Advertisement

ವಿಶ್ವಕಪ್‌ ಸಾಧಕರ ತಂಡ: ಭಾರತದ ರಿಚಾ ಘೋಷ್‌ಗೆ ಸ್ಥಾನ

12:11 AM Feb 28, 2023 | Team Udayavani |

ದುಬಾೖ: ಆಸ್ಟ್ರೇಲಿಯದ ಪ್ರಭುತ್ವದೊಂದಿಗೆ ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ರವಿವಾರ ರಾತ್ರಿ ಕೇಪ್‌ ಟೌನ್‌ನಲ್ಲಿ ತೆರೆ ಬಿದ್ದಿದೆ.

Advertisement

ಸಂಪ್ರದಾಯದಂತೆ ಐಸಿಸಿ ಈ ಕೂಟದಲ್ಲಿ ಮಿಂಚಿದ ಆಟಗಾರ್ತಿಯರ ಆಡುವ ಬಳಗವೊಂದನ್ನು ಪ್ರಕಟಿಸಿದೆ. ಇದರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ್ತಿಯೆಂದರೆ ರಿಚಾ ಘೋಷ್‌.

ಭಾರತ ತಂಡದ ಕೀಪರ್‌ ಆಗಿರುವ ರಿಚಾ ಘೋಷ್‌ ಆರಂಭಿಕ ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು. 68.00 ಸರಾಸರಿಯಲ್ಲಿ 136 ರನ್‌ ಗಳಿಸಿದ್ದು ರಿಚಾ ಸಾಧನೆ.

ಆಸ್ಟ್ರೇಲಿಯದ ನಾಲ್ವರು
ತಂಡದಲ್ಲಿ ಚಾಂಪಿಯನ್‌ ಆಸ್ಟ್ರೇಲಿಯದ ಸರ್ವಾಧಿಕ ನಾಲ್ವರು ಆಟಗಾರ್ತಿಯರಿದ್ದಾರೆ. ಆದರೆ ವಿಶ್ವಕಪ್‌ ವಿಜೇತ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಈ ತಂಡದಲ್ಲಿ ಇಲ್ಲದಿರುವುದೊಂದು ಅಚ್ಚರಿ. ಇಂಗ್ಲೆಂಡ್‌ನ‌ ನಥಾಲಿ ಸ್ಕಿವರ್‌ ಬ್ರಂಟ್‌ ನಾಯಕಿಯಾಗಿ ಆಯ್ಕೆಯಾದ್ದಾರೆ. ಸ್ಕಿವರ್‌ 3 ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಕೂಟದಲ್ಲಿ ದ್ವಿತೀಯ ಸರ್ವಾಧಿಕ ರನ್‌ ಬಾರಿಸಿದ ಸಾಧನೆ ಇವರದು (216 ರನ್‌).

ತಂಡದಲ್ಲಿರುವ ಆಸ್ಟ್ರೇಲಿಯದ ಆಟಗಾರ್ತಿಯರೆಂದರೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆ್ಯಶ್ಲಿ ಗಾರ್ಡನರ್‌, ಅಲಿಸ್ಸಾ ಹೀಲಿ, ಡಾರ್ಸಿ ಬ್ರೌನ್‌ ಮತ್ತು ಮೆಗಾನ್‌ ಶಟ್‌.

Advertisement

ಉಳಿದಂತೆ ದಕ್ಷಿಣ ಆಫ್ರಿಕಾದ ಮೂವರು, ಇಂಗ್ಲೆಂಡ್‌ನ‌ ಇಬ್ಬರು, ವೆಸ್ಟ್‌ ಇಂಡೀಸ್‌ನ ಒಬ್ಬರು ಸ್ಥಾನ ಪಡೆದಿದ್ದಾರೆ. 12ನೇ ಆಟಗಾರ್ತಿಯಾಗಿ ಆಯ್ಕೆಯಾದವರು ಐರ್ಲೆಂಡ್‌ನ‌ ಓರ್ಲಾ ಪ್ರಂಡರ್ಗಾಸ್ಟ್‌.

ಆಯ್ಕೆ ಸಮಿತಿ
ಈ ತಂಡವನ್ನು ವೀಕ್ಷಕ ವಿವರಣ ಕಾರರು, ಪತ್ರಕರ್ತರು, ಐಸಿಸಿ ಅಧಿ ಕಾರಿಗಳು ಸೇರಿಕೊಂಡು ಆರಿಸಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳ ಮತವನ್ನೂ ಪರಿಗಣಿಸಲಾಗಿದೆ. ತಂಡದ ಸದಸ್ಯರೆಂದರೆ ಇಯಾನ್‌ ಬಿಷಪ್‌, ಮೆಲಾನಿ ಜೋನ್ಸ್‌, ಎಬೋನಿ ರೇನ್‌ಫೋರ್ಡ್‌ ಬ್ರಂಟ್‌, ಫಿರ್ದೋಸ್‌ ಮೂಂಡ ಮತ್ತು ಸ್ನೇಹಲ್‌ ಪ್ರಧಾನ್‌.

ಐಸಿಸಿ ಸಾಧಕರ ತಂಡ
ಟಾಜ್ಮಿನ್‌ ಬ್ರಿಟ್ಸ್‌ (ದಕ್ಷಿಣ ಆಫ್ರಿಕಾ, 186 ರನ್‌)
ಅಲಿಸ್ಸಾ ಹೀಲಿ (ವಿ.ಕೀ., ಆಸ್ಟ್ರೇಲಿಯ 189 ರನ್‌, 4 ಕ್ಯಾಚ್‌/ಸ್ಟಂಪಿಂಗ್‌)
ಲಾರಾ ವೋಲ್ವಾರ್ಟ್‌ (ದಕ್ಷಿಣ ಆಫ್ರಿಕಾ, 230 ರನ್‌)
ನಥಾಲಿ ಸ್ಕಿವರ್‌ ಬ್ರಂಟ್‌ (ನಾಯಕಿ, ಇಂಗ್ಲೆಂಡ್‌, 216 ರನ್‌)
ಆ್ಯಶ್ಲಿ ಗಾರ್ಡನರ್‌ (ಆಸ್ಟ್ರೇಲಿಯ, 110 ರನ್‌, 10 ವಿಕೆಟ್‌)
ರಿಚಾ ಘೋಷ್‌ (ಭಾರತ, 136 ರನ್‌)
ಸೋಫಿ ಎಕ್‌ಸ್ಟೋನ್‌ (ಇಂಗ್ಲೆಂಡ್‌, 11 ವಿಕೆಟ್‌)
ಕರಿಷ್ಮಾ ರಮರಾಕ್‌ (ವೆಸ್ಟ್‌ ಇಂಡೀಸ್‌, 5 ವಿಕೆಟ್‌)
ಶಬಿ°ಮ್‌ ಇಸ್ಮಾಯಿಲ್‌ (ದಕ್ಷಿಣ ಆಫ್ರಿಕಾ, 8 ವಿಕೆಟ್‌)
ಡಾರ್ಸಿ ಬ್ರೌನ್‌ (ಆಸ್ಟ್ರೇಲಿಯ, 7 ವಿಕೆಟ್‌)
ಮೆಗಾನ್‌ ಶಟ್‌ (ಆಸ್ಟ್ರೇಲಿಯ, 10 ವಿಕೆಟ್‌)
ಓರ್ಲಾ ಪ್ರಂಡರ್ಗಾಸ್ಟ್‌ (ಐರ್ಲೆಂಡ್‌, 109 ರನ್‌, 3 ವಿಕೆಟ್‌)

Advertisement

Udayavani is now on Telegram. Click here to join our channel and stay updated with the latest news.

Next