Advertisement

Delhi Capitals ತಂಡ ತೊರೆಯುವತ್ತ ರಿಷಭ್ ಪಂತ್; ಕೀಪರ್ ಖರೀದಿಗೆ ಮುಂದಾದ ಯಶಸ್ವಿ ಟೀಮ್

03:33 PM Jul 20, 2024 | Team Udayavani |

ಹೊಸದಿಲ್ಲಿ: 2025ರ ಐಪಿಎಲ್ ಗೆ (Indian Premier League) ಇನ್ನು ಕೆಲವು ತಿಂಗಳು ಬಾಕಿಯಿದ್ದರೂ ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಬರುತ್ತಿದೆ. ಕೆಲವು ತಂಡಗಳು ಕೋಚ್ ಬದಲಾವಣೆಯಂತಹ ವಿಚಾರಗಳು ಚರ್ಚೆಯಲ್ಲಿದೆ. ಮತ್ತೊಂದೆಡೆ ಕೆಲ ಆಟಗಾರರು ತಾವಿದ್ದ ತಂಡದಿಂದ ಬೇರೆ ತಂಡಕ್ಕೆ ಹಾರಲು ಸಿದ್ದರಾಗಿದ್ದಾರೆ ಎಂಬ ವರದಿಗಳು ಬರುತ್ತಿದೆ. ಇದಕ್ಕೆ ಹೊಸ ಹೆಸರು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಾಯಕ ರಿಷಭ್ ಪಂತ್.

Advertisement

ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ ತೊರೆಯಬಹುದು ಎಂದು ದೈನಿಕ್ ಜಾಗರನ್ ವರದಿ ಮಾಡಿದೆ. ಪಂತ್ ಪ್ರಸ್ತುತ ಫ್ರಾಂಚೈಸಿಗಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಆಟಗಾರ ಮತ್ತು ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರ ಬೆಂಬಲದ ಹೊರತಾಗಿಯೂ ಮೆಗಾ ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿ ಪಂತ್ ಅವರನ್ನು ಉಳಿಸಿಕೊಳ್ಳುವುದಿಲ್ಲ ಎಂದು ವರದಿ ಹೇಳಿದೆ.

ಪಂತ್ ಅವರನ್ನು ಡೆಲ್ಲಿ ಫ್ರಾಂಚೈಸಿ ಬಿಡುಗಡೆ ಮಾಡಿದರೆ, ಅವರು ಐಪಿಎಲ್ ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ಹೇಳಿದೆ. ಸಿಎಸ್ ಕೆ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ ಮುಂದಿನ ದಿನಗಳಲ್ಲಿ ನಿವೃತ್ತಿ ಹೊಂದಲಿರುವುದರಿಂದ, ತಂಡವು ಭಾರತೀಯ ವಿಕೆಟ್-ಕೀಪರ್ ಬ್ಯಾಟರ್‌ ಗಾಗಿ ಹುಡುಕಾಟದಲ್ಲಿದೆ. ಹೀಗಾಗಿ ರಿಷಭ್ ಪಂತ್‌ ನಂತಹ ಪ್ರತಿಭಾವಂತ ಭಾರತೀಯ ತಾರೆಯನ್ನು ಸಹಿ ಮಾಡಲು ಅವರು ಹೆಚ್ಚು ಆಸಕ್ತಿ ವಹಿಸುತ್ತಾರೆ.

Advertisement

2016ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿರುವ ರಿಷಭ್ ಪಂತ್, 112 ಪಂದ್ಯಗಳನ್ನಾಡಿ 3284 ರನ್ ಗಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಡೆಲ್ಲಿ ಫ್ರಾಂಚೈಸಿಯು ರಿಕಿ ಪಾಂಟಿಂಗ್ ಅವರನ್ನು ಹೆಡ್ ಕೋಚ್ ಸ್ಥಾನದಿಂದ ತೆಗೆದು ಹಾಕಿತ್ತು. ಆರು ವರ್ಷದಿಂದ ಡಿಸಿ ಮುಖ್ಯ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಅವರಿಗೆ ವಿದಾಯ ಹೇಳಿದ ಡಿಸಿ ಹೊಸ ಕೋಚ್ ನೇಮಕ ಮಾಡುವುದರಲ್ಲಿದೆ. ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ಮುಂದಿನ ಕೋಚ್ ಆಗುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next