Advertisement

ಭತ್ತದ ಬೆಳೆ ಕುಸಿತ: ಅನ್ನದಾತರ ಆತಂಕ; ಮಳೆ ಕಣ್ಣಾಮುಚ್ಚಾಲೆ ನಡುವೆ ಬೆಳೆ ಕಟಾವು

05:49 PM Nov 01, 2022 | Team Udayavani |

ಸಿರುಗುಪ್ಪ: ಸತತ ಮಳೆಯ ಕಣ್ಣಾಮುಚ್ಚಾಲೆ ನಡುವೆ ತಾಲೂಕಿನಲ್ಲಿ ಭತ್ತದ ಬೆಳೆಯ ಕಟಾವು ಪ್ರಾರಂಭವಾಗಿದ್ದು, ಇನ್ನೂ ಒಂದು ತಿಂಗಳವರೆಗೆ ಕಟಾವು ನಡೆಯಲಿದೆ. ತಾಲೂಕಿನ ರೈತರು ತಾವು ಬೆಳೆದ ಭತ್ತವನ್ನು ಗೋದಾಮುಗಳಲ್ಲಿ ಸಂಗ್ರಹಿಸಿಕೊಂಡು ಬೆಲೆ ಏರಿಕೆಯಾದಾಗ ಮಾರಾಟ ಮಾಡಲು ಬಹುತೇಕ ರೈತರಿಗೆ ಭತ್ತ ಸಂಗ್ರಹಿಸಿಟ್ಟುಕೊಳ್ಳಲು ಗೋದಾಮುಗಳು ಇಲ್ಲದ ಕಾರಣ ಮತ್ತು ಮಳೆ ಬಂದರೆ ಭತ್ತದ ಬೆಲೆಯು ಪಾತಾಳಕ್ಕೆ ಕುಸಿಯಬಹುದು
ಎನ್ನುವ ಆತಂಕದಲ್ಲಿಯೇ ಬಹುತೇಕ ರೈತರು ಭತ್ತ ಕಟಾವು ಮಾಡಿದ ನಂತರ ವ್ಯಾಪಾರಿಗಳು ಕೇಳುವ ದರಕ್ಕೆ ಭತ್ತವನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ.

Advertisement

ರೈತರ ಈ ಅನಿವಾರ್ಯತೆಯನ್ನು ಬಳಸಿಕೊಂಡು ಕೆಲವು ರೈಸ್‌ಮಿಲ್‌ಗ‌ಳು ಮತ್ತು ವ್ಯಾಪಾರಿಗಳು ಸರ್ಕಾರ ನಿಗಮಾಡಿದ ದರಕ್ಕಿಂತ ಕಡಿಮೆ ದರದಲ್ಲಿ ಭತ್ತವನ್ನು ಖರೀದಿಸುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಕಟಾವಿನ ಆರಂಭದ ಹಂತದಲ್ಲಿ ಅಂದರೆ ಅಕ್ಟೋಬರ್‌ ತಿಂಗಳಲ್ಲಿಯೇ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕೇಂದ್ರಗಳನ್ನು ತೆರೆದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿವೆ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಶೇ. 25ರಷ್ಟು ಭತ್ತದ ಕಟಾವು ಮುಗಿದು ಶೇ. 75ರಷ್ಟು ಭತ್ತ ಕಟಾವು ನಡೆಯಬೇಕಾಗಿದೆ. ರೈತರು ತಮ್ಮ ಭತ್ತವನ್ನು ಕಡಿಮೆ ದರದಲ್ಲಿ ಮಾರಿಕೊಂಡ ನಂತರ ಸರ್ಕಾರ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯುತ್ತದೆ. ಕಳೆದ ಬಾರಿ ರೈತ ಸಂಘದ ಪದಾ ಧಿಕಾರಿಗಳು ಭತ್ತ ಖರೀದಿ ಕೇಂದ್ರ ತೆರೆಯುವಂತೆ ಗಲಾಟೆ ಮಾಡಿದ ನಂತರ ಜಿಲ್ಲಾಡಳಿತ ಖರೀದಿ ಕೇಂದ್ರಕ್ಕೆ ತಡವಾಗಿ ಬೇಡಿಕೆ ಇಟ್ಟಿದ್ದರಿಂದ ಬಹುತೇಕ ರೈತರು ಖಾಸಗಿ ಮಿಲ್‌ ಮತ್ತು ಮಾರಾಟಗಾರರಿಗೆ ತಮ್ಮ ಭತ್ತವನ್ನು ಮಾರಾಟ ಮಾಡಿದ್ದರಿಂದ ಭತ್ತ ಖರೀದಿ ಕೇಂದ್ರದ ಕಡೆ ಹೆಚ್ಚಿನ ರೈತರು ಮುಖ ಮಾಡಿರಲಿಲ್ಲ. ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಈಗಾಗಲೇ ಶೇ. 25ರಷ್ಟು ಭತ್ತದ ಕೊಯ್ಲು ಮುಗಿದಿದ್ದು, ಇನ್ನು ಶೇ.75ರಷ್ಟು ಭತ್ತ ಕೊಯ್ಲು ನಡೆಯಬೇಕಾಗಿದೆ. ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯುವ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸಿದರೆ ಮಾತ್ರ ತಾಲೂಕಿನಲ್ಲಿ ಭತ್ತ ಬೆಳೆದ ರೈತರಿಗೆ ಅನುಕೂಲವಾಗಲಿದೆ. ಕಳೆದ ಬಾರಿ ತಾಲೂಕಿನ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿತ್ತು. ಆದರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ನಾಲ್ಕು ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿಬಾರಿ
ಸರ್ಕಾರಕ್ಕೆ ಖರೀದಿ ಕೇಂದ್ರ ತೆರೆಯವ ವ್ಯವಸ್ಥೆ ಮಾಡುವಂತೆ ರೈತರು ಮನವಿ ಸಲ್ಲಿಸುವ ಬದಲು ರೈತರ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಖರೀದಿ ಕೇಂದ್ರಗಳು ಯಾವತ್ತು ತೆರೆದಿರಬೇಕು ಎನ್ನುವ ಬೇಡಿಕೆ ರೈತರದ್ದಾಗಿದೆ. ಆದರೆ ಸರ್ಕಾರ ರೈತರ ಈ ಬೇಡಿಕೆಗೆ ಸ್ಪಂದಿಸುತ್ತಿಲ್ಲ.

ಹೆಚ್ಚಿನ ರೈತರು ಭತ್ತದ ಕಟಾವು ಮಾಡಿದ ಕೂಡಲೇ ಮಾರಾಟ ಮಾಡುವುದರಿಂದ ಮಳೆಯಲ್ಲಿ ನೆನೆದ ಭತ್ತವಾಗಿದ್ದಲ್ಲಿ ಗುಣಮಟ್ಟ ಕುಸಿಯುತ್ತದೆ. ಉತ್ತಮ ಬೆಲೆಯು ಸಿಗುವುದಿಲ್ಲ. ಕೊಯ್ಲು ಮಾಡಿದ ನಂತರ ಬಿಸಿಲಲ್ಲಿ ಒಣಗಿಸಿ ಗುಣಮಟ್ಟ ಕಾಯ್ದುಕೊಂಡು ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎನ್ನುವ ಅಭಿಪ್ರಾಯವಿದೆ.

Advertisement

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಆರ್‌ಎನ್‌ಆರ್‌ ಭತ್ತ ರೂ. 2200ಕ್ಕೆ, ಸೋನಾಮಸೂರಿ ರೂ. 2000ಕ್ಕೆ ಮಾರಾಟವಾಗುತ್ತಿತ್ತು. ಆದರೆ ತಾಲೂಕಿನಲ್ಲಿ ಭತ್ತ ಕೊಯ್ಲು ಜೋರಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ರೈತರಿಗೆ ಸದ್ಯ ಆರ್‌ಎನ್‌ಆರ್‌ ಭತ್ತದ ಬೆಲೆಯು ರೂ. 1900, ಸೋನಾಮಸೂರಿ ರೂ. 1800 ಬೆಲೆ ಸಿಗುತ್ತಿದೆ. ಭತ್ತ ಕೊಯ್ಲು ಆರಂಭವಾದ ಒಂದೇ ವಾರದಲ್ಲಿ ಆರ್‌ ಎನ್‌ಆರ್‌ ಭತ್ತ ಪ್ರತಿ ಕ್ವಿಂಟಲ್‌ಗೆ ರೂ. 200, ಸೋನಾಮಸೂರಿ ಭತ್ತ ಪ್ರತಿ ಕ್ವಿಂಟಲ್‌ಗೆ ರೂ. 200 ಬೆಲೆ ಕಡಿಮೆಯಾಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

ರೈತರು ಬೆಳೆಯುವ ಪ್ರತಿ ಬೆಳೆಯನ್ನು ಖರೀದಿಸಲು ಸರ್ಕಾರ ಖರೀದಿ ಕೇಂದ್ರಗಳನ್ನು ವರ್ಷದ 365 ದಿನ ತೆರೆದರೆ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ. ಸರ್ಕಾರ ಸಿರುಗುಪ್ಪ ತಾಲೂಕಿನಲ್ಲಿ ನಾಲ್ಕು ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು.

ಆರ್‌.ಮಾದವರೆಡ್ಡಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ

ಸದ್ಯ ಮಾರುಕಟ್ಟೆಯಲ್ಲಿ ನಮ್ಮ ಭತ್ತವನ್ನು ಮಾರಾಟ ಮಾಡಿದರೆ ಒಂದು ಕ್ವಿಂಟಲ್‌ಗೆ ರೂ.200ರಿಂದ 300ವರೆಗೆ ಕಡಿಮೆ ಬೆಲೆ ಸಿಗುತ್ತಿದೆ. ಕೇಂದ್ರ ಸರ್ಕಾರ ಭತ್ತ ಸೇರಿದಂತೆ ಇತರೆ ಬೆಳೆಗಳಿಗೆ ದರವನ್ನು ನಿಗ ಪಡಿಸಿದೆ. ಆದರೆ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ನಿಗ ಪಡಿಸಿದ ಬೆಲೆಗಿಂತ ಕಡಿಮೆ ಬೆಲೆಗೆ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಸರ್ಕಾರ ನಿಗ ಪಡಿಸಿದ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವ ವ್ಯಾಪಾರಿಗಳಿಗೆ ಶಿಕ್ಷೆನೀಡುವ ಕಾನೂನನ್ನು ಸರ್ಕಾರ ಜಾರಿಗೆ ತಂದರೆ ರೈತರಿಗೆ ಅನುಕೂಲವಾಗಲಿದೆ.
ಯಲ್ಲಪ್ಪ, ಸುಂಕಪ್ಪ, ಈರಪ್ಪ, ರಾರಾವಿ ಗ್ರಾಮದ ರೈತ

ಆರ್‌. ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next