ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಪಾಸಿಟಿವ್ ಟ್ರೆಂಡ್, ಒಮಿಕ್ರಾನ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ಬುಧವಾರ(ಡಿಸೆಂಬರ್ 22) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 600ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಪಂಜಾಬ್ ಬೆನ್ನಲ್ಲೇ ಉತ್ತರಾಖಂಡ್ ಕಾಂಗ್ರೆಸ್ ನಲ್ಲಿ ಭಿನ್ನಮತ; ವರಿಷ್ಠರ ವಿರುದ್ಧ ರಾವತ್ ಕಿಡಿ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 611.55 ಅಂಕಗಳಷ್ಟು ಏರಿಕೆಯಾಗಿದ್ದು, 56,930.56 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 184.70ಅಂಕಗಳ ಏರಿಕೆಯೊಂದಿಗೆ 16,955.50 ಅಂಕಗಳ ಮಟ್ಟ ತಲುಪಿದೆ.
ಹಿಂಡಲ್ಕೊ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಡಿವೀಸ್ ಲ್ಯಾಬೋರೇಟರೀಸ್, ಬಜಾಜ್ ಫೈನಾನ್ಸ್, ಇಚರ್ ಮೋಟಾರ್ಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಪವರ್ ಗ್ರಿಡ್ ಕಾರ್ಪೋರೇಶನ್, ಎಸ್ ಬಿಐ ಲೈಫ್ ಇನ್ಸೂರೆನ್ಸ್, ವಿಪ್ರೋ, ಅದಾನಿ ಪೋರ್ಟ್ಸ್, ಐಓಸಿ ಷೇರುಗಳು ನಷ್ಟ ಕಂಡಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 449.23 ಅಂಕಗಳಷ್ಟು ಏರಿಕೆಯಾಗಿದ್ದು, 56,768.24 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 134.95 ಅಂಕ ಏರಿಕೆಯೊಂದಿಗೆ 16,905.80 ಅಂಕಗಳ ಮಟ್ಟ ತಲುಪಿತ್ತು.