಗಾರಿ ಮುಗಿದಿದೆ.

ಆದರೆ, ಸೆಂಟ್‌ ಮೆರೀಸ್‌ ಆಸ್ಪತ್ರೆಯಿಂದ ಶ್ರೀಬಸವೇಶ್ವರ ವೃತ್ತದವರೆಗೆ ಕಳೆದ 7 ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಿ ವಿದ್ಯುತ್‌ ಕಂಬಗಳ ಅಳವಡಿಕೆ ಕಾಮಗಾರಿ ಮುಗಿದಿದೆ. ಇನ್ನು ಚರಂಡಿ-ಸಣ್ಣ ಸೇತುವೆ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಸ್‌.ಪ್ರಕಾಶ್‌ ಜವಾಬ್ದಾರಿ ವಹಿಸಿದ್ದಾರೆ.

ಆದರೆ, ಕಾಮಗಾರಿ ಅವೈಜಾnನಿಕ ಮತ್ತು ಕಳಪೆಯಿಂದ ಕೂಡಿದ್ದು ಮುಂದಿನ ದಿನಗಳಲ್ಲಿ ವಾಸದ ಮನೆಗಳು ಹಾಗೂ ಖಾಲಿ ನಿವೇಶನಗಳು, ಕೆರೆ ಕಟ್ಟೆಗಳಿಂದ ಹರಿಯುವ ನೀರಿಗೆ ತೊಂದರೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಭಟನೆಗಳು ನಡೆದುಕೊಂಡು ಬರುತ್ತಿವೆ.

ರಸ್ತೆಯನ್ನು ಸಂಪೂರ್ಣವಾಗಿ ಹದಗೆಡಿಸಿರುವುದರಿಂದ ಇಲ್ಲಿ ಓಡಾಡುವ ಸಾವಿರಾರು ವಿದ್ಯಾರ್ಥಿಗಳು ಮತ್ತು ವಾಹನ ಸವಾರರು ಗುತ್ತಿಗೆದಾರನಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಇದರಿಂದ ಬೇಸತ್ತ ಸಾರ್ವಜನಿಕರು ಕಳೆದ 15 ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಎಸ್‌.ಪ್ರಕಾಶ್‌ ಕಚೇರಿಗೆ ಮುತ್ತಿಗೆ ಹಾಕಿ ಕೂಡಲೇ ಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದರು.

Advertisement

ಇದಕ್ಕೆ ಸ್ಪಂದಿಸುವುದಾಗಿ ಹೇಳಿದ್ದ ಎಸ್‌.ಪ್ರಕಾಶ್‌ ಕೆಲವು ಮೂರು ದಿನಗಳ ಹಿಂದೆ ಜೆಸಿಬಿಯಲ್ಲಿ ಕೆಲಸ ಮಾಡುವಾಗ ಹೌಸಿಂಗ್‌ ಬೋರ್ಡ್‌ ಮತ್ತು ಮುತ್ತಯ್ಯ ಬಡಾವಣೆಗೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್‌ ಮತ್ತು ವಿದ್ಯುತ್‌ ಕೇಬಲ್‌ ನಾಶಪಡಿಸಿದ್ದಾರೆ.

ಇದರಿಂದ ಬೇಸರಗೊಂಡ ಪಪಂ ಮಾಜಿ ಸದಸ್ಯ ಜಯಸ್ವಾಮಿ, ಅಂಕನಹಳ್ಳಿಸ್ವಾಮಿ ಮತ್ತು ಜಗದೀಶ್‌ ಮತ್ತಿತರರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಸ್‌.ಪ್ರಕಾಶ್‌, ಪುರಸಭಾ ಮುಖ್ಯಾಧಿಕಾರಿ ಕೃಷ್ಣ ಅವರಿಗೆ ಅವ್ಯವಸ್ಥೆ ಸರಿಪಡಿಸಿಕೊಡುವಂತೆ ಸೂಚಿಸಿದ್ದರು.

ಕಳೆದ 8 ತಿಂಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ, ಸೆಸ್ಕಾಂ ಗುತ್ತಿಗೆದಾರರು ಮೌನ ವಹಿಸಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

ಜಯಸ್ವಾಮಿ, ಪರಿಸರ ಹೋರಾಟಗಾರ ಕೆ.ಎನ್‌.ಸೋಮಶೇಖರ್‌, ದಸಂಸ ಮುಖಂಡ ಅಣ್ಣಯ್ಯ ಇದ್ದರು. ಸಹಾಯಕ ಎಂಜಿನಿಯರ್‌ ದಿನೇಶ್‌, ವಾಟರ್‌ಮನ್‌ ರಮೇಶ್‌, ಮತ್ತಿತರ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next