Advertisement

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್‌

08:58 AM Jun 25, 2022 | Team Udayavani |

ಚಿತ್ರರಂಗದಲ್ಲಿ ಬೆಳೆಯಬೇಕು, ಹೆಸರು ಮಾಡಬೇಕು ಎಂಬ ಕನ ಸಿ ನಿಂದ ಬರುವ ಯುವಕರ ಬದುಕು ಯಾವುದೇ ಸಿನಿಮಾ ಕಥೆಗಳಿಂತ ಕಮ್ಮಿಯೇನು ಇರುವುದಿಲ್ಲ. ಹಾಗೆಯೇ ಕನ್ನಡ ಸಿನಿಮಾದಲ್ಲಿ ನಾಯಕನೊಬ್ಬ ಚಿತ್ರ ನಿರ್ದೇಶಕನಾಗುವ ಎಳೆಯ ಕಥೆಗಳು ಸಾಕಷ್ಟು ಬಂದಿವೆ. ಅಂತಹದ್ದೇ ಒಂದು ಕಥೆಯ ಎಳೆಯೊಂದಿಗೆ ವಿಭಿನ್ನ ರೀತಿಯಲ್ಲಿ ಮೂಡಿ ಬಂದಿರುವ ಹಾಸ್ಯಮಯ ಚಿತ್ರ “ಹರಿಕಥೆ ಅಲ್ಲ ಗಿರಿಕಥೆ.’

Advertisement

ಚಿತ್ರರಂಗದಲ್ಲಿ ತಂದೆ ಒಂದು ದೊಡ್ಡ ಹೆಸರು. ಆದರೆ ತಂದೆ ಪೂರೈಸಲಾಗದ ಸ್ವತಂತ್ರ ನಿರ್ದೇಶಕನಾಗುವ ಕನಸನ್ನು ಹೊತ್ತ ಮಗ. ಒಂದು ಸೂಪರ್‌ ಹಿಟ್‌ ಚಿತ್ರ ನೀಡಿ, ನಿರ್ದೇಶಕನಾಗುವ ಆಸೆ ಹೊತ್ತ ಗಿರಿ ಕೃಷ್ಣ ಒಂದು ಕಡೆ ಯಾ ದರೆ, ಸಿನಿಮಾದಲ್ಲಿ ದೊಡ್ಡ ವಿಲನ್‌ ಆಗಿ ಗುರುತಿಸಿಕೊಳ್ಳುವ ಹಂಬಲದ ವಿಲನ್‌ ಗಿರಿ ಮತ್ತೂಂದೆಡೆ. ಅಭಿನಯದಲ್ಲಿ ಮಿಂಚಿ ಸ್ಟಾರ್‌ ನಟಿಯಾಗಬೇಕು ಎಂದು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿರುವ ಗಿರಿ(ಜಾ)ಳದ್ದು ಇನ್ನೊಂದು ಟ್ರ್ಯಾಕ್‌. ಈ ಮೂವರು ಗಿರಿಗಳು ಒಂದಾಗುವ ಬಗೆ ಹೇಗೆ? ನಿರ್ದೇಶಕನಾಗೋ ಕನಸು, ಆಸೆ, ಛಲ ಹೊತ್ತ ನಾಯಕ ತನ್ನ ಗುರಿಯನ್ನು ಸಾಧಿಸುತ್ತಾನಾ? ಅದು ಹೇಗೆ? ಇವರು ಸಿನಿಮಾ ಮಾಡ್ತಾರಾ? ಎನ್ನುವ ಪ್ರಶ್ನೆಗೆ ಉತ್ತರ ಬೇಕೆಂದರೆ ಚಿತ್ರ ನೋಡಲೇ ಬೇಕು.

ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಸಾಧನೆಯ ಆಸೆ ಹೊತ್ತ ಯುವಕರ ಹೋರಾಟದ ಕಥೆ. ಆದರೆ ಚಿತ್ರದಲ್ಲಿ ಹಾಸ್ಯ ಕಮಾಲ್‌ ಮಾಡಿದೆ. ಸರಳ ಕಥೆ, ನಿರೂಪಣೆಯ ಈ ಚಿತ್ರಕ್ಕೆ ಹಾಸ್ಯವೇ ಹೈಲೈಟ್‌ ಆಗಿದೆ. ಇನ್ನು ಚಿತ್ರದಲ್ಲಿ ಬರುವ ಕೆಲವು ಸೆಂಟಿಮೆಂಟ್‌ ದೃಶ್ಯಗಳು ಕಾಮಿಡಿಗೆ ಬ್ರೇಕ್‌ ಹಾಕಿದೆ ಅನಿಸಿದರೂ ಅದು ಕಥೆಗೆ ಪೂರಕವಾಗಿದೆ. ಸಣ್ಣ ಪುಟ್ಟ ಅಡೆತಡೆಗಳನ್ನು ದಾಟಿ, ನೋಡುಗರಿಗೆ ಮನರಂಜನೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಚಿತ್ರದಲ್ಲಿನ ರಿಷಭ್‌ ಶೆಟ್ಟಿ ಅವರ ಪಾತ್ರ ಹಾಗೂ ನಟನೆ ನೋಡುಗರ ಗಮನ ಸೆಳೆಯುವಂತಿದೆ. ರಚನಾ ಇಂದರ್‌ ಹಾಗೂ ತಪಸ್ವಿ ನಾಯಕಿಯರಿಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟಾಗಿ ನಿಭಾಯಿಸಿದ್ದಾರೆ.

ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಪಾತ್ರ ಚಿತ್ರಕ್ಕೆ ತೂಕ ನೀಡುವಂತಾಗಿದ್ದು, ರಿಷಭ್‌ ಹಾಗೂ ಪ್ರಮೋದ್‌ ಶೆಟ್ಟಿ ಜೋಡಿಯ ಕಾಮಿಡಿ ಇಲ್ಲಿ ಕಮಾಲ್‌ ಮಾಡಿದೆ. ಚಿತ್ರದ 5ಡಿ ಥಾಮಸ್‌, ಮೊಬೈಲ್‌ ರಘು, ಹಾಗೂ ಇತರೆ ಪಾತ್ರಗಳು ಚಿತ್ರದ ವಿಭಿನ್ನ ಪಯಣಕ್ಕೆ ಸಾಥ್‌ ನೀಡಿದೆ. ನಿರ್ದೇಶಕರಾದ ಕರಣ್‌ ಅನಂತ್‌ ಹಾಗೂ ಅನಿರುದ್ಧ ಮಹೇಶ್‌ ಅವರು ಚೊಚ್ಚಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ

Advertisement

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next