ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಮಾತನಾಡಿ, ಐದು ದಶಕಗಳ ಹಿಂದಿನಿಂದಲೂ ಈ ಪ್ರವೃತ್ತಿ ಕಂಡುಬಂದಿದೆ. ಇಲ್ಲಿನ ದೇವಸ್ಥಾನಗಳಲ್ಲಿ ನಡೆದ ವಾಣಿಜ್ಯ ವಾಹನಗಳ ಪೂಜೆಯ ನಂತರ ಮುಂದಿನ ವರ್ಷಗಳಲ್ಲಿ ಒಂದಕ್ಕೆರಡು ವಾಹನಗಳಾಗುತ್ತವೆ. ಆಕಸ್ಮಿಕಗಳು, ಅವಘಡಗಳು ಆಗುವುದಿಲ್ಲ. ವಾಹನ ಮಾಲೀಕರಿಗೆ ಶ್ರೇಯಸ್ಸಾಗುತ್ತದೆ ಎಂಬ ನಂಬಿಕೆಯಿದೆ. ಅದು ನಿಜವಾಗುತ್ತಿರುವುದರಿಂದಲೇ ಈ ಸಮಯದ ಪೂಜೆಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
Advertisement
ಇದನ್ನೂ ಓದಿ:- ಕಾನೂನು ಸಮ ಸಮಾಜದ ಶಕ್ತಿ: ಬಸವಪ್ರಭು ಶ್ರೀಈ ಹಿಂದೆ ಇದೇ ದೇವಸ್ಥಾನಗಳಲ್ಲಿ ಅವತ್ತಿನ ಎತ್ತಿನ ಗಾಡಿಗಳ ಪೂಜೆ ನಡೆಯುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಬೈಕ್ ಹಾಗೂ ಕಾರು, ಟ್ರಕ್, ಜೀಪ್ ಮೊದಲಾದವುಗಳ ಪೂಜೆ ನಡೆಯುತ್ತಿದೆ. ಇಲ್ಲಿನ ದೇವಸ್ಥಾನಗಳನ್ನು ಮೂರು ಸುತ್ತು ಸುತ್ತಿ, ಗ್ರಾಮಸ್ಥರಿಗೆಲ್ಲ ಸಿಹಿ ಹಂಚಿ ಪೂಜೆ ಸಲ್ಲಿಸಲಾಗುತ್ತದೆ. ದೊಡ್ಡಬ್ಬದ ಸಂದರ್ಭದ ಎರಡು ದಿನ ಈ ಪೂಜೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.