Advertisement

ಕೂಡಲಸಂಗಮದೇವ ಅಂಕಿತನಾಮಕ್ಕೆ ಪಾಟೀಲ ಸಂತಸ

09:47 PM Dec 30, 2021 | Girisha |

ವಿಜಯಪುರ: ಲಿಂಗಾಯತ ಧರ್ಮ ಗುರು ಬಸವಣ್ಣನವರ ವಚನಾಂಕಿತ ಕೂಡಲ ಸಂಗಮದೇವ ಎಂದೇ ಬಳಸಬೇಕು ಎಂದು ಬಸವಧರ್ಮ ಪೀಠದ ಜಗದ್ಗುರು ಡಾ| ಗಂಗಾ ಮಾತಾಜಿ ತಿಳಿಸಿದ್ದಾರೆ. ಇದು ಸಮಸ್ತ ಲಿಂಗಾಯತ ಸಮಾಜಕ್ಕೆ ಸಂತಸ ತಂದಿದೆ ಎಂದು ಮಾಜಿ ಸಚಿವರಾದ ಶಾಸಕ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಿಳಿಸಿರುವ ಅವರು ಲಿಂಗಾಯತರ ಅಸ್ಮಿತೆಯನ್ನು ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗಂಗಾಮಾತಾಜಿ ಅವರ ಸಂದೇಶ ಲಿಂಗಾಯತರಿಗೆ ನೈತಿಕ ಬೆಂಬಲ ಹೆಚ್ಚಿಸಿದೆ. ಕೂಡಲಸಂಗಮದೇವ ಅಂಕಿತನಾಮ ಬಳಕೆಯಿಂದ ಬಸವಪರ ಸಂಘಟನೆಗಳಲ್ಲಿ ಉಂಟಾಗಿದ್ದ ಗೊಂದಲಕ್ಕೆ ಸ್ಪಷ್ಟತೆ ದೊರಕಿದಂತಾಗಿದೆ ಎಂದರು.

ಈ ಹಿಂದೆ ಕಲಬುರಗಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಮಾತೆ ಮಹಾದೇವಿ ಅವರಿಗೆ ನಾನು ಈ ಕುರಿತು ವಿನಂತಿ ಮಾಡಿಕೊಂಡಿದ್ದೆ. ಅದಕ್ಕೆ ಮಾತಾಜಿ ಸಕಾರಾತ್ಮಕವಾಗಿ Óಂದ³ ‌ನೆ ನೀಡಿದ್ದರು. ಇಂದು ಅಧಿಕೃತವಾಗಿ ಅವರ ಪೀಠದಿಂದ ಡಾ| ಗಂಗಾಮಾತಾಜಿ ಹೇಳಿಕೆ ನೀಡಿರುವುದು ಸಂತಸದ ತಂದಿದೆ. ಸಮಸ್ತ ಲಿಂಗಾಯತ ಸಮುದಾಯದ ಪರವಾಗಿ ಹೃದಯಪೂರ್ವಕವಾಗಿ ಡಾ| ಗಂಗಾ ಮಾತಾಜಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಂ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next