Advertisement

Kantara 2: ವರ್ಷಾಂತ್ಯಕ್ಕೆ ʼಕಾಂತಾರ-2ʼ ಶೂಟಿಂಗ್‌ ಆರಂಭ.. ಇಲ್ಲಿದೆ ಕುತೂಹಲಕಾರಿ ಮಾಹಿತಿ

06:24 PM Oct 09, 2023 | Team Udayavani |

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ʼಕಾಂತಾರʼ ಸಿನಿಮಾದ ಎರಡನೇ ಭಾಗದ ಅಪ್ಡೇಟ್‌ ವೊಂದು ಹೊರಬಿದ್ದಿದೆ. 2022 ರಲ್ಲಿ ಬಂದ ʼಕಾಂತಾರʼ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಮಾಯಿ ಮಾಡುವುದರ ಜೊತೆಗೆ ಇತರ ಭಾಷೆಗೆ ಡಬ್‌ ಆಗಿ ದೇಶ, ವಿದೇಶದಲ್ಲಿ ಸದ್ದು ಮಾಡಿತ್ತು.

Advertisement

ಹೊಂಬಾಳೆ ನಿರ್ಮಾಣದ ʼಕಾಂತಾರʼ ದ ಪ್ರೀಕ್ವೆಲ್‌ ಅಂದರೆ ಎರಡನೇ ಭಾಗ ರಿಲೀಸ್‌ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಸಿನಿಮಾದ  ಸಿನಿಮಾದ ಪ್ರೀ ಪ್ರೊಡಕ್ಷನ್‌ ಕೆಲಸ ಭರದಿಂದ ಸಾಗುತ್ತಿದೆ.

‘ಕಾಂತಾರ 2’ ಚಿತ್ರೀಕರಣ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. ರಿಷಬ್ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಮೊದಲ ಭಾಗಕ್ಕಿಂತ ಈ ಸಿನಿಮಾ ದೊಡ್ಡ ಪ್ರಮಾಣದಲ್ಲಿ ಮೂಡಿಬರಲಿದೆ. ಎರಡನೇ ಭಾಗದಲ್ಲಿ ಹೆಚ್ಚಿನ ಸಾಹಸ ದೃಶ್ಯಗಳನ್ನು ನಿರೀಕ್ಷಿಸಬಹುದು. ಮೂರು ಹಂತಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಆಗಸ್ಟ್ 2024 ರ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಚಿತ್ರದ ಎರಡನೇ ಭಾಗಕ್ಕಾಗಿ ರಿಷಬ್ ಶೆಟ್ಟಿ ಹೆಚ್ಚಿನ ದೈಹಿಕ ತರಬೇತಿಯನ್ನು ಪಡೆದಿದ್ದಾರೆ. ಚಿತ್ರದ ಸ್ಕ್ರಿಪ್ಟ್ ನ್ನು 2023 ರ ಮೊದಲಾರ್ಧದಲ್ಲಿ ಪೂರ್ತಿಗೊಳಿಸಲಾಗಿದೆ ಎಂದು ಹೊಂಬಾಳೆ ಫಿಲಂಸ್‌ನ ಚಲುವೇಗೌಡ ʼಇಂಡಿಯಾ ಟುಡೇʼಗೆ ಹೇಳಿರುವುದಾಗಿ ವರದಿ ತಿಳಿಸಿದೆ.

‘ಕಾಂತಾರ’ದಲ್ಲಿ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next