Advertisement

ರಸ್ತೆ ಕಾಮಗಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ

06:06 PM Oct 14, 2021 | Team Udayavani |

ನೆಲಮಂಗಲ: ನಗರಸಭೆ ಕೂಗಳತೆ ದೂರದಲ್ಲಿರಿರುವ 14ನೇ ವಾರ್ಡ್‌ನಲ್ಲಿರುವ ಮುಖ್ಯರಸ್ತೆ ಅಭಿ ವೃದ್ಧಿ ಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತೆ ವಹಿ ಸುತ್ತಿದ್ದು, ಸಾರ್ವಜನಿಕರು ಆತಂಕದಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಗ್ರಾಮ ಮತ್ತು ಪಟ್ಟಣದಂತಹ ನಗರ ಪ್ರದೇಶದಲ್ಲಿ ಮೂಲಸೌಕರ್ಯ ಸಮರ್ಪಕ ರೀತಿಯಲ್ಲಿ ಒದಗಿಸಿದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ.

Advertisement

ನಗರದ ಅಭಿವೃದ್ಧಿಪರವಾಗಿ ನಿಲ್ಲಬೇಕಾದ ಅಧಿಕಾರಿಗಳು ರಸ್ತೆ ಅಭಿವೃದ್ಧಿ, ಚರಂಡಿ ಅವ್ಯವಸ್ಥೆ ಸರಿಪಡಿಸಲಾಗದೆ ಜಾಣ ಕುರುಡುತನ ತೋರುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಣೆಗಳು ಕೇಳಿ ಬಂದಿದ್ದು, ಅಧಿಕಾರಿಗಳ ನಡೆಗೆ ಖಂಡನೆ ವ್ಯಕ್ತವಾಗಿದೆ.

ಗೋವಾ: ಸ್ಥಳೀಯರಿಗೆ ಕ್ಯಾಸಿನೊ ಪ್ರವೇಶ ನಿರ್ಬಂಧ ಮುಂದುವರಿಕೆ

ತಡೆಗೋಡೆ ನಿರ್ಮಿಸಿ: ನೆಲಮಂಗಲ ನಗರಸಭೆಯ 14ನೇ ವಾರ್ಡ್‌ನ ಮೂಲಕ ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಇತ್ತೀಚೆಗೆ ಪ್ರಾರಂಭವಾದ ಎಪಿ ಎಂಸಿ ಮಾರುಕಟ್ಟೆಗೆ ಈ ರಸ್ತೆ ಸಂಪರ್ಕ ರಸ್ತೆಯಾಗಿದೆ. ಅದೇ ರೀತಿಯಾಗಿ ಪಟ್ಟಣದ ಆಸುಪಾಸಿನ ಗ್ರಾಮಗಳ ನಾಗರಿಕರು ಪ್ರತಿನಿತ್ಯ ಇದೇ ರಸ್ತೆ ಮೂಲಕ ತಾಲೂಕು ಕೇಂದ್ರ ನೆಲಮಂಗಲಕ್ಕೆ ಬಂದು ಹೋಗುತ್ತಾರೆ. ಸುಮಾರು ತಿಂಗಳಿಂದ ನಗರಸಭೆ ಆಯುಕ್ತರಿಗೆ ಮತ್ತು ಎಂಜಿನಿಯರ್‌ಗೆ ಸಾಕಷ್ಟು ಬಾರಿ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಿ ರಸ್ತೆ ಯನ್ನು ಅಭಿವೃದ್ಧಿ ಮಾಡಿಕೊಡಿವಂತೆ ಸ್ಥಳೀಯರು ಮನವಿ ಮಾಡಿದರೂ, ಸ್ಥಳಕ್ಕೆ ಯಾವ ಅಧಿಕಾರಿಗಳು ಬರದೆ ಅಂದ ದರ್ಬಾರ್‌ ತೋರುತ್ತಿದ್ದು, ಈ ಅನಾಹುತಕ್ಕೆ ತಯಾರಿಗಿರುವ ಚರಂಡಿಗಳನ್ನು ಮುಂಚದೆ ಹಾಗೇ ಬಿಟ್ಟಿದ್ದು, ಯಾರು ಯಾವಾಗ ಯಾವ ರೀತಿ ಚರಂಡಿಗೆ ಬಿದ್ದು ಸಾವು-ನೋವು ಅನುಭವಿಸಬೇಕಾಗುತ್ತದೋ ದೇವರೆ ಬಲ್ಲ!

ಅಕ್ರಮ ಖಾತೆ ಆರೋಪ: ನಗರಸಭೆಯಲ್ಲಿ ಅಧಿಕಾರಿಗಳು ಸರಿಯಾದ ಕೆಲಸವನ್ನು ಮಾಡದೇ ಅಕ್ರಮ ಖಾತೆ ಮಾಡಿಕೊಂಡು ಸಾಕಷ್ಟು ಹಣವನ್ನು ತಿನುತ್ತಿದ್ದಾರೆ ಎಂದು ಆರೋಪ ಸಹ ಕೇಳಿಬರುತ್ತಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಿಕೊಂಡು ಕಳಪೆ ಗುಣಮಟ್ಟದಲ್ಲಿ ಅಭಿವೃದ್ಧಿ ಮಾಡಿ ಅನುದಾನದಿಂದ ಬಿಡುಗಡೆಯಾದ ಹಣದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ಮುಖಂಡ ಮರಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಪುರಸಭೆ ಮಾಜಿ ಸದಸ್ಯ ಕಪಾಲಿ ವೆಂಕಟೇಶ ಮಾತನಾಡಿ, ಚರಂಡಿ ಮತ್ತು ರಸ್ತೆ ಅಭಿವೃದ್ಧಿ ವಿಚಾರ ದಲ್ಲಿ ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ, ಏನೂ ಪ್ರಯೋಜನವಾಗುತ್ತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next