Advertisement

Delhi Capitals ತಂಡಕ್ಕೆ ನಾಯಕನಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ ರಿಷಭ್ ಪಂತ್

09:38 AM Dec 12, 2023 | Team Udayavani |

ಹೊಸದಿಲ್ಲಿ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಕಳೆದ ವರ್ಷದ ಡಿಸೆಂಬರ್ ನಲ್ಲಿ ಅಪಘಾತಕ್ಕೆ ಒಳಗಾಗಿ ಇದೀಗ ಚೇತರಸಿಕೊಳ್ಳುತ್ತಿದ್ದಾರೆ. ಕಳೆದೊಂದು ವರ್ಷದಿಂದ ಆರೋಗ್ಯ ಸುಧಾರಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಪಂತ್ ಈ ಬಾರಿಯ ಐಪಿಎಲ್ ನಲ್ಲಿ ಆಡಲಿದ್ದಾರೆ ಎಂಬ ಮಾಹಿತಿ ಈಗಾಗಲೇ ಹೊರಬಿದ್ದಿತ್ತು. ಈಗ ಅದು ಖಚಿತವಾಗಿದೆ.

Advertisement

ಈ ಬಾರಿಯ ಐಪಿಎಲ್ ನಲ್ಲಿ ರಿಷಭ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕ್ ಬಜ್ ವರದಿ ತಿಳಿಸಿದೆ.

ಪಂತ್ ಅವರ ಚೇತರಿಕೆಯ ಬಗ್ಗೆ ಡಿಸಿ ಆಡಳಿತವು ನಿಕಟವಾಗಿ ಕಣ್ಣಿಟ್ಟಿದೆ. ಫೆಬ್ರವರಿ ಅಂತ್ಯದ ವೇಳೆಗೆ ಕ್ಯಾಪ್ಟನ್ ಸಂಪೂರ್ಣವಾಗಿ ಫಿಟ್ ಆಗುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರಸ್ತುತ, ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ರಿಹ್ಯಾಬ್‌ ಗೆ ಒಳಗಾಗಿದ್ದಾರೆ. ನವೆಂಬರ್‌ ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಡಿಸಿ ಟ್ರಯಲ್ಸ್‌ ನಲ್ಲಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರೊಂದಿಗೆ ಪಂತ್ ಕಾಣಿಸಿಕೊಂಡಿದ್ದರು.

ಐಪಿಎಲ್ 2023 ರಲ್ಲಿ ಪಂತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರನ್ನು ನಾಯಕನಾಗಿ ನೇಮಿಸಲಾಗಿತ್ತು. ಕಳೆದ ಋತುವಿನಲ್ಲಿ ತಂಡವು ಪ್ಲೇ ಆಫ್ ತಲುಪಲು ವಿಫಲವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next