Advertisement

ತಿನ್ನುವ ಸರಿಯಾದ ಸಮಯ ಯಾವುದು?

12:48 AM May 19, 2021 | Team Udayavani |

ತಿನ್ನುವ ವಿಷಯದಲ್ಲಿ ಸಮಯವು ಬಹುಮುಖ್ಯವಾಗಿರುತ್ತದೆ. ಹಸಿವು ಮತ್ತು ಬಾಯಾರಿಕೆ ನಿಯಂತ್ರಿಸುವುದು ಬಹಳ ಕಷ್ಟ. ಆದರೆ ಸಮಯ ಹೊಂದಾಣಿಕೆ ಮಾಡಿಕೊಂಡರೆ ಇದು ಅಸಾಧ್ಯವಾದುದ್ದಲ್ಲ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ನಮ್ಮ ಆಹಾರದಿಂದ ಲಭ್ಯವಾಗಬೇಕಾದರೆ ಆಹಾರ ಸೇವಿಸುವ ಸಮಯವೂ ಮುಖ್ಯವಾಗಿರುತ್ತದೆ. ಇದಕ್ಕಾಗಿ ಸರಿಯಾದ ಯೋಜನೆ ರೂಪಿಸಿಕೊಳ್ಳಲೇಬೇಕು.

Advertisement

ಮಧ್ಯಾಹ್ನವಾದರೆ ಸಾಕು ಊಟದ ಸಮಯವೆನ್ನುವ ಚಡಪಡಿಕೆ, ಬೆಳಗ್ಗಿನ ಉಪಾಹಾರ ತಪ್ಪಿಸಿದ್ದರಿಂದ ಹೆಚ್ಚು ಹಸಿವೆಯಾಗುತ್ತಿದೆ, ದಿನವಿಡೀ ಉಪವಾಸದ ಬಳಿಕ ಒಂದು ದೊಡ್ಡ ಭೋಜನದ ಹಂಬಲ… ಹೀಗೆ ಅತಿಯಾದ ಹಸಿವಿ ನಿಂದಾಗಿ ಅತಿಯಾಗಿ ತಿನ್ನುವ ಮನಸ್ಸಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ ತಿನ್ನುವ ಸಮಯವನ್ನು ನಿಗದಿಪಡಿಸು
ವುದು ಬಹಳ ಮುಖ್ಯ. ಇದನ್ನು ಯಶಸ್ವಿಯಾಗಿ ಪಾಲಿಸ ಬೇಕಾದರೆ ನಿಮಗೆ ಬೇಕಾದ ರೀತಿಯ ಸಮಯವನ್ನು ಹೊಂದಿಸಿಕೊಳ್ಳುವುದು ಇಂದಿನ ಅಗತ್ಯ.

ತಿನ್ನುವ ಸಮಯ
ಉಪಾಹಾರ- ಬೆಳಗ್ಗಿನ ಉಪಾಹಾರವೆಂದರೆ ರಾತ್ರಿ ಖಾಲಿ ಇತ್ತು ಎನ್ನುವ ಕಾರಣಕ್ಕೆ ಹೆಚ್ಚು ತಿನ್ನುವುದಲ್ಲ. ಬದ ಲಾಗಿ ಇಡೀ ದಿನಕ್ಕೆ ಬೇಕಾಗುವ ಪೋಷಣೆಯನ್ನು ತುಂಬಿಸು ವುದು. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ದಿನಚರಿ ಪ್ರಾರಂಭಿಸು ವುದು ಸರಿಯಲ್ಲ. ಹೀಗಾಗಿ ಎದ್ದ ಬಳಿಕ ಒಂದು ಗಂಟೆ ಯೊಳಗೆ ಉಪಾಹಾರವನ್ನು ಸೇವಿಸಬೇಕು. ಇದರಿಂದ ಉಪಾಹಾರ ಮತ್ತು ಊಟದ ಮಧ್ಯೆ ಏನಾದರೂ ತಿನ್ನಬೇಕು ಎನ್ನುವ ಹಂಬಲ ನಿಮ್ಮನ್ನು ಕಾಡದು.

ಬೆಳಗ್ಗಿನ ಉಪಾಹಾರದ ಪ್ರಮಾಣ ಮಧ್ಯಾಹ್ನದ ವೇಳೆಗೆ ಜೀರ್ಣವಾಗುವಷ್ಟೇ ಇರಬೇಕು. ಇದು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿ ರುತ್ತದೆ. ಹೀಗಾಗಿ ಆಹಾರವನ್ನು ಕಾಲ ಮತ್ತು ದೇಹಕ್ಕೆ ಅನುಸಾರವಾಗಿ ನಾವು ತಿನ್ನಬೇಕಾಗುತ್ತದೆ. ಆರೋಗ್ಯಕರ ವ್ಯಕ್ತಿ ಯಲ್ಲಿ ಆಹಾರ ಸೇವನೆಯ ಸಮಯ, ನಮ್ಮ ದೇಹ ಪ್ರಕೃತಿ, ಕಾರ್ಯ ಮತ್ತು ಜೀರ್ಣಶಕ್ತಿಯ ಮೇಲೆ ನಿರ್ಧರಿತವಾಗಿರುತ್ತದೆ.

ಹೆಚ್ಚಾಗಿ ದೈಹಿಕ ಶ್ರಮ ಮಾಡುವವರಲ್ಲಿ ಪಚನ ಕ್ರಿಯೆ ವೇಗವಾಗಿರುತ್ತದೆ. ಹೀಗಾಗಿ ಇಂಥವರು ಸ್ವಲ್ಪ ಬೇಗ ಆಹಾರ ಸೇವಿಸಿದರೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಹೆಚ್ಚು ಶ್ರಮವಿಲ್ಲದೆ ಕೆಲಸ ಮಾಡುವವರು, ಬೊಜ್ಜು ಉಳ್ಳವರಲ್ಲಿ ಪಚನ ಕ್ರಿಯೆ ತುಂಬಾ ನಿಧಾನವಾಗಿರುತ್ತದೆ. ಇಂಥವರು ಆಹಾರ ಸೇವನೆಯ ಮಧ್ಯೆ ಕನಿಷ್ಠ ಅಂತರ ಇರಿಸಿಕೊಳ್ಳಲೇಬೇಕು. ಕಾಯಿಲೆಗ ಳಿದ್ದಾಗ ಇದು ಭಿನ್ನವಾಗುತ್ತದೆ. ಯಾವುದೇ ಕಾರಣಕ್ಕೂ ಬೆಳಗ್ಗಿನ ಉಪಾಹಾರವನ್ನು ತಪ್ಪಿಸಲೇಬಾರದು. ಒಂದು ವೇಳೆ ತಪ್ಪಿಸಿದರೆ ಅದು ಅಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಮಾತ್ರವಲ್ಲ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.

Advertisement

ಮಧ್ಯಾಹ್ನದ ಊಟ- ಬೆಳಗ್ಗಿನ ಉಪಹಾರದ ಬಳಿಕ ಕನಿಷ್ಠ ಮೂರರಿಂದ ನಾಲ್ಕು ಗಂಟೆಗಳ ಮಧ್ಯೆ ಊಟ ಮಾಡುವುದು ಅತ್ಯುತ್ತಮ. ಬೆಳಗ್ಗೆ 7 ಗಂಟೆಗೆ ಉಪಾಹಾರ ಸೇವಿಸಿ ದರೆ 11ರಿಂದ 12 ಗಂಟೆಯೊಳಗೆ ಊಟ ಮಾಡಬಹುದು. ಒಂದು ವೇಳೆ 1 ಗಂಟೆಯವರೆಗೂ ಊಟ ಮಾಡಲು ಸಾಧ್ಯವಾಗದೇ ಇದ್ದರೆ ಮಧ್ಯೆ ದ್ರವ ಪದಾರ್ಥಗಳನ್ನು, ಲಘು ಆಹಾರವನ್ನು ಅಂದರೆ ಹಣ್ಣು, ಬೇಯಿಸಿದ ಅಥವಾ ತಾಜಾ ತರಕಾರಿ ಸೇವಿಸಬಹುದು. ಈ ಲಘು ಆಹಾರದಲ್ಲಿ ಪ್ರೊಟೀನ್‌ ಮತ್ತು ಕಾಬೋìಹೈಡ್ರೇಟ್‌ಗಳ ಮಿಶ್ರಣವಿರಬೇಕು.

ರಾತ್ರಿಯೂಟ- ದಿನವಿಡೀ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ದೇಹಕ್ಕೆ ದೊರೆಯದೇ ಇದ್ದಾಗ ರಾತ್ರಿ ಊಟ ಅಧಿಕವಾಗಿ ಬಿಡುತ್ತದೆ. ಹೀಗಾಗಿ ರಾತ್ರಿ ಊಟಕ್ಕೆ ಸರಿಯಾದ ಸಮಯವನ್ನು ನಿಗದಿ ಪಡಿಸುವುದು ಅತೀ ಅಗತ್ಯ. ಮಲಗುವುದಕ್ಕಿಂತ ಕನಿಷ್ಠ ಒಂದೂವರೆ ಗಂಟೆ ಮೊದಲು ರಾತ್ರಿಯೂಟ ಮಾಡಬೇಕು. ಯಾವತ್ತೂ ಮಲಗುವ ಮೊದಲು ತಿಂದ ಆಹಾರ ಸ್ವಲ್ಪ ಜೀರ್ಣವಾಗಿರಬೇಕು. ಇದರಿಂದ ಮರುದಿನ ಬೆಳಗ್ಗೆ ದೇಹದಲ್ಲಿರುವ ಕಶ್ಮಲಗಳು ಸರಿಯಾಗಿ ಹೊರಹೋಗುವುದು.

ನೀರು ಸೇವನೆಯಲ್ಲೇ ಸಮಯ ಪಾಲನೆ
ಬೆಳಗ್ಗೆ ಎದ್ದು ಒಂದು ಗ್ಲಾಸ್‌ ನೀರು ಕುಡಿಯುವದರಿಂದ ಸಾಕಷ್ಟು ಲಾಭವಿದೆ. ಇದು ದೇಹದಿಂದ ಕಶ್ಮಲಗಳನ್ನು ಹೊರ ಹೋಗಲು ಸಹಾಯ ಮಾಡುತ್ತದೆ ಮಾತ್ರವಲ್ಲದೇ ಅಜೀರ್ಣ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಇನ್ನು ಬೊಜ್ಜಿನ ಸಮಸ್ಯೆ ಉಳ್ಳವರು ಊಟಕ್ಕಿಂತ ಕನಿಷ್ಠ 15 ನಿಮಿಷ ಮೊದಲು ನೀರು ಕುಡಿಯಬೇಕು. ಉಳಿದಂತೆ ನೀರು ಕುಡಿಯಲು ಯಾವುದೇ ನಿರ್ಬಂಧವಿಲ್ಲ. ದಿನಕ್ಕೆ ಕನಿಷ್ಠ 3 ಲೀಟರ್‌ ನೀರು ಕುಡಿದರೆ ಒಳ್ಳೆಯದು.

ಸಮಯವಿಲ್ಲದಾಗ ಏನು ಮಾಡುವುದು?
ಕೆಲವರಿಗೆ ಸಮಯಕ್ಕೆ ಸರಿಯಾಗಿ ಮುಖ್ಯವಾಗಿ ಪ್ರಯಾ ಣದ ವೇಳೆ ಆಹಾರ ಸೇವಿಸಲು ಸಾಧ್ಯವಾಗದೇ ಇರಬ ಹುದು. ಈ ಸಂದರ್ಭದಲ್ಲಿ ನೆಲದ ಮೇಲೆ ಕುಳಿತು ಆಹಾರ ಸೇವಿಸುವ ಕ್ರಮವನ್ನು ಪಾಲಿಸುವುದು ಉತ್ತಮ. ಇದರಿಂದ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

ಉಪಾಹಾರ ಮತ್ತು ಭೋಜನದ ಸಮಯ ಯಾವು ದೆಂದು ದೇಹ ಮತ್ತು ಮನಸ್ಸಿಗೆ ಅರಿವಾಗಲು ಸಾಧ್ಯವಾದಷ್ಟು ಸ್ಥಿರವಾದ ಆಹಾರ ವೇಳಾಪಟ್ಟಿಯನ್ನು ಇರಿಸಿಕೊಳ್ಳಬೇಕು. ಇದು ಪ್ರತೀ ದಿನ ಬದಲಾಗುತ್ತಿದ್ದರೆ ಅಥವಾ ಆಹಾರ ಸೇವನೆಗೆ ಕಾಯಬೇಕಾದ ಸಂದರ್ಭ ಬಂದರೆ ಆರೋಗ್ಯಕರ ತಿಂಡಿಗಳು ಕೈಯಲ್ಲಿರಲಿ. ಪಾಳಿಯಲ್ಲಿ ಕೆಲಸ ನಿರ್ವಹಿಸು ವವರು ಈ ನಿಯಮವನ್ನು ಪಾಲಿಸುವುದು ಉತ್ತಮ. ಆಹಾರದ ಸಮಯದ ಕುರಿತ ಸಣ್ಣ ಯೋಜನೆ ಮತ್ತು ಸಿದ್ಧತೆ ದಿನವಿಡೀ ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು ಸಮತೋಲನದಲ್ಲಿರಿಸುತ್ತದೆ. ಹಸಿವು ದೇಹದ ತೂಕದಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರಿಗೆ ಮುಖ್ಯ ಕಾರಣವಾಗಿ ರುತ್ತದೆ. ಹೀಗಾಗಿ ಹಸಿವನ್ನು ನಿಯಂತ್ರಿಸುವ ಜತೆಗೆ ಸಮಯ ಪಾಲನೆ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ನಮ್ಮದಾಗುವುದು.

– ಡಾ| ಸಚಿನ್‌ ನಡ್ಕ
ಆಡಳಿತ ನಿರ್ದೇಶಕರು, ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ, ವೆಲೆನ್ಸಿಯಾ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next