ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ನಾಮಿನೇಷನ್ ಭರಾಟೆ ಜೋರಾಗಿ ನಡೆದಿದೆ.
ಈ ವಾರದ ಟಾಸ್ಕ್‌ಗಳ ನಡುವೆಯೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಪ್ರತಿಬಾರಿಯಂತೆ ಈ ಬಾರಿಯೂ ನಾಮಿನೇಷನ್ ಗೆ ಕೊಟ್ಟಿರುವ ಕೆಲ ಕಾರಣಗಳು ಸ್ಪರ್ಧಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಮನೆಯಲ್ಲಿ ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ ಬೆನ್ನಿಗೆ ಚೂರಿಯನ್ನು ಚುಚ್ಚಬೇಕು. ಇದಕ್ಕೆ ಐಶ್ವರ್ಯಾ ಅವರು ಮಂಜು ಅವರ ಹೆಸರನ್ನು ಹೇಳಿ ಚೂರಿಯನ್ನು ಚುಚ್ಚಿದ್ದಾರೆ.
ಮಹಾರಾಜ ಆಗಿದ್ದಾಗ ಸದಸ್ಯರ ಮೇಲೆ ಫಿಸಿಕಲ್ ಆಗಿ ಅಟ್ಯಾಕ್ ಮಾಡಿದ್ದರು. ಇದಕ್ಕೆ ಮಂಜು ಅವರು ನಮ್ಮ ಸಿಂಹಾಸನ ಪಡೆಯೋದು ತಪ್ಪಾ. ನೀವು ಮಾತನಾಡುವ ಮಾತುಗಳು ನಿಮಗೆ ನಾಚಿಕೆ ಆಗಬೇಕೆಂದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಚುಚ್ಚೋ ತರಾ ಮಾತನಾಡುತ್ತೀರಿ ಅದಕ್ಕೆ ನಾನು ಚುಚ್ಚಿದ್ದೀನಿ ಇವತ್ತು. ಮಾನಸಿಕವಾಗಿ ಕುಗ್ಗಿಸೋಕೆ ನೋಡಿದರೆ ಕುಗ್ಗುವ ಮಗಳೇ ಅಲ್ಲ ನಾನು. ಕುಗ್ಗಿಸಿ ಏನೇನು ಚುಚ್ಚಿ ಮಾತನಾಡುತ್ತೀರೋ ಮಾತನಾಡಿ ಎಂದು ಮಂಜು ಮೇಲೆ ರೇಗಾಡಿದ್ದಾರೆ.
ಇನ್ನೊಂದು ಕಡೆ ಚೈತ್ರಾ ಅವರು ತ್ರಿವಿಕ್ರಮ್ ಅವರ ಬೆನ್ನಿಗೆ ಚೂರಿ ಹಾಕಿ ನಾಮಿನೇಟ್ ಮಾಡಿದ್ದಾರೆ. ತ್ರಿವಿಕ್ರಮ್ ಮ್ಯಾನಿಪುಲೇಟ್ ಮಾಡುತ್ತಾರೆ. ಮೋಕ್ಷಿತಾರನ್ನು ನೋಡಿದರೆ ಸೈಕೋ ಅಂತೀರಾ ಎಂದು ತ್ರಿವಿಕ್ರಮ್ ಬಗ್ಗೆ ಚೈತ್ರಾ ಹೇಳಿದ್ದಾರೆ.
ಇದಕ್ಕೆ ತ್ರಿವಿಕ್ರಮ್ ನಾಲಗೆಯಲ್ಲಿ ಶಕ್ತಿಯಿಲ್ಲ ನನಗೆ, ತೋಳಿನಲ್ಲಿ ಶಕ್ತಿ ಇರುವುದು. ನಾಲಗೆಯಲ್ಲಿ ಸಿಕ್ಸ್ ಪ್ಯಾಕ್ ಬೆಳೆಸಿಲ್ಲ ಗೊತ್ತಾಯಿತ್ತಾ. ಭಯ್ಯಾ ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ ಅಂತ ಹೇಳಿದ್ದಾರೆ ಎಂದು ಶಿಶಿರ್ ಅವರ ಬಳಿ ಚೈತ್ರಾ ಹೇಳಿದ್ದಾರೆ ಎನ್ನಲಾದ ಮಾತನ್ನು ತ್ರಿವಿಕ್ರಮ್ ಹೇಳಿದ್ದಾರೆ.
ಚೈತ್ರಾ ಮಾತನ್ನು ಕೇಳಿ ಆ ವರ್ಡ್ ನಾನು ಯೂಸ್ ಮಾಡಿಲ್ಲ. ಆ ರೀತಿ ನಾನು ಹೇಳಿದ್ದರೆ ನನ್ನ ನಾಲಗೆ ಬಿದ್ದೋಗ್ಲಿ ಎಂದಿದ್ದಾರೆ.
ತ್ರಿವಿಕ್ರಮ್ ಮಾತು ಕೇಳಿ ಶಿಶಿರ್ ಗರಂ ಆಗಿದ್ದಾರೆ. ಇರೀ ಒಂದು ನಿಮಿಷ ಎಲ್ಲ. ಈ ಬಗ್ಗೆ ಕ್ಲಾರಿಟಿ ಸಿಗುವವರೆಗೆ ನಾನು ಇಲ್ಲಿಂದ ಮೂವ್ ಆಗಲ್ಲ. ಮಾನ ಮರ್ಯಾದೆ ಮೂರು ಕಳೆದುಕೊಳ್ಳೋಕೆ ಬಂದಿಲ್ಲ ಇಲ್ಲಿ. ನಾಳೆಯಿಂದ ಇಲ್ಲಿ ಇರಲ್ಲ ನಾನು ಎಂದು ಸಿಟ್ಟಿನಿಂದಲೇ ಹೇಳಿದ್ದಾರೆ.
ಈ ಸಂಚಿಕೆ ಬುಧವಾರ (ಡಿ.4 ರಂದು) ರಾತ್ರಿ ಪ್ರಸಾರವಾಗಲಿದೆ.