Advertisement

ರಸ್ತೆ ಅಪಘಾತ: ವರ್ಷಕ್ಕೆ 2.91 ಲಕ್ಷ ಕೋಟಿ ನಷ್ಟ!

10:36 AM Oct 27, 2021 | Team Udayavani |

ಬೆಂಗಳೂರು: ನಿತ್ಯ ಕಣ್ಮುಂದೆ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಂದ ನಮಗರಿವಿಲ್ಲದೆ ದೇಶದ ಸಾಮಾಜಿಕ-ಆರ್ಥಿಕತೆ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತಿದ್ದು, ವರ್ಷಕ್ಕೆ ಅಂದಾಜು 2.91ಲಕ್ಷ ಕೋಟಿ ರೂ. ನಷ್ಟ ಉಂಟಾ ಗುತ್ತಿದೆ.

Advertisement

ಇದು ದೇಶದ ಒಟ್ಟಾರೆ ಆಂತರಿಕ ವೃದ್ಧಿ (ಜಿಡಿಪಿ)ಯ ಶೇ. 0.55ರಿಂದ ಶೇ. 1.35ರಷ್ಟಾಗುತ್ತದೆ! ಬಾಷ್‌ ಇಂಡಿಯಾ ಕಂಪೆನಿಯ ರೋಡ್‌ ಆಕ್ಸಿಡೆಂಟ್‌ ಸ್ಯಾಂಪ್ಲಿಂಗ್‌ ಸಿಸ್ಟ್‌ಂ ಆಫ್ ಇಂಡಿಯಾ (ಆರ್‌ ಎಎಸ್‌ಎಸ್‌ಐ) ಈಚೆಗೆ ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳು ಮತ್ತು ಅದರಿಂದಾದ ಸಾಮಾ ಜಿಕ-ಆರ್ಥಿಕ ನಷ್ಟದ ಅಧ್ಯಯನ ನಡೆಸಿದ್ದು, ಈ ಸಂಬಂಧದ ವರದಿ ಬಿಡುಗಡೆಗೊಳಿಸಿದೆ. ಅದರಲ್ಲಿ ಈ ಅಚ್ಚರಿ ಅಂಶ ಬೆಳಕಿಗೆಬಂದಿದೆ.

ವಿಶ್ವದ ರಸ್ತೆ ಅಪಘಾತಗಳಲ್ಲಿ ಭಾರತದ ಪಾಲು ಶೇ. 11ರಷ್ಟಿದ್ದು, ಮೊದಲ ಸ್ಥಾನದಲ್ಲಿದೆ. 2019ರಲ್ಲಿ ದೇಶಾದ್ಯಂತ ನಡೆದ ವಿವಿಧ ಪ್ರಕಾರದ ರಸ್ತೆ ಅಪಘಾತಗಳಲ್ಲಿ 1.51 ಲಕ್ಷ ಜನ ಸಾವನ್ನಪ್ಪಿದ್ದಾರೆ. ಇದೆಲ್ಲವೂ ಸಾಮಾಜಿಕ-ಆರ್ಥಿಕ ನಷ್ಟದ ರೂಪದಲ್ಲಿ ಪರಿಣಮಿಸುತ್ತಿದ್ದು, ಒಂದೇ ವರ್ಷದಲ್ಲಿ 15.71ರಿಂದ 38.81 ಬಿಲಿಯನ್‌ ಡಾಲರ್‌ (2.91 ಲಕ್ಷ ಕೋಟಿ ರೂ.) ಆಗುತ್ತದೆ. ಇದು ದೇಶದ ಜಿಡಿಪಿಯ ಶೇ. 0.55ರಿಂದ ಶೇ. 1.35ರಷ್ಟು ಆಗುತ್ತದೆ ಎಂದು ತಿಳಿಸಿದೆ.

ಈ ನಷ್ಟವು ವ್ಯಕ್ತಿ ಅಥವಾ ಕಂಪೆನಿಯ ಉತ್ಪಾದಕತೆ, ಚಿಕಿತ್ಸಾ ವೆಚ್ಚ, ಜಖಂಗೊಂಡ ವಾಹನದ ರಿಪೇರಿ, ಸಂಚಾರದಟ್ಟಣೆಯಲ್ಲಿ ವ್ಯಯ ಆಗುವ ಸಮಯ, ಪರಿಹಾರ ಸೇರಿದಂತೆ ವಿವಿಧ ಪ್ರಕಾರಗಳನ್ನು ಈ ಸಾಮಾಜಿಕ-ಆರ್ಥಿಕ ನಷ್ಟವು ಒಳಗೊಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 2019ರಲ್ಲಿ ಸುಮಾರು 7,81,668 ವಾಹನಗಳು ರಸ್ತೆ ಅಪಘಾತಗಳಲ್ಲಿ ಜಖಂಡಗೊಂಡಿವೆ. ಇದರ ಮೊತ್ತ 1.81 ಬಿಲಿಯನ್‌ ಡಾಲರ್‌ ಆಗುತ್ತದೆ.

ಇದನ್ನೂ ಓದಿ:- ಚಿತ್ತಾಪುರ ಎಂಎಲ್‌ಎ ಸೋಲಿಸಲು ರಣತಂತ್ರ

Advertisement

ಇದು ವಾಣಿಜ್ಯ ವಾಹನಗಳು, ಕಾರು, ದ್ವಿಚಕ್ರ ವಾಹನಗಳು ಮತ್ತು ಬಸ್‌ಗಳನ್ನು ಒಳಗೊಂಡಿದೆ. ಇನ್ನು ರಸ್ತೆ ಅಪಘಾತಗಳಿಗೆ ತುತ್ತಾದವರ ಒಟ್ಟಾರೆ ವೈದ್ಯಕೀಯ ವೆಚ್ಚ ಈ ಅವಧಿಯಲ್ಲಿ 0.82ರಿಂದ 1.92 ಬಿಲಿಯನ್‌ ಡಾಲರ್‌ನಷ್ಟಾಗಿದೆ. ಇದೆಲ್ಲದರಿಂದ ಆ ಒಂದು ವರ್ಷದಲ್ಲಿ ಗಂಭೀರ ಗಾಯಗೊಂಡವರ ವೈದ್ಯಕೀಯ ವೆಚ್ಚ 123 ಮಿಲಿಯನ್‌ ಡಾಲರ್‌ ಹಾಗೂ ಸಣ್ಣಪುಟ್ಟ ಗಾಯಗಳ ಚಿಕಿತ್ಸೆಗೆ 14 ಮಿಲಿಯನ್‌ ಡಾಲರ್‌ ನಷ್ಟು ವ್ಯಯ ಆಗಿದೆ.

ಶಿಫಾರಸು: ಈ ಹಿನ್ನೆಲೆಯಲ್ಲಿ ನೀತಿ-ನಿರೂಪಕರು ರಸ್ತೆಗಳ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ತಾಂತ್ರಿಕ ಆವಿಷ್ಕಾರಗಳು, ಹೊಸ ನೀತಿಗಳು, ದತ್ತಾಂಶಗಳು ಮತ್ತು ವಾಸ್ತವಾಂಶಗಳು ಹಾಗೂ ಮೂಲಸೌಕರ್ಯಗಳ ನಡುವೆ ಇರುವ ಅಂತರ ಸರಿಪಡಿಸುವುದು, ರಸ್ತೆ ಸುಧಾರಣೆಗಳು ಸೇರಿದಂತೆ ಮತ್ತಿತರ ಪರಿಹಾರೋಪಾಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ರಾಬರ್ಟ್‌ ಬಾಷ್‌ ಎಂಜಿನಿಯರಿಂಗ್‌ ಮತ್ತು ಬ್ಯುಸಿನೆಸ್‌ ಸಲ್ಯುಷನ್ಸ್‌ನ ಭಾರತೀಯ ಅಪಘಾತ ಸಂಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಗಿರೀಶ್‌ ಕುಮಾರ್‌ ಕುಮಾರೇಶ್‌ ವರದಿ ಬಿಡುಗಡೆಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next