Advertisement

ಮಹಿಳಾ ಪ್ರಯಾಣಿಕರ ಸುರಕ್ಷೆಗೆ ರೈಲುಗಳಲ್ಲಿ panic button

11:22 AM May 16, 2018 | Team Udayavani |

ಲಕ್ನೋ : ಮಹಿಳಾ ರೈಲು ಪ್ರಯಾಣಿಕರ ಹೆಚ್ಚಿನ ಸುರಕ್ಷೆಗಾಗಿ ಭದ್ರತೆಯನ್ನು ಬಲಪಡಿಸುವುದಕ್ಕಾಗಿ ಈಶಾನ್ಯ ರೈಲ್ವೆ ತನ್ನ ರೈಲುಗಳಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸ್‌ ಸಿಬಂದಿಗಳನ್ನು ನಿಯೋಜಿಸಲು ಮತ್ತು ರೈಲಿನ ಕೋಚ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಗಳನ್ನು ಅಳವಡಿಸಲು ಉದ್ದೇಶಿಸಿದೆ. 

Advertisement

ಈಶಾನ್ಯ ರೈಲ್ವೆಯ  ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಜಯ್‌ ಯಾದವ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ “ಈಶಾನ್ಯ ರೈಲ್ವೆ ಈ ವರ್ಷ ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಗೆ ಆದ್ಯತೆ ನೀಡಿದ್ದು ಆ ಪ್ರಕಾರ ನಗರ ಹೊರವಲಯದ ರೈಲುಗಳಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರನ್ನು ನಿಯೋಜಿಸಲು ನೇಮಕಾತಿ ಮಾಡಲು ಉದ್ದೇಶಿಸಿದೆ ಎಂದು ಹೇಳಿದರು. 

ರೈಲುಗಳಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ತೊಂದರೆಯಾಗಿರುವ ಹಲವಾರು ದೂರುಗಳು ಬಂದಿರುವ ಕಾರಣ ರೈಲಿನ ಕೋಚ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಅಳವಡಿಸಲು ಕೂಡ ಉದ್ದೇಶಿಸಲಾಗಿದೆ; ಈ ಪ್ಯಾನಿಕ್‌ ಬಟನ್‌ಗಳು ಗಾರ್ಡ್‌ ಕೋಚ್‌ನೊಂದಿಗೆ ಸಂಪರ್ಕ ಹೊಂದಿರುತ್ತವೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next