Advertisement

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

08:42 AM Apr 25, 2024 | Team Udayavani |

ಹೊಸದಿಲ್ಲಿ: ರಿಷಭ್‌ ಪಂತ್‌ ಮತ್ತು ಅಕ್ಷರ್‌ ಪಟೇಲ್‌ ಅವರ ಆಕರ್ಷಕ ಅರ್ಧಶತಕದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು 4 ವಿಕೆಟ್‌ಗಳಿಂದ ರೋಮಾಂಚಕವಾಗಿ ಸೋಲಿಸಿತು.

Advertisement

ಪಂತ್‌ ಮತ್ತು ಅಕ್ಷರ್‌ ಅವರ ಅರ್ಧ ಶತಕದಿಂದಾಗಿ ಡೆಲ್ಲಿ ತಂಡವು 4 ವಿಕೆಟಿಗೆ 224 ರನ್ನುಗಳ ದೊಡ್ಡ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಸಾಯಿ ಸುದರ್ಶನ್‌ ಮತ್ತು ಡೇವಿಡ್‌ ಮಿಲ್ಲರ್‌ ಅವರ ಅರ್ಧಶತಕದ ಹೊರತಾಗಿಯೂ ಗುಜರಾತ್‌ ತಂಡವು 8 ವಿಕೆಟಿಗೆ 220 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಸಾಯಿ ಸುದರ್ಶನ್‌ ಅವರ ಅಧಶತಕ ಮತ್ತು ಅವರು ವೃದ್ಧಿಮಾನ್‌ ಸಾಹಾ ಅವರೊಂದಿಗೆ ದ್ವಿತೀಯ ವಿಕೆಟಿಗೆ ಸೇರಿಸಿದ 82 ರನ್ನುಗಳ ಜತೆಯಾಟದ ಆಟದಿಂದಾಗಿ ಗುಜರಾತ್‌ ಗೆಲುವು ದಾಖಲಿಸಲು ಶಕ್ತಿಮೀರಿ ಪ್ರಯತ್ನಿಸಿತು.

ಅಂತಿಮ ಓವರಿನಲ್ಲಿ ತಂಡ ಗೆಲ್ಲಲು 19 ರನ್‌ ತೆಗೆಯಬೇಕಾಗಿತ್ತು. ಮುಕೇಶ್‌ ಕುಮಾರ್‌ ಎಸೆದ ಈ ಓವರಿನಲ್ಲಿ ರಶೀದ್‌ ಖಾನ್‌ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ ಹೊಡೆದರೂ ತಂಡ ಸ್ವಲ್ಪದರಲ್ಲಿ ಗೆಲುವಿನಿಂದ ದೂರವೇ ಉಳಿಯಿತು. ಇನ್ನುಳಿದ ಮೂರು ಎಸೆತಗಳಲ್ಲಿ ಯಾವುದೇ ರನ್‌ ಬಾರದ ಕಾರಣ ಗುಜರಾತ್‌ ಸೋಲು ಕಾಣುವಂತಾಯಿತು.

ಡೆಲ್ಲಿಯ ಬ್ಯಾಟಿಂಗ್‌ ಸಾಹಸ
ಒಂದು ಹಂತದಲ್ಲಿ ತಂಡದ 3 ವಿಕೆಟ್‌ 44 ರನ್ನಿಗೆ ಉದುರಿತ್ತು. ಬಳಿಕ ಒಂದೇ ವಿಕೆಟ್‌ ಕಳೆದುಕೊಂಡು 180 ರನ್‌ ಪೇರಿಸಿದ್ದು ಡೆಲ್ಲಿಯ ಬ್ಯಾಟಿಂಗ್‌ ಸಾಹಸಕ್ಕೆ ಸಾಕ್ಷಿ ಯಾಯಿತು. ಪಂತ್‌ ಔಟಾಗದೆ 88 ರನ್‌ ಬಾರಿಸಿದರು. 43 ಎಸೆತಗಳ ಈ ಬಿರುಸಿನ ಆಟದಲ್ಲಿ 8 ಸಿಕ್ಸರ್‌, 5 ಫೋರ್‌ ಒಳಗೊಂಡಿತ್ತು.
ಭಡ್ತಿ ಪಡೆದು ಬಂದ ಅಕ್ಷರ್‌ ಪಟೇಲ್‌ ಇದರ ಭರಪೂರ ಲಾಭವೆತ್ತಿದರು. 43 ಎಸೆತ ಗಳಿಂದ 66 ರನ್‌ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 5 ಫೋರ್‌, 4 ಸಿಕ್ಸರ್‌. ಟ್ರಿಸ್ಟನ್‌ ಸ್ಟಬ್ಸ್ 7 ಎಸೆತಗಳಿಂದ 26 ರನ್‌ ಮಾಡಿ ಔಟಾಗದೆ ಉಳಿದರು (3 ಬೌಂಡರಿ, 2 ಸಿಕ್ಸರ್‌). ಪಂತ್‌-ಸ್ಟಬ್ಸ್ ಕೊನೆಯ 3 ಓವರ್‌ಗಳಲ್ಲಿ 67 ರನ್‌ ಸೂರೆಗೈದರು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಪವರ್‌ ಪ್ಲೇ ಒಳಗಾಗಿ 3 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ಈ ಮೂರೂ ವಿಕೆಟ್‌ ಗಳನ್ನು ಸಂದೀಪ್‌ ವಾರಿಯರ್‌ ಉರುಳಿಸಿದರು. ಪೃಥ್ವಿ ಶಾ (11), ಜೇಕ್‌ ಫ್ರೆàಸರ್‌ ಮೆಕ್‌ಗರ್ಕ್‌ (23) ಮತ್ತು ಶೈ ಹೋಪ್‌ (6) ಒಬ್ಬರ ಹಿಂದೊಬ್ಬರಂತೆ ಪೆವಿಲಿ ಯನ್‌ ಸೇರಿಕೊಂಡರು. ಇವರಲ್ಲಿ ಮೆಕ್‌ಗರ್ಕ್‌ ಸಿಡಿಯವ ಸೂಚನೆ ಯನ್ನೇನೋ ನೀಡಿದರು. ಆದರೆ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಅವರ 23 ರನ್‌ 14 ಎಸೆತಗಳಿಂದ ಬಂತು. ಸಿಡಿಸಿದ್ದು 2 ಬೌಂಡರಿ, 2 ಸಿಕ್ಸರ್‌.

Advertisement

ಸಂದೀಪ್‌ ವಾರಿಯರ್‌ ಈ ಸೀಸನ್‌ನ ಪವರ್‌ ಪ್ಲೇಯಲ್ಲಿ 3 ವಿಕೆಟ್‌ ಕೆಡವಿದ 2ನೇ ಸಾಧಕ. ಟ್ರೆಂಟ್‌ ಬೌಲ್ಟ್ ಮುಂಬೈ ವಿರುದ್ಧ 14 ರನ್ನಿಗೆ 3 ವಿಕೆಟ್‌ ಹಾರಿಸಿದ್ದರು.
ಮೆಕ್‌ಗರ್ಕ್‌ ವಿಕೆಟ್‌ ಬೇಗನೇ ಉರುಳಿದ್ದರಿಂದ ಅಕ್ಷರ್‌ ಅವರನ್ನು ಒನ್‌ಡೌನ್‌ನಲ್ಲಿ ಆಡಿಸಲಾಯಿತು. ನಾಯಕ ಪಂತ್‌ 5ನೇ ಕ್ರಮಾಂಕದಲ್ಲಿ ಬಂದರು. ಇವರಿಬ್ಬರು ಸೇರಿಕೊಂಡು ಡೆಲ್ಲಿ ಮೊತ್ತವನ್ನು ಏರಿಸುತ್ತ ಹೋದರು. ಶತಕದ ಜತೆಯಾಟ ದಾಖಲಿಸಿ ಗುಜರಾತ್‌ ಬೌಲರ್‌ಗಳಿಗೆ ಬೆವರಿಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ನೂರ್‌ ಬಿ ವಾರಿಯರ್‌ 11
ಜೇಕ್‌ ಮೆಕ್‌ಗರ್ಕ್‌ ಸಿ ನೂರ್‌ ಬಿ ವಾರಿಯರ್‌ 23
ಅಕ್ಷರ್‌ ಪಟೇಲ್‌ ಸಿ ಸಾಯಿ ಕಿಶೋರ್‌ ಬಿ ಅಹ್ಮದ್‌ 66
ಶೈ ಹೋಪ್‌ ಸಿ ರಶೀದ್‌ ಬಿ ವಾರಿಯರ್‌ 5
ರಿಷಭ್‌ ಪಂತ್‌ ಔಟಾಗದೆ 88
ಟ್ರಿಸ್ಟನ್‌ ಸ್ಟಬ್ಸ್ ಔಟಾಗದೆ 26
ಇತರ 5
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 224
ವಿಕೆಟ್‌ ಪತನ: 1-35, 2-36, 3-44, 4-157.
ಬೌಲಿಂಗ್‌: ಅಜ್ಮತುಲ್ಲ ಒಮರ್‌ಜಾಯ್‌ 4-0-33-0
ಸಂದೀಪ್‌ ವಾರಿಯರ್‌ 3-0-15-3
ರಶೀದ್‌ ಖಾನ್‌ 4-0-35-0
ನೂರ್‌ ಅಹ್ಮದ್‌ 3-0-36-1
ಮೋಹಿತ್‌ ಶರ್ಮ 4-0-73-0
ಶಾರುಖ್‌ ಖಾನ್‌ 1-0-8-0
ಆರ್‌. ಸಾಯಿ ಕಿಶೋರ್‌ 1-0-22-0

ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಪಟೇಲ್‌ ಬಿ ಕುಲದೀಪ್‌ 39
ಶುಭ್‌ಮನ್‌ ಗಿಲ್‌ ಸಿ ಪಟೇಲ್‌ ಬಿ ನೋರ್ಜೆ 6
ಸಾಯಿ ಸುದರ್ಶನ್‌ ಸಿ ಪಟೇಲ್‌ ಬಿ ಸಲಮ್‌ 65
ಅಜ್ಮತುಲ್ಲ ಒಮರ್‌ಜಾಯ್‌ ಸಿ ಮೆಕ್‌ಗುರ್ಕ್‌ ಬಿ ಪಟೇಲ್‌ 1
ಡೇವಿಡ್‌ ಮಿಲ್ಲರ್‌ ಸಿ ಸಲಮ್‌ ಬಿ ಮುಕೇಶ್‌ 55
ಶಾರೂಖ್‌ ಖಾನ್‌ ಸಿ ಪಂತ್‌ ಬಿ ಸಲಮ್‌ 8
ರಾಹುಲ್‌ ತೆವಾಟಿಯ ಸಿ ಪಂತ್‌ ಬಿ ಕುಲದೀಪ್‌ 4
ರಶೀದ್‌ ಖಾನ್‌ ಔಟಾಗದೆ 21
ಸಾಯಿ ಕಿಶೋರ್‌ ಬಿ ರಸಿಖ್‌ ಸಲಮ್‌ 13
ಮೋಹಿತ್‌ ಶರ್ಮ ಔಟಾಗದೆ 0
ಇತರ: 8
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 220
ವಿಕೆಟ್‌ ಪತನ: 1-13, 2-95, 3-98, 4-121, 5-139, 6-152, 7-181, 8-206
ಬೌಲಿಂಗ್‌: ಖಲೀಲ್‌ ಅಹ್ಮದ್‌ 2-0-26-0
ಆ್ಯನ್ರಿಚ್‌ ನೋರ್ಜೆ 3-0-48-1
ರಸಿಖ್‌ ಸಲಮ್‌ 4-0-44-3
ಮುಕೇಶ್‌ ಕುಮಾರ್‌ 4-0-41-1
ಅಕ್ಷರ್‌ ಪಟೇಲ್‌ 3-0-28-1
ಕುಲದೀಪ್‌ ಯಾದವ್‌ 4-0-29-2
ಪಂದ್ಯಶ್ರೇಷ್ಠ: ರಿಷಭ್‌ ಪಂತ್‌

Advertisement

Udayavani is now on Telegram. Click here to join our channel and stay updated with the latest news.

Next