Advertisement
ಶಂಭೂರು ಎಎಂಆರ್ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿರುವ ಪರಿಣಾಮ ಸರಪಾಡಿ ಭಾಗದಲ್ಲಿ ವರ್ಷಪೂರ್ತಿ ಅದರ ಹಿನ್ನೀರು ನದಿಯಲ್ಲಿ ತುಂಬಿರುತ್ತಿದ್ದು, ರಸ್ತೆಯು ನದಿಯಂಚಿನಲ್ಲೇ ಸಾಗುತ್ತಿದೆ. ಪೆರ್ಲ ಭಾಗದಲ್ಲಿ ಅಣೆಕಟ್ಟು ನಿರ್ಮಾಣದ ಸಂದರ್ಭ ತಡೆಗೋಡೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಸಲಾಗಿದ್ದು, ಅದರ ಬಳಿಕ ತಡೆಗೋಡೆಯ ನಿರ್ವಹಣೆಯನ್ನು ಮಾಡಿಲ್ಲ. ಒಂದಷ್ಟು ಕಡೆಗಳಲ್ಲಿ ನದಿಯ ಒಳಭಾಗದಲ್ಲಿ ತಡೆಗೋಡೆಗೆ ಹಾನಿಯಾಗಿದೆ ಎನ್ನಲಾಗಿದ್ದು, ಹೀಗಾಗಿ ಅದರ ದುರಸ್ತಿಗೆ ಆಗ್ರಹಿಸುತ್ತಿದ್ದಾರೆ.
ಅಣೆಕಟ್ಟಿನ ಹಿನ್ನೀರು ವರ್ಷಪೂರ್ತಿ ತುಂಬಿರುತ್ತಿದ್ದು, ಸಂಜೆಯ ವೇಳೆ ಅಲೆಗಳ ರೀತಿ ನೀರು ತಡೆಗೋಡೆಗೆ ಬಡಿದು ಮಣ್ಣಿನ ಸವಕಳಿ ಉಂಟಾಗುತ್ತಿದೆ. ಇದರಿಂದ ರಸ್ತೆಗೂ ಅಪಾಯವಿದೆ.
Related Articles
Advertisement
ಬೀಯಪಾದೆವರೆಗೆ ರಸ್ತೆ ಕಿರಿದುಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ-ಸರಪಾಡಿ ರಸ್ತೆಯು ಪ್ರಸ್ತುತ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡಿದ್ದು, ಬಂಟ್ವಾಳ ಶಾಸಕರ 3 ಕೋ.ರೂ.ವೆಚ್ಚದ ಅನುದಾನದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆಯೂ ನಿರ್ಮಾಣಗೊಂಡಿದೆ. ಹೀಗಾಗಿ ರಸ್ತೆಯಲ್ಲಿ ವಾಹನಗಳ ಓಡಾಟ ಗಣನೀಯ ಏರಿಕೆಯಾಗಿದ್ದು, ಪೆರ್ಲ ಎಂಆರ್ಪಿಎಲ್ ಪಂಪ್ಹೌಸ್ನಿಂದ ಬೀಯಪಾದೆವರೆಗಿನ ರಸ್ತೆ ಕಿರಿದಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ದಿನವಿಡೀ ವಾಹನ ಓಡಾಟ ಇರುವುದರಿಂದ ಎರಡು ವಾಹನಗಳ ಏಕಕಾಲದಲ್ಲಿ ಎದುರು ಬದುರಾದರೆ ಒಂದಷ್ಟು ಅಡ್ಡಿ ಉಂಟಾಗುತ್ತದೆ. ಹೀಗಾಗಿ ಈ ಭಾಗದಲ್ಲಿ ರಸ್ತೆಯನ್ನು ವಿಸ್ತರಿಸುವ ಕುರಿತು ಕೂಡ ಆಗ್ರಹಿಸಲಾಗಿದೆ.