ಮುಂಬೈ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಭಾರತೀಯ ಕ್ರಿಕೆಟಿರ್ ರಿಷಭ್ ಪಂತ್ ಅವರ ಆರೋಗ್ಯದ ಕುರಿತಾಗಿ ವರದಿಗಳು ಬರುತ್ತಿದೆ. ರವಿವಾರದ ವರದಿಯ ಪ್ರಕಾರ ರಿಷಭ್ ಪಂತ್ ಅವರು ಈ ವರ್ಷದ ಐಪಿಎಲ್ ಮಾತ್ರವಲ್ಲದೆ ಮುಂದಿನ ವರ್ಷದ ಐಪಿಎಲ್ ಗೂ ಅಲಭ್ಯರಾಗುವ ಸಾದ್ಯತೆಯಿದೆ ಎನ್ನಲಾಗಿದೆ.
ಡಿಸೆಂಬರ್ 30 ರಂದು ಉತ್ತರಾಖಂಡ್ ನಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಪಂತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಮೊದಲು ಡೆಹ್ರಾಡೂನ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಯಿತು, ಅಲ್ಲಿ ಅವರು ತಮ್ಮ ಮೊಣಕಾಲಿನ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾದರು.
ಇದನ್ನೂ ಓದಿ:ಮಾಧ್ಯಮ ಸಂಸ್ಥೆಗಳ ಮೇಲೆ ಬಿಜೆಪಿ ಸರ್ಕಾರ ಯಾವುದೇ ನಿಷೇಧ ಹೇರಿಲ್ಲ: ರಾಜನಾಥ್ ಸಿಂಗ್
ಪಂತ್ ಅವರಿಗೆ ಸಾಕಷ್ಟು ಚೇತರಿಸಿಕೊಳ್ಳಲು ಇನ್ನೂ ತುಂಬಾ ಸಮಯ ಬೇಕಾಗಬಹುದು. ಹೀಗಾಗಿ 18 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕ್ರಿಕೆಟ್ ಕಳೆದು ಕೊಳ್ಳಬಹುದು ಎಂದು ವರದಿಯಾಗಿದೆ.
ಒಂದು ವೇಳೆ ಹೀಗಾದರೆಈ ವರ್ಷದ ಐಪಿಎಲ್, ಏಷ್ಯಾ ಕಪ್, 50 ಓವರ್ ವಿಶ್ವಕಪ್, ಮುಂದಿನ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್, 2024ರ ಐಪಿಎಲ್ ಮತ್ತು ಮುಂದಿನ ವರ್ಷ ಜೂನ್ ನಲ್ಲಿ ನಡೆಯುವ ಟಿ20 ವಿಶ್ವಕಪ್ ನಿಂದ ಅವರು ಹೊರಬೀಳುವ ಸಾಧ್ಯತೆಯಿದೆ.