Advertisement

45 ಲಕ್ಷ ವೆಚ್ಚದಲ್ಲಿ ಸೇತುವೆ, ರಸ್ತೆ ಕಾಮಗಾರಿ

02:53 PM Mar 23, 2021 | Team Udayavani |

ಪಾಂಡವಪುರ: ವಡ್ಡರಹಳ್ಳಿ ಗ್ರಾಮಸ್ಥರ ಕೋರಿಕೆಮೇರೆಗೆ ಈ ಭಾಗದಲ್ಲಿ ಸೇತುವೆ ಹಾಗೂ ರಸ್ತೆನಿರ್ಮಿಸಲಾಗುತ್ತಿದೆ. ರಸ್ತೆ ಮೂಲಕ ಗ್ರಾಮದ ಶ್ರೀ ಗವಿರಂಗಪ್ಪ ದೇವಸ್ಥಾನಕ್ಕೆ ಸುಗಮವಾಗಿತಿರುಗಾಡಬಹುದು ಹಾಗೂ ಈ ಭಾಗದ ರೈತರಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗುತ್ತದೆ ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

Advertisement

ವಡ್ಡರಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ವಡೇರಹಳ್ಳದಲ್ಲಿ ಕಾವೇರಿ ನೀರಾವರಿ ನಿಗಮದಿಂದ45 ಲಕ್ಷ ರೂ. ಅನುದಾನದಲ್ಲಿ ಸೇತುವೆ ಹಾಗೂ ರಸ್ತೆಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರಅವರು, ವಡ್ಡರಹಳ್ಳಿ ಗ್ರಾಮದ ಸಮೀಪದಲ್ಲಿವಡೇರ ಹಳ್ಳದಲ್ಲಿ ಸೇತುವೆ ನಿರ್ಮಾಣ ಹಾಗೂ900 ಮೀ. ದೂರದಷ್ಟು ರಸ್ತೆ ನಿರ್ಮಿಸಿದರೆ ಈಭಾಗದ ನೂರಾರು ರೈತರ ಜಮೀನಿಗೆ ಅನುಕೂಲಆಗುವ ಉದ್ದೇಶದಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರ ಯೂನಿಯನ್‌ಅಧ್ಯಕ್ಷ, ತಾಪಂ ಸದಸ್ಯ ವಡ್ಡರಹಳ್ಳಿ ವಿ.ಎಸ್‌.ನಿಂಗೇಗೌಡ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕಶ್ಯಾದನಹಳ್ಳಿ ಚಲುವರಾಜು, ಟಿಎಪಿಸಿಎಂಎಸ್‌ಸದಸ್ಯ ರಾಮಕೃಷ್ಣೇಗೌಡ, ಮನ್‌ಮುಲ್‌ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ, ಗುತ್ತಿಗೆದಾರಮಹೇಶ್‌, ಕಾವೇರಿ ನೀರಾವರಿ ನಿಗಮದ ಇಇಟಿ.ಜಿ. ಗಂಗಾಧರಮೂರ್ತಿ, ಎಇಇ ನಾರಾಯಣಸ್ವಾಮಿ, ಎಸ್‌.ಒ.ರಾಘವೇಂದ್ರ ಸೇರಿದಂತೆ ವಡ್ಡರಹಳ್ಳಿ ಗ್ರಾಮದ ಮುಖಂಡರು ಹಾಜರಿದ್ದರು.

ಅಳಲು ತೋಡಿಕೊಂಡ ಗೃಹಿಣೆ: ಎರಡು ಕಿಡ್ನಿವೈಫಲ್ಯದಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ಮಾಡಿಸಿಕೊಂಡು ಬದುಕು ನಡೆಸುತ್ತಿರುವವಡ್ಡರಹಳ್ಳಿ ಗ್ರಾಮದ ಗೃಹಿಣಿ ವಿ.ಕೆ.ಭವ್ಯ (24)ಶಾಸಕ ಸಿ.ಎಸ್‌.ಪುಟ್ಟರಾಜು ಅವರನ್ನು ಭೇಟಿಮಾಡಿ, ಕಿಡ್ನಿ ವೈಫಲ್ಯ, ಇತರೆ ಖಾಸಗಿ ಆಸ್ಪತ್ರೆಯಲ್ಲಿಡಯಾಲಿಸಿಸ್‌ಗೆ ಹಣ ಖರ್ಚು ಮಾಡಿದ್ದೇನೆ.ಬಡವರಾಗಿದ್ದು, ಈಗ ಪಾಂಡವಪುರ ಸಾರ್ವಜನಿಕಆಸ್ಪತ್ರೆಯಲ್ಲಿ ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ಮಾಡಿಸುತ್ತಿದ್ದೇನೆ. ದಯವಿಟ್ಟು ನನ್ನ ಪ್ರಾಣ ಉಳಿಸಿ ಎಂದು ಅಳಲು ತೋಡಿಕೊಂಡರು.

ಭವ್ಯಾ ಅವರಿಗೆ ಆತ್ಮಸ್ಥೆçರ್ಯತುಂಬಿದ ಶಾಸಕಸಿ.ಎಸ್‌.ಪುಟ್ಟರಾಜು, ತಮ್ಮ ಚಿಕಿತ್ಸೆಗೆ ತಾತ್ಕಾಲಿಕವಾಗಿ ನಾನು ಆರ್ಥಿಕವಾಗಿ ಸಹಾಯ ಮಾಡುತ್ತೇನೆ.ಜತೆಗೆ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡಿರುವವೆಚ್ಚದಲ್ಲಿ ಆದಷ್ಟು ಸರ್ಕಾರದಿಂದ ಸಹಾಯ ಮಾಡಿಸುತ್ತೇನೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next