Advertisement

Video: ತ್ರಿವರ್ಣ ಧ್ವಜ ಹಿಡಿಯುತ್ತಲೇ ಹೃದಯಾಘಾತವಾಗಿ ವೇದಿಕೆಯಲ್ಲಿ ಕುಸಿದು ಬಿದ್ದ ವ್ಯಕ್ತಿ

04:24 PM Jun 01, 2024 | Team Udayavani |

ಇಂದೋರ್:‌ ದೇಶಭಕ್ತಿ ಗೀತೆಗೆ ರಾಷ್ಟ್ರ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದುಬಿದ್ದು ಯೋಧನ ಧಿರಿಸು ಧರಿಸಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಇಂದೋರ್‌ನಲ್ಲಿ ಶುಕ್ರವಾರ(ಮೇ.31 ರಂದು) ನಡೆದಿದೆ.

Advertisement

ಬಲ್ವಿಂದರ್ ಸಿಂಗ್ ಛಾಬ್ರಾ ಮೃತ ವ್ಯಕ್ತಿ.

ನಗರದ ಫುಟಿ ಕೋಠಿ ಪ್ರದೇಶದ ಅಗ್ರಸೇನ್ ಧಾಮ್‌ನಲ್ಲಿ ಆಸ್ತಾ ಯೋಗ ಕ್ರಾಂತಿ ಅಭಿಯಾನ ಎಂಬ ಗುಂಪಿನಿಂದ ಉಚಿತ ಯೋಗ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಲ್ವಿಂದರ್‌ ಅವರನ್ನು ಕರೆಯಲಾಗಿತ್ತು. ಬಲ್ವಿಂದರ್‌ ಹಲವು ಕಾರ್ಯಕ್ರಮಗಳಿಗೆ ಸಾಂಸ್ಕೃತಿಕವಾಗಿ ಮನರಂಜನೆ ನೀಡಲು ಹೋಗುತ್ತಾರೆ. ಹಾಗಾಗಿ ಈ ಯೋಗ ಶಿಬಿರಕ್ಕೆ ಅವರನ್ನು ಕರೆಯಲಾಗಿತ್ತು ಎಂದು ವರದಿ ತಿಳಿಸಿದೆ.

ವೇದಿಕೆಯಲ್ಲಿ ಬಲ್ವಿಂದರ್ ಯೋಧನ ಸಮವಸ್ತ್ರವನ್ನು ಧರಿಸಿ ದೇಶಭಕ್ತಿ ಗೀತೆ ‘ಮಾ ತುಜೆ ಸಲಾಮ್’ ಹಾಡಿಗೆ ರಾಷ್ಟ್ರ ಧ್ವಜವನ್ನು ಹಿಡಿದು ನೆರೆದಿದ್ದ ಜನರತ್ತ ಕೈ ಬೀಸುತ್ತಿದ್ದರು. ದೇಶ ಭಕ್ತಿಯ ಹಾಡಿಗೆ ನೃತ್ಯ ಮಾಡುತ್ತಿದ್ದ ಬಲ್ವಿಂದರ್‌ ಇದ್ದಕ್ಕಿದ್ದಂತೆ ಸ್ವಲ್ಪ ಕುಸಿದು ಬೀಳುವಂತೆ ಆಗಿದ್ದಾರೆ.

ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿಯುತ್ತಲೇ ಬಲ್ವಿಂದರ್‌ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಆದರೆ ಅವರು ಕುಸಿದು ಬಿದ್ದಿರುವುದು ನೃತ್ಯದ ಒಂದು ಭಾಗವೆಂದುಕೊಂಡಿದ್ದ ಅಲ್ಲಿರುವ ಜನರು ಚಪ್ಪಾಳೆಯನ್ನು ತಟ್ಟುತ್ತಲೇ ಇದ್ದರು.

Advertisement

ಆದರೆ ಇದಾದ ಕೆಲ ಸಮಯದ ಬಳಿಕ ಬಲ್ವಿಂದರ್ ಅವರಿಗೆ ಹೃದಯಾಘಾತವಾಗಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಬಲ್ವಿಂದರ್‌ ಈ ಹಿಂದೆ 2008 ರಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next