Advertisement

ರಿಶಭ್ ಪಂತ್ ಮನಗೆದ್ದ ಸುಂದರಿ ಯಾರಿವಳು?

11:57 AM Jan 17, 2019 | |

ಹೊಸದಿಲ್ಲಿ: ಭಾರತೀಯ ಟೆಸ್ಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಶಭ್ ಪಂತ್ ಇತ್ತೀಚೆಗೆ ತನ್ನ ಬ್ಯಾಟಿಂಗ್ ಗಿಂತ ಬೇರೆ ವಿಷಯಗಳಲ್ಲೇ ಅತೀ ಹೆಚ್ಚು ಸುದ್ದಿಯಲ್ಲಿರುತ್ತಿದ್ದಾರೆ. ಸದ್ಯ ಪಂತ್ ಸುದ್ದಿಯಾಗುತ್ತಿರುವುದು ಒಂದು ಹುಡುಗಿ ವಿಷಯಕ್ಕೆ !

Advertisement

21ರ ಹರೆಯದ ಪಂತ್ ಇದೇ ಮೊದಲ ಬಾರಿಗೆ ಹುಡುಗಿ ಜೊತೆ ಕಾಣಿಸಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯ ಫೋಟೋ ಪೋಸ್ಟ್ ಮಾಡಿರುವ ಪಂತ್, ನಾನು ನಿನ್ನನ್ನು ಸಂತೋಷಪಡಿಸಿಲು ಬಯಸುತ್ತೇನೆ. ಯಾಕೆಂದರೆ ನಾನು ಖುಷಿಯಾಗಿರುವುದೇ ನಿನ್ನಿಂದ ಎಂದು ಬರೆದು ಕೊಂಡಿದ್ದಾರೆ. 

ಯಾರು ಆ ಹುಡುಗಿ?


ಪಂತ್ ಜೊತೆಗಿರುವ ಹುಡುಗಿಯ ಹೆಸರು ಇಶಾ ನೇಗಿ. ಇಂಟೀರಿಯರ್ ಡೆಕೋರ್ ಡಿಸೈನರ್ ( ಒಳಾಂಗಣ ಅಲಂಕಾರ ವಿನ್ಯಾಸ) ಆಗಿರುವ ಇಶಾ ಕೂಡಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪಂತ್ ಜೊತೆಗಿರುವ ಫೋಟೋ ಹಾಕಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next