Advertisement

ಕಾಝಿರಂಗ: ಖಡ್ಗಮೃಗ ಕೊಂದು ಕೊಂಬು ಕಿತ್ತೂಯ್ದ ಕಳ್ಳ ಬೇಟೆಗಾರರು

03:35 PM Feb 15, 2017 | Team Udayavani |

ತೇಜಪುರ, ಅಸ್ಸಾಂ : ರಾಜ್ಯದ ಪ್ರಖ್ಯಾತ ಕಾಝಿರಂಗ ನ್ಯಾಶನಲ್‌ ಪಾರ್ಕ್‌ ನಲ್ಲಿಂದು ಖಡ್ಗಮೃಗವೊಂದನ್ನು ಕಳ್ಳ ಬೇಟೆಗಾರರು ಕೊಂದು ಅದರ ಕೊಂಬನ್ನು ಕಿತ್ತೂಯ್ದಿದ್ದಾರೆ. 

Advertisement

ವಿಶ್ವ ಪಾರಂಪರಿಕ ತಾಣವಾಗಿರುವ ಬುರಾಪಹಾಡ್‌ ವಲಯಕ್ಕೆ ಸೇರಿದ ತಿನಿಕಾತಿ ಅರಣ್ಯ ಶಿಬಿರದಲ್ಲಿ ಇಂದು ನಸುಕಿನ ವೇಳೆ ಕಳ್ಳ ಬೇಟೆಗಾರರು ಹೆಣ್ಣು ಖಡ್ಗಮೃಗವನ್ನು ಕೊಂದು ಅದರ ಕೊಂಬನ್ನು ಕಿತ್ತೂಯ್ದರೆಂದು ನ್ಯಾಶನಲ್‌ ಪಾರ್ಕಿನ ವಿಭಾಗೀಯ ಅರಣ್ಯಾಧಿಕಾರಿ ರೋಹಿಣಿ ಬಲ್ಲವ ಸೈಕಿಯಾ ತಿಳಿಸಿದ್ದಾರೆ. 

ನಸುಕಿನ ವೇಳೆ ನ್ಯಾಶನಲ್‌ ಪಾರ್ಕ್‌ನಲ್ಲಿ ಗುಂಡಿನ ಸದ್ದು ಕೇಳಿ ಬಂದಾಗ ಶೋಧ ಕಾರ್ಯಕ್ಕೆ ತೊಡಗಿದ ಅರಣ್ಯ ಸಿಬಂದಿಗಳಿಗೆ ಖಡ್ಗಮೃಗದ ಕಳೇಬರ ಕಂಡು ಬಂತು; ಎಕೆ 47 ಮತ್ತು ಇನ್‌ಸಾಸ್‌ ರೈಫ‌ಲ್‌ ಗುಂಡೇಟಿಗೆ ಖಡ್ಗಮೃಗ ಸತ್ತಿತ್ತು. 

ಅರಣ್ಯಾಧಿಕಾರಿಗಳಿಗೆ ಸ್ಥಳದಲ್ಲಿ 14 ಸುತ್ತುಗಳ ಹಾರಿಸಲ್ಪಟ್ಟ ಮದ್ದುಗುಂಡುಗಳು ಕಂಡುಬಂತೆಂದು ಸೈಕಿಯಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next