Advertisement

ಸ್ಥಗಿತಗೊಂಡ ವಿದ್ಯುತ್‌ ಇಲಾಖೆಯ ನೇಮಕಾತಿ ಪ್ರಕ್ರಿಯೆಗೆ ಮರುಚಾಲನೆ

12:06 AM Aug 17, 2021 | Team Udayavani |

ಕೋಟ: ಒಂದೂವರೇ ವರ್ಷದ ಹಿಂದೆ ವಿದ್ಯುತ್‌ ಇಲಾಖೆಯ ಕೆಲವು ಹುದ್ದೆಗೆ ಸಿಬಂದಿ ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಸ್ಥಗಿತಗೊಂಡು ಅವರಿಗೆ ನಿರಾಸೆಯಾಗಿತ್ತು. ಇದೀಗ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗಿದ್ದು, ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಇಲಾಖೆ ಸಚಿವ ಸುನಿಲ್‌ ಕುಮಾರ್‌ ತಿಳಿಸಿದರು.

Advertisement

ಸೋಮವಾರ ಕೋಟ ಕಾರಂತ ಕಲಾಭವನಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಚರ್ಚಿಸುವ ಸಲುವಾಗಿ ಬುಧವಾರ ವಿಶೇಷ ಸಭೆ ಕರೆಯಲಾಗಿದೆ ಎಂದರು.

ಪ್ರೀಪೇಯ್ಡ್ ಮೀಟರ್‌ ಚರ್ಚೆ :

ಪ್ರೀಪೇಯ್ಡ್  ಮೀಟರ್‌ ಅಳವಡಿಕೆ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ, 2023 ಡಿಸೆಂಬರ್‌ನೊಳಗೆ ವಿದ್ಯುತ್‌ ಮೀಟರ್‌ಗಳಿಗೆ ಪ್ರೀಪೇಯ್ಡ್ ತಂತ್ರಜ್ಞಾನ ಅಳವಡಿಸುವ ಯೋಜನೆ ಕೇಂದ್ರ ಸರಕಾರದಿಂದ ಪ್ರಸ್ತಾವನೆಯಲ್ಲಿದ್ದು ರಾಜ್ಯದಲ್ಲೂ ಇನ್ನಷ್ಟು ಸುಧಾರಣೆಗಳೊಂದಿಗೆ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದರು.

ಸಕ್ಕರೆ ಕಾರ್ಖಾನೆ :

Advertisement

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಕೇಳಿದ ಪ್ರಶ್ನೆಗೆ, ಕೋವಿಡ್‌ನಿಂದಾಗ ಅರ್ಥಿಕ ಹಿನ್ನಡೆಯಿಂದಾಗಿ ತತ್‌ಕ್ಷಣ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ರೂಪುರೇಖೆ ಸಿದ್ಧಪಡಿಸುವ ಸಲುವಾಗಿ ಎಲ್ಲ ಶಾಸಕರನ್ನು ಒಗ್ಗೂಡಿಸಿ ಶೀಘ್ರದಲ್ಲಿ ಸಮಾಲೋಚನೆ ನಡೆಸಲಿದ್ದೇವೆ ಎಂದರು.

ದಸರಾ, ರಾಜ್ಯೋತ್ಸವ ಚರ್ಚಿಸಿ ತೀರ್ಮಾನ :

ಕುಂದಾಪುರ: ದಸರಾ, ರಾಜ್ಯೋತ್ಸವ ಆಚರಣೆ, ಪ್ರಶಸ್ತಿ ಪ್ರದಾನ,  ಸಾಹಿತ್ಯ ಪರಿಷತ್ತು ಚುನಾವಣೆ ಸಂಬಂಧ ಶುಕ್ರವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ತೀರ್ಮಾನಿಸಲಿದ್ದೇವೆ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ಸೋಮವಾರ ಇಲ್ಲಿನ ಸರಕಾರಿ ಆಸ್ಪತ್ರೆಯ ಆಕ್ಸಿಜನ್‌ ಘಟಕಕ್ಕೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದರು.

ಇಂಧನ ಇಲಾಖೆಗೆ ಸಂಬಂಧಿಸಿದ ಅರಣ್ಯ ಇಲಾಖೆಯ ಆಕ್ಷೇಪ :

ಗಳ ಕುರಿತು ಗಮನದಲ್ಲಿದೆ. ಅರಣ್ಯ ಸಚಿವರ ಜತೆ ಈ ಕುರಿತು ಚರ್ಚಿಸಿ ಅಡೆತಡೆ ನಿವಾರಿಸಿ ವಿದ್ಯುತ್‌ ವ್ಯವಸ್ಥೆ ಸರಿಪಡಿಸಲಾಗುವುದು. ಕೊಲ್ಲೂರಿನಲ್ಲಿ ಸಬ್‌ಸ್ಟೇಶನ್‌ ಸ್ಥಾಪಿಸಲಾಗುವುದು. ಅರೆಕಾಲಿಕ, ಗುತ್ತಿಗೆ ಆಧಾರಿತ ಸಿಬಂದಿ ಖಾಯಂ ಕುರಿತು ಸದ್ಯ ಯಾವುದೇ ಅವಸರದ ತೀರ್ಮಾನಗಳಿಲ್ಲ. ಉಡುಪಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಪಿಪಿಪಿ ಆಧಾರದಲ್ಲಿ ಉಡುಪಿಯ ಕೊಳಲಗಿರಿಯಲ್ಲಿ ಬರಲಿದೆ. ಪೂರ್ಣ ಪ್ರಮಾಣದ ಸರಕಾರಿ ಕಾಲೇಜು ಸ್ಥಾಪನೆಗೆ ಕೋವಿಡ್‌ ಕಾರಣದಿಂದ ಅನುದಾನದ ಸಮಸ್ಯೆ ಇದೆ ಎಂದರು. ಉಡುಪಿ ಜಿಲ್ಲೆಗೆ 50 ವೈದ್ಯರ ನೇಮಕ ಆಗಿದ್ದು ಇನ್ನಷ್ಟು ಸುಧಾರಿತ ಕ್ರಮ ಆರೋಗ್ಯ ಇಲಾಖೆಯಲ್ಲಿ ಜಿಲ್ಲೆಯಲ್ಲಿ ಆಗಲಿದೆ ಎಂದರು.

ಸಹಾಯಕ ಕಮಿಷನರ್‌ ಕೆ. ರಾಜು, ತಹಶಿಲ್ದಾರ್‌ ಕಿರಣ್‌ ಗೌರಯ್ಯ, ಕೋವಿಡ್‌ ಆಸ್ಪತ್ರೆ ನೋಡೆಲ್‌ ವೈದ್ಯಾಧಿಕಾರಿ ಡಾ| ನಾಗೇಶ್‌, ಆಹಾರ ನಿಗಮ ರಾಜ್ಯ ಉಪಾಧ್ಯಕ್ಷ ಕಿರಣ್‌ ಕೊಡ್ಗಿ ಉಪಸ್ಥಿತರಿದ್ದರು.

ಎಸ್‌ಡಿಪಿಐ ಪುಂಡಾಟ ಹತ್ತಿಕ್ಕುವೆವು :

ಈಗ ಇರುವುದು ಕಾಂಗ್ರೆಸ್‌ ಸರಕಾರ ಅಲ್ಲ. ಬಿಜೆಪಿ ಸರಕಾರ ಎನ್ನುವುದು ಎಸ್‌ಡಿಪಿಐಯವರ ಗಮನದಲ್ಲಿ ಇರಲಿ. ಖುಷಿ ಬಂದಂತೆ ನಡೆದುಕೊಳ್ಳಲು ನಾವು ಅವಕಾಶ ನೀಡುವುದಿಲ್ಲ ಎಂದು ಪುತ್ತೂರಿನಲ್ಲಿ ನಡೆದ ಸ್ವಾತಂತ್ರ್ಯ ರಥ ತಡೆ ಘಟನೆಗೆ ಸಂಬಂಧಿಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next