Advertisement

ವಿದ್ವತ್‌ ಹೇಳಿಕೆ ದಾಖಲಿಸದೆ ವಾಪಸಾದ ಅಧಿಕಾರಿಗಳು

12:12 PM Feb 27, 2018 | Team Udayavani |

ಬೆಂಗಳೂರು: ಯುಬಿ ಸಿಟಿಯ ಫ‌ರ್ಜಿ ಕೆಫೆಯಲ್ಲಿ ಮೊಹಮ್ಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್‌ ಹೇಳಿಕೆ ದಾಖಲಿಸಿಕೊಳ್ಳಲು ಸೋಮವಾರ ಮಲ್ಯ ಆಸ್ಪತ್ರೆಗೆ ತೆರಳಿದ್ದ ಸಿಸಿಬಿ ಪೊಲೀಸರು, ವಿದ್ವತ್‌ ಆರೋಗ್ಯ ಸ್ಥಿತಿ ಕಂಡು, ಬರಿಗೈಲಿ ವಾಪಸಾಗಿದ್ದಾರೆ.

Advertisement

ವಿದ್ವತ್‌ ಆರೋಗ್ಯ ಅಲ್ಪ ಚೇತರಿಕೆ ಕಂಡಿದ್ದು, ಭಾನುವಾರ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಅಶ್ವತ್ಥಗೌಡ ನೇತೃತ್ವದ ತಂಡ ಮಧ್ಯಾಹ್ನ 12 ಗಂಟೆಗೆ ಮಲ್ಯ ಆಸ್ಪತ್ರೆಗೆ ತೆರಳಿದೆ. ಈ ವೇಳೆ ತನಿಖಾಧಿಕಾರಿಗಳು ವಿದ್ವತ್‌ಗೆ ಮೇಲಿಂದ ಮೇಲೆ ಪ್ರಶ್ನೆ ಕೇಳಿದ್ದಾರೆ.

ಆದರೆ, ತುಟಿ ಹಾಗೂ ಬಾಯಿಗೆ ತೀವ್ರ ಗಾಯವಾಗಿರುವ ಕಾರಣ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದು ವಿದ್ವತ್‌ ಹೇಳಿದ್ದಾನೆ. ಆದರೂ ತನಿಖಾಧಿಕಾರಿಗಳು ಮಾಹಿತಿ ಪಡೆಯಲು ಯತ್ನಿಸಿದಾಗ ಅಲ್ಲೇ ಇದ್ದ ಕುಟುಂಬದ ಸದಸ್ಯರು ವಿದ್ವತ್‌ ಪರಿಸ್ಥಿತಿಯನ್ನು ಪೊಲೀಸರಿಗೆ ವಿವರಿಸಿದ್ದಾರೆ. ಅಲ್ಲದೇ ವೈದ್ಯರ ಜತೆ ಚರ್ಚಿಸುವಂತೆ ಸಲಹೆ ನೀಡಿದ್ದಾರೆ.

ನಂತರ ವೈದ್ಯ ಆನಂದ್‌, ವಿದ್ವತ್‌ ಸ್ಥಿತಿ ಬಗ್ಗೆ ತನಿಖಾಧಿಕಾರಿಗಳಿಗೆ ವಿವರಿಸಿ, ವಿದ್ವತ್‌ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಬಳಿಕ ಬಂದರೆ ಒಳಿತು ಎಂದು ತಿಳಿಸಿದ್ದು, ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೆ ವಾಪಸಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next