Advertisement

Mudhol: ಪ್ರವಾಹ ಪೀಡಿತ ಗ್ರಾಮಗಳಿಗೆ ಸಚಿವ ಕೃಷ್ಣಭೈರೇಗೌಡ ಭೇಟಿ… ಪರಿಶೀಲನೆ

03:17 PM Jul 30, 2024 | Team Udayavani |

ಮುಧೋಳ : ಜೂನ್-ಜುಲೈನಲ್ಲಿ ರಾಜ್ಯದಲ್ಲಿ ಮಲೆನಾಡು, ಅರೇ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ವಾಡಿಕೆಗ್ಗಿಂತ ಶೆ.26 ರಷ್ಟು ಮಳೆ ಜಾಸ್ತಿ ಆಗಿದೆ. ಹಲವಾರು ವರ್ಷಗಳಿಂದ ಪ್ರವಾಹದಿಂದ ನರಳುತ್ತಿವೆ. ಅಂಹ ಗ್ರಾಮಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

Advertisement

ತಾಲೂಕಿನ ಯಾದವಾಡ ಬ್ರಿಡ್ಜ್ ಗೆ ಭೇಟಿ ನೀಡಿ‌ ಘಟಪ್ರಭಾ ನದಿ‌ ಪ್ರವಾಹ ವೀಕ್ಷಿಸಿ‌ ಮಾಧ್ಯಮದೊಂದಿಗೆ ಮತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರೊಂದಿಗೆ ಪ್ರವಾಹ ಪೀಡಿತ ಗ್ರಾಮಗಳ‌ ಶಾಶ್ವತ ಪರಿಹಾರದ ಕುರಿತು ಚರ್ಚೆ ನಡೆಸಲಾಗುವುದು. ಪ್ರವಾಹ ಪೀಡಿತ ಗ್ರಾಮಗಳನ್ನು ಒಂದೇ ಬಾರಿಗೆ ಸ್ಥಳಾಂತರಿಸುವುದು ಕಷ್ಟಸಾಧ್ಯ. ಹಂತ ಹಂತವಾಗಿ ಮಾಡಬೇಕಿದೆ‌. ಇದಕ್ಕೆ ರೈತರು ಭೂಮಿ ನೀಡಲು ಮುಂದಾಗಬೇಕು. ಸರ್ಕಾರದ ನಿಯಮಾವಳಿ ಬಿಟ್ಟು ಭೂಮಿ ಖರೀದಿ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆ ದರದಲ್ಲಿ ಭೂಮಿ ಖರೀದಿಸಲು ಸಾಧ್ಯವಿಲ್ಲ. ಎಲ್ಲದಕ್ಕೂ ಅಂತಿಮ ಸ್ವರೂಪ ನೀಡಬೇಕಿದೆ ಎಂದರು.

ಕೋಲಾರ, ಕೊಪ್ಪಳ, ಕೋಲಾರ, ವಿಜಯ ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಆಗಿಲ್ಲ. ಕರಾವಳಿ ಭಾಗ, ಕಾವೇರಿ ಜಲಾನಯನ ಪ್ರದೇಶ, ಅರೇ ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ನೆರೆಯ ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಾಗಲಕೋಟೆ, ಬೆಳಗಾವಿ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಘಟಪ್ರಭಾ 80 ಸಾವಿರ ಕ್ಯೂಸೆಕ್, ಕೃಷ್ಣಾ 3 ಲಕ್ಷ ಕ್ಯೂಸೆಕ್ ಒಳ ಹರಿವು ಇದ್ದು, ಎರಡು ಮೂರು ದಿನಗಳಲ್ಲಿ ಪ್ರವಾಹ ತಗ್ಗಬಹುದು. ಮಹಾ ಮಳೆ ಮುಂದು ವರೆದಲ್ಲಿ ಕಷ್ಟವಾಗಲಿದೆ. ಸರ್ಕಾರ ಅಗತ್ಯ ಸಿದ್ದತೆ ಮಾಡಿಕೊಂಡಿದೆ ಎಂದರು.

ರಾಜ್ಯದಲ್ಲಿ 2223 ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಅಂತ ಗುರುತಿಸಲಾಗಿದೆ. ಟಾಸ್ಕ ಪೋರ್ಸ ಸಮಿತಿ ರಚಸಲಾಗಿದೆ. 64 ಹಾರೈಕೆ ಕೆಂದ್ರ ಆರಂಭಿಸಲಾಗಿದ್ದು, ಈ ವರೆಗೆ 10 ಸಾವಿರ ಜನರಿಗೆ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 832 ಮನೆಗಳಿಗೆ ಹಾನಿಯಾಗಿದೆ. ಸಿಡಿಲಿಗೆ 8, ಮರಗಳು ಬಿದ್ದು 6, ಮನೆ ಬಿದ್ದು 14, ನೀರಿನಲ್ಲಿ ಮುಳಗಿ 12 ಜನ ಸೇರಿದಂತೆ ಒಟ್ಟು 48 ಪ್ರಾಣ ಹಾನಿ ಸಂಭವಿಸಿದೆ ಎಂದು ತಿಳಿಸಿದರು.

Advertisement

ಪ್ರವಾಹಕ್ಕೆ 2019 ರಲ್ಲಿ 272 ಜನ, 2022 ರಲ್ಲಿ 249 ಜನ ತೀರಿಕೊಂಡಿದ್ದರು. 2019 ರಲ್ಲಿ 9 ಲಕ್ಷ ಹೆಕ್ಟೇರ್, 2022 ರಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಹಾನಿಯಾಗಿತ್ತು, ಪ್ರಸಕ್ತ ವರ್ಷ 44 ಸಾವಿರ ಹೆಕ್ಟೇರ್ ಪ್ರದೇಶ ಬೆಳೆಹಾನಿಯಾಗಿದೆ. ಇದು ಪ್ರವಾಹ ಕಡಿಮೆಯಾದ ಬಳಿಕ ಹಾನಿ ಪ್ರಮಾಣ ಜಾಸ್ತಿ ಆಗಲಿದೆ ಎಂದರು.

ಇದನ್ನೂ ಓದಿ: ಕಲಬುರಗಿ ‌ಮಹಾ ನಗರ ಪಾಲಿಕೆ ʼಕೈʼ ತೆಕ್ಕೆಗೆ: ಯಲ್ಲಪ್ಪ ಮೇಯರ್,ಹೀನಾ ಉಪ ಮೇಯರ್ ಅವಿರೋಧ ಆಯ್ಕೆ

Advertisement

Udayavani is now on Telegram. Click here to join our channel and stay updated with the latest news.

Next