ಮೈಸೂರು: ಮೃತ್ಯುಕೂಪಗಳಾಗಿ ಪರಿಣಮಿಸಿದ್ದ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ನಗರ ಪಾಲಿಕೆ ಮುಂದಾಗಿದೆ.
ಬಂತು ರೋಡ್ ಡಾಕ್ಟರ್: ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ನಿರ್ಧರಿಸಿರುವ ಪಾಲಿಕೆ ಇದಕ್ಕಾಗಿ ಪಾಟ್‌ಹೋಲ್ ಬಸ್ಟರ್ಸ್ ಹೆಸರಿನ ರೋಡ್ ಡಾಕ್ಟರ್ ಯಂತ್ರ ಬಳಸಲು ನಿರ್ಧರಿಸಿದೆ.
ಅದರಂತೆ ಸೋಮವಾರ ನಗರದ ಮೃಗಾಲಯ ರಸ್ತೆ-ಲೋಕರಂಜನ್ ಮಹಲ್ ರಸ್ತೆ ಜಂಕ್ಷನ್‌ನಲ್ಲಿ ರೋಡ್ ಡಾಕ್ಟರ್ ಯಂತ್ರದ ಮೂಲಕ ಪ್ರಾಯೋಗಿಕವಾಗಿ ಗುಂಡಿ ಮುಚ್ಚುವ ಕೆಲಸ ನಡೆಸಲಾಯಿತು. ಅತ್ಯಾಧುನಿಕ ತಂತ್ರಜಾnನ ಒಳಗೊಂಡಿರುವ ರೋಡ್ ಡಾಕ್ಟರ್ ಯಂತ್ರದ ಬಳಕೆ ಈಗಾಗಲೇ ದೆಹಲಿ, ಪುಣೆ ಮತ್ತು ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ.
ಈ ನಿಟ್ಟಿನಲ್ಲಿ ದೆಹಲಿ ಮೂಲದ ಕ್ಯಾಮ್ ಅವಿಡಾ ಸಂಸ್ಥೆ ಪರಿಚಯಿಸಿರುವ ಪರಿಸರ ಸ್ನೇಹಿ ಯಂತ್ರ ಬಳಸಿ ಗುಂಡಿ ಮುಚ್ಚುವ ಕೆಲಸಕ್ಕೆ ನಗರ ಪಾಲಿಕೆ ಸಜಾಗಿದೆ. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಪಾಲಿಕೆ ಒಪ್ಪಿಗೆ ನೀಡಿ, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ದಿನಗಳಲ್ಲಿ ರೋಡ್ ಡಾಕ್ಟರ್ ಯಂತ್ರಗಳು ನಗರದಲ್ಲಿನ ಗುಂಡಿಗಳಿಗೆ ಮುಕ್ತಿ ನೀಡಲಿವೆ.
ಯಂತ್ರದ ಬಳಕೆ ಹೇಗೆ?: ರೋಡ್ ಡಾಕ್ಟರ್ ಯಂತ್ರದ ನೂತನ ತಂತ್ರಜಾnನದಲ್ಲಿ ಗುಂಡಿಬಿದ್ದಿರುವ ಜಾಗ ವಿಸ್ತರಿಸದೆ, ಯಥಾಸ್ಥಿತಿಯಲ್ಲಿ ಯಂತ್ರದಿಂದ ಸ್ಥಳ ಸ್ವತ್ಛಗೊಳಿಸಿ, ನಂತರ ಶಾಖದಿಂದ ಸುತ್ತಲಿನ ಪ್ರದೇಶವನ್ನು ಹದ ಮಾಡಲಿದೆ. ಸಿದ್ಧ ಡಾಂಬರ್ ಮಿಶ್ರಣವನ್ನು ಗುಂಡಿಗೆ ಹಾಕಿ ಡಾಂಬರು ಹಾಕಿ ಯಂತ್ರದ ಒತ್ತಡದಲ್ಲಿ ಸಮತಟ್ಟು ಮಾಡಲಾಗುವುದು.
ಇದರಿಂದ ಮುಚ್ಚಲ್ಪಡುವ ಗುಂಡಿ ಹಿಂದಿನ ರಸ್ತೆಗೆ ಸಮವಾಗಿರಲಿದೆ. ಇದಕ್ಕೆ ಕೇವಲ 3-4 ಮಂದಿ ಕಾರ್ಯನಿರ್ವಹಿಸಿದರೆ ಸಾಕು. ಈ ತಂತ್ರಜಾnನದ ಬಳಕೆಗೆ ಡಾಂಬರನ್ನು ಕಾಯಿಸುವ ಪ್ರಕ್ರಿಯೆ ಇರುವುದಿಲ್ಲ ಮತ್ತು ಇದರಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ.
ಇತ್ತೀಚೆಗೆ ಪುಣೆಗೆ ತೆರಳಿದ್ದ ವೇಳೆ ಅಲ್ಲಿ ಬಳಸುತ್ತಿದ್ದ ತಂತ್ರಜಾnನದ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ಜತೆ ಚರ್ಚಿಸಿ, ಮಾಹಿತಿ ಪಡೆದಿದ್ದೆ. ಅಲ್ಲದೆ ಈ ಬಗ್ಗೆ ಮೈಸೂರಿಗೆ ಬಂದು ಪ್ರಾತ್ಯಕ್ಷಿಕೆ ನೀಡುವಂತೆ ಆಹ್ವಾನಿಸಲಾಗಿತ್ತು. ಈ ಹೊಸ ತಂತ್ರಜಾnನ ಪರಿಸರ ಸ್ನೇಹಿಯಾಗಿದ್ದು, ಸಮಯ ಮತ್ತು ರಸ್ತೆ ಸಂಚಾರದ ಅಡಚಣೆ ಕಡಿತಗೊಳಿಸಿ ದೀರ್ಘಕಾಲ ಬಾಳಿಕೆ ಬರಲಿದೆ.
-ಸುರೇಶ್‌ಬಾಬು, ಮಹಾನಗರಪಾಲಿಕೆ ಅಧೀಕ್ಷಕ ಎಂಜಿನಿಯರ್