Advertisement

ಕೋಟೇಶ್ವರ-ಬೀಜಾಡಿ ನಡುವೆ ಸರ್ವಿಸ್‌ ರಸ್ತೆ  ಕಾಮಗಾರಿ ಆರಂಭ

02:25 AM Nov 14, 2018 | Team Udayavani |

ಕೋಟೇಶ್ವರ: ಕೋಟೇಶ್ವರ ಹಾಗೂ ಬೀಜಾಡಿ ನಡುವಿನ ರಾ. ಹೆದ್ದಾರಿಯ ಮುಖ್ಯರಸ್ತೆಯ ಪಾರ್ಶ್ವದಲ್ಲಿ ಸರ್ವಿಸ್‌ ರಸ್ತೆಯ ಅಗತ್ಯತೆ ಬಗ್ಗೆ ವಿಶೇಷ ಲೇಖನ ಪ್ರಕಟಿಸಿ ಗಮನ ಸೆಳೆದಿದ್ದ ‘ಉದಯವಾಣಿ’ ವರದಿಗೆ ಸ್ಪಂದಿಸಿರುವ ಹೆದ್ದಾರಿ ಪ್ರಾಧಿಕಾರ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿಗೆ ನ.12ರಂದು ಚಾಲನೆ ನೀಡಿದೆ. ಬೀಜಾಡಿ, ಗೋಪಾಡಿ ನಿವಾಸಿಗಳು ಸಹಿತ ವಿವಿಧ ಸಂಘಟನೆಗಳು ಸರ್ವಿಸ್‌ ರಸ್ತೆಯ ಬೇಡಿಕೆ ಮುಂದಿಟ್ಟು ಗುತ್ತಿಗೆದಾರರು, ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next