Advertisement

ದಾರಿ ಯಾವುದಯ್ಯ ಶಾಲೆಗೆ ? ಕೆಸರು ತುಂಬಿದ ರಸ್ತೆಯಲ್ಲಿ ವಿದ್ಯಾರ್ಥಿಗಳ ನಿತ್ಯ ನರಕಯಾತನೆ

04:31 PM Sep 21, 2021 | Team Udayavani |

ಸಿಂದಗಿ:  ಶಾಲೆ ಮಂಜೂರಾಗಿ 11 ವಸಂತಗಳನ್ನು ಕಂಡಿದೆ. 2016ರಲ್ಲಿ ಸುಸಜ್ಜಿತವಾದ ಕಟ್ಟದಹೊಂದಿದೆ. ವಿಶಾಲವಾದ ಆಟದ ಮೈದಾನವಿದೆ ಆದರೆ ಈ ಶಾಲೆಗೆ ಹೋಗುವ ರಸ್ತೆ ಸುಧಾರಣೆಯಾಗದೇ ಕೆಸರು ಗದ್ದೆಯಾಗಿದೆ. ಮಾರ್ಗ ಮಧ್ಯ ಇರುವ ತಗ್ಗು ಪ್ರದೇಶದಲ್ಲಿ ರಾಡಿ ನೀರು ನಿಲ್ಲುತ್ತದೆ. ಮಳೆಗಾಲದಲ್ಲಂತೂ ಹೇಳ ತೀರದ ಪೇಚಾಟ ವಿದ್ಯಾರ್ಥಿಗಳದ್ದು.

Advertisement

ಪಟ್ಟಣದಲ್ಲಿನ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಹೋಗುವ ರಸ್ತೆಯ ದುಸ್ಥಿಯಾಗಿದೆ. ಮಳೆಗಾಲದಲ್ಲಿ ಆದರ್ಶ ವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳ ಪೇಚಾಟ ಕಂಡು ವಿದ್ಯಾಲಯದ ಹತ್ತಿರ ಇರುವ ಗೌಡರು ತಮ್ಮ ಸ್ವಂತ ಖರ್ಚಿನಿಂದ ಎರಡು ಸಲ ಮುರುಮು ಹಾಕಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪದ್ದರೂ ಮಳೆಗಾಲದಲ್ಲಿ ಪೇಚಾಟ ತಪ್ಪಿದ್ದಲ್ಲ.

ಪುರಸಭೆಯ ಕೆಲ ಸದಸ್ಯರಿಗೆ ಸಮಸ್ಯೆ ಕುರಿತು ಹೇಳಿದಾಗ ಪುರಸಭೆಯಲ್ಲಿ ಹಣವಿಲ್ಲ. ಯಾರಿದಂದಲಾದರು ಸಾಲ ಕೊಡಿಸಿ ನಾನು ಈ ವಾರ್ಡಿನ ಸದಸ್ಯನಲ್ಲದಿದ್ದರೂ ನಾನು ಈ ರಸ್ತೆ ಕೆಲಸ ಮಾಡುತ್ತೇನೆ. ಬಿಲ್ ಬಂದ ಮೇಲೆ ನಾನು ಅವರಿಗೆ ಹಣ ನೀಡುತ್ತೇನೆ ಎಂದು ಹೆಸರು ಹೇಳಲು ಇಚ್ಚಿಸದ ಪುರಸಭೆ ಹಾಲಿ ಸದಸ್ಯ ನೀಡುವ ಉತ್ತರವಾಗಿದೆ.

ಸರಕಾರಿ ಆದರ್ಶ ವಿದ್ಯಾಲಯದಲ್ಲಿ 6 ರಿಂದ 10ನೇ ವರ್ಗದವರೆಗೆ 400 ವಿದ್ಯಾರ್ಥಿಗಳು ಕಲಿಯುತ್ತಾರೆ. ಇವರೆಲ್ಲರೂ ಶಾಲೆಗೆ ಬರಲು ಒಂದೇ ಮಾರ್ಗವಿದೆ. ಅದು ಸಂಪೂರ್ಣ ತಗ್ಗುಗಳಿಂದ ಕೂಡಿ ಹಾಳಾಗಿದೆ.

Advertisement

ಸ್ಥಳಿಯ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕಲಿಯುತ್ತಾರೆ. ಅವರು ವಿದ್ಯಾಲಯಕ್ಕೆ ಹೋಗಬೇಕಾಗದಲ್ಲಿ ಕೆಸರು ತುಂಬಿದ ರಸ್ತೆಯೊಂದೇ ಮಾರ್ಗವಾಗಿದೆ. ಮಳೆಗಾಳದಲ್ಲಿ ಕೆಸರು ರಸ್ತೆಯಲ್ಲಿ ಶಾಲೆಗೆ ಹೋಗುವುದರಿಂದ ನಿತ್ಯ ಸಮವಸ್ತ್ರಗಳು ಕೆಸರಾಗುತ್ತವೆ. ಇನ್ನಾದರು ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಪಾಲಕರ ಮನವಿಯಾಗಿದೆ.

ರಸ್ತೆ ದುರಸ್ತಿಗೆ ಅನೇಕ ಬಾರಿ ಸಂಬಂಧಿಸಿದವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಶಾಲೆಯವರು ಹೇಳುತ್ತಾರೆ. ಆದರೆ ನಿತ್ಯ ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ನಮಗೆ ಎದುರಾಗಿದೆ ಎಂದು ಸರಕಾರಿ ಆದರ್ಶ ವಿದ್ಯಾರ್ಥಿಗಳ ಅಳಲಾಗಿದೆ. ಸ್ವಲ್ಪ ಮಳೆ ಬಂದರಾಯಿತು ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ನರಕಯಾತೆ ಪಡೆಯುವಂತಾಗಿದೆ. ಅಲ್ಲದೇ ಪ್ರತಿ ದಿನ ಸಮವಸ್ತ್ರ ರಾಡಿಯಾಗುತ್ತವೆ ಅವುಗಳನ್ನು ತೊಳೆದು ಸಾಕಾಗಿದೆ ಎಂದು ವಿದ್ಯಾರ್ಥಿಗಳ ತಾಯಂದಿರ ಮನದಾಳದ ಮಾತಾಗಿದೆ.

ರಸ್ತೆ ಸಂಪೂರ್ಣ ತೆಗ್ಗುಗಳಿಂದ ಕೂಡಿದೆ. ಮಳೆ ಬಂತೆಂದರೆ ತಗ್ಗುಗಳಲ್ಲಿ ನೀರು ನಿಲ್ಲುತ್ತವೆ. ಆಗ ರಸ್ತೆಯಾವುದೋ ಗುಂಡಿ ಯಾವುದೋ ಗೊತ್ತಾಗುವುದಿಲ್ಲ. ಮಕ್ಕಳಿಗೆ ಬೈಕ್ ಮೇಲೆ ಶಾಲೆಗೆ ಬಿಡುವ ಸಂದರ್ಭದಲ್ಲಿ ಸಾಕಷ್ಟು ಅಪಘಾತಗಳಾಗಿವೆ. ನಮಗೂ, ಮಕ್ಕಳಿಗೂ ಗಾಯಗಳಾಗಿವೆ. ನಮ್ಮ ಕಷ್ಟ ಯಾರಿಗೆ ಹೇಳಬೇಕು.

ಸ್ಥಳಿಯ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೇ ರಸ್ತೆ ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಇದರಿಂದ ಅಲ್ಲಿ ಕೊಳಚೆ ನಿರ್ಮಾಣವಾಗಿ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಪರಿವರ್ತನೆಯಾಗುತ್ತದೆ. ಶಾಲೆಯ ಸುತ್ತಮುತ್ತಲಿನ ವಾತಾವರಣ ಆರೋಗ್ಯಕರವಾಗಿರಬೇಕು. ಆದ್ದರಿಂದ ಸಂಬಂಧಿಸಿದ ಇಲಾಖೆ ಶಾಲೆಯ ರಸ್ತೆ ದುರಸ್ಥಿ ಮಾಡಬೇಕು.
-ಡಾ.ಮಹೇಶ ಹಿರೇಮಠ, ವೈಧ್ಯರು, ಸಿಂದಗಿ.

ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಬೇಕಾದರೆ ನರಕಯಾತನೆ ಪಡುತ್ತಾರೆ. ಈ ರಸ್ತೆ ದುರಸ್ಥಿ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಮತ್ತು ಶಾಲೆಯಿಂದ ಪುರಸಭೆಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರು ರಸ್ತೆ ದುರಸ್ಥಿಗೆ ಪುರಸಭೆ ಆಢಳಿತ ಮುಂದಾಗಬೇಕು.
-ರಮೇಶ ಚಟ್ಟರಕಿ, ಪ್ರಭಾರಿ ಮುಖ್ಯೋಧ್ಯಾಪಕ, ಸರಕಾರಿ ಆದರ್ಶ ವಿದ್ಯಾಲಯ, ಸಿಂದಗಿ.

ರಸ್ತೆ ದುರಸ್ತಿಗೆ ಅನೇಕ ಬಾರಿ ಸಂಬಂಧಿಸಿದವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಆದರೆ ನಿತ್ಯ ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ನಮ್ಮ ಶಾಳೆಯ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಕೆಸರಿನಿಂದ ಕೂಡಿದ ರಸ್ತೆಯಲ್ಲಿ ಶಾಲೆಗೆ ಹೋದರೆ ಸಾಕು ಸಮವಸ್ತ್ರಗಳು ರಾಡಿಮಯವಾಗುತ್ತವೆ. ಪಾಲಕರು ಸಾಕಷ್ಟು ಬಾರಿ ತಮ್ಮ ಸಂಕಷ್ಟ ತೊಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಕಷ್ಟ ಅರಿತು ಇನ್ನಾದರೂ ರಸ್ತೆ ದುರಸ್ಥಿ ಮಾಡಲು ಪುರಸಭೆ ಮುಂದಾಗಬೇಕು.
-ಎಸ್.ಎಸ್. ಕುಂಬಾರ, ಅಧ್ಯಕ್ಷರು, ಎಸ್‌ಡಿಎಂಸಿ, ಸರಕಾರಿ ಆದರ್ಶ ವಿದ್ಯಾಲಯ ಸಿಂದಗಿ.

– ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next