Advertisement

ಶಿವಗಿರಿ –ಕುಕ್ಕಾಜೆ: ಕಳಪೆ ಕಾಮಗಾರಿ-ಮೋರಿ ನಾಪತ್ತೆ!

02:15 AM Jul 11, 2018 | Team Udayavani |

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಶಿವಗಿರಿ ಕುಕ್ಕಾಜೆ ರಸ್ತೆಯಲ್ಲಿ ಗುತ್ತಿಗೆ ದಾರರು ನಡೆಸಿದ ಕಳಪೆ ರಸ್ತೆ ಕಾಮಗಾರಿಯಿಂದಾಗಿ ನೀರು ಹರಿಯುವ ಮೋರಿಯೇ ನಾಪತ್ತೆಯಾಗಿದ್ದು, ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಮಾಜಿ ಶಾಸಕ ವಸಂತ ಬಂಗೇರ ಅವರು ತಮ್ಮ ಕೊನೆಯ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳ ರಸ್ತೆಗಳಲ್ಲಿ ಪ್ರತಿ ವರ್ಷ ಮಳೆಯ ನೀರಿನ ತೇವಾಂಶದಿಂದ ಹೊಂಡಗಳು ನಿರ್ಮಾಣವಾಗುತ್ತಿದ್ದು, ಇದನ್ನು ತಪ್ಪಿಸಲು ಕಾಂಕ್ರಿಟ್‌ ಕಾಮಗಾರಿ ಮೂಲಕ ಶಾಶ್ವತ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸಗೈದಿದ್ದರು. ಅದರಂತೆ ಕರಾಯ ಗ್ರಾಮದ ಶಿವಗಿರಿ ಕುಕ್ಕಾಜೆಯಲ್ಲಿ ಕೆ.ಆರ್‌.ಐ.ಡಿ.ಎಲ್‌. ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ 800 ಮೀ. ರಸ್ತೆಗೆ ಅನುದಾನ ಮಂಜೂರಾಗಿತ್ತು.

ಆದರೆ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ನಡೆಸಿದಲ್ಲದೆ ನಿಗಮ ನಿಗದಿಪಡಿಸಿದ ಸಾಂದ್ರತೆಯಲ್ಲಿ (ದಪ್ಪ) ಕಾಂಕ್ರೀಟ್‌ ಹಾಕದೆ ಬೇಕಾಬಿಟ್ಟಿ ಕಾಮಗಾರಿ ನಡೆಸಿದ್ದಾರೆ. ರಸ್ತೆ ಕಾಮಗಾರಿ ದಾಖಲೆಯನ್ನು ಹಿಡಿದು ನಿಗಮ ನಿಗದಿಪಡಿಸಿದ ಮೋರಿ ಎಲ್ಲಿ ಎಂದು ಪ್ರಶ್ನಿಸಿದಾಗ, ಗುತ್ತಿಗೆದಾರರು ಉತ್ತರ ನೀಡಲು ಚಡಪಡಿಸಿದ್ದಾರೆ. ಕಾಮಗಾರಿ ನಿಗದಿಯಾದ ಕಾಂಕ್ರೀಟ್‌ ಸಾಂದ್ರತೆ ರಸ್ತೆಯ ಮಧ್ಯಭಾಗದಲ್ಲಿ ಎರಡು ಇಂಚು ದಪ್ಪ ಹಾಗೂ ರಸ್ತೆ ಬದಿಗೆ 4 ಇಂಚು ಅಳವಡಿಸಿ ಯಾರಿಗೂ ಅನುಮಾನ ಬಾರದಂತೆ ಕಾಮಗಾರಿ ಮುಗಿಸುವ ಹಂತದಲ್ಲಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಕಾಮಗಾರಿ ಇನ್ನೆರಡು ಕಿ.ಮೀ. ಬಾಕಿ ಇದ್ದು, ಕೊನೆಯ ಹಂತದಲ್ಲಿದೆ. ಪ್ರಸ್ತುತ ಕಾಮಗಾರಿಯನ್ನು ಇಂಟರ್‌ನೆಟ್‌ ನಲ್ಲಿ ಗುತ್ತಿಗೆ ಪಡೆದು ಪಂಚಾಯತ್‌ ಗಮನಕ್ಕೆ ಬಾರದೆ ಬಿಲ್ಲು ಪಡೆದು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next