ಸುರತ್ಕಲ್: ಸನಾತನ ಹಿಂದೂ ಸಂಸ್ಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹಿಂದೂ ಸಮಾಜ ಭಾರತದ ಭದ್ರ ಬುನಾದಿ, ಹಿಂದೂ ವಿಚಾರಧಾರೆಗಳು ವಿಶ್ವಮಾನ್ಯ. ಅವುಗಳನ್ನು ಉಳಿಸಿಕೊಳ್ಳಲು ಯಾವುದೇ ಪರಿಸ್ಥಿತಿಯಲ್ಲೂ ನಾವು ಕಟಿಬದ್ಧರಾಗಬೇಕಿದೆ ಎಂದು ಬೆಂಗಳೂರಿನ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಅವರು ಹಿಂದೂ ಜಾಗರಣ ವೇದಿಕೆ ಸುರತ್ಕಲ್ ನಗರ ಸಮಿತೀ ಅಶ್ರಯದಲ್ಲಿ ಸುರತ್ಕಲ್‌ನಲ್ಲಿ ನಡೆದ ಕರಪತ್ರ ಅಭಿಯಾನ ಹಾಗೂ ಬೃಹತ್ ಹಿಂದೂ ಯುವ ಸಮ್ಮಿಲನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಮಾತೆಯರ ಜವಾಬ್ದಾರಿ ಹೆಚ್ಚು ಭಾರತೀಯ ಕೌಟುಂಬಿಕ ಪದ್ಧತಿಯಲ್ಲಿ ಮಾತೆಯರಿಗೆ ವಿಶಿಷ್ಟ ಗೌರವವಿದೆ ನಮ್ಮ ಹಿಂದೂ ಸಮಾಜದ ಆಳಿವು ಉಳಿವು ಅಕೆಯ ಕೈಯಲ್ಲಿದೆ. ಉತ್ತಮ ವಿಚಾರಧಾರೆಗಳನ್ನು ತಮ್ಮ ಮಕ್ಕಳಿಗೆ ತಿಳಿ ಹೇಳಿ ಹಿಂದೂ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದ ಅವರು, ಅನ್ಯ ಧರ್ಮೀಯರ ಆಮಿಷಗಳಿಗೆ ಬಲಿಯಾಗದೆ ಮತಾಂತರ, ಲವ್ ಜೆಹಾದ್ ವಿರುದ್ಧ ಹೋರಾಟ ನಡೆಸುವ ಮಹತ್ವದ ಹೊಣೆಗಾರಿಕೆ ಅಕೆಯ ಮೇಲಿದೆ ಎಂದರು.
ಇದನ್ನೂ ಓದಿ:ಭಾರತದಲ್ಲಿ ಬೂಸ್ಟರ್ ಡೋಸ್ ಲಸಿಕೆಯ ಅವಶ್ಯಕತೆಯಿಲ್ಲ : ಐಸಿಎಂಆರ್
ವೇದಿಕೆಯ ದಕ್ಷಿಣ ಪ್ರಂತ ಉಪಾಧ್ಯಕ್ಷ ಕಿಶೋರ್ ಕೊಡಿಕಲ್ ಮಾತನಾಡಿದರು. ಖಂಡಿಗೆ ಬೀಡು ಗಡಿ ಪ್ರಧಾನರಾದ ಅದಿತ್ಯ ಮುಕ್ಕಾಲ್ದಿ ಕಾರ್ಯಕ್ರಮ ಉದ್ಘಾಟಿಸಿದರು. ಹಿಂಜಾವೇ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಜಿಲ್ಲಾ ಅಧ್ಯಕ್ಷ ಹರೀಶ್ ಶಕ್ತಿನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಗುಂಡಳಿಕೆ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಮುಂಚೂರು, ಜಿಲ್ಲಾ ಸಂಯೋಜಕ ಪುಷ್ಪರಾಜ್ , ನಗರ ಕಾರ್ಯದರ್ಶಿ ಭವಾನಿ ಶಂಕರ್ ಉಪಸ್ಥಿತರಿದ್ದರು.ಜಿಲ್ಲಾ ಸಂಪರ್ಕ್ ಬಾಲಕೃಷ್ಣ ಮುಂಚೂರು ಸ್ವಾಗತಿಸಿ, ನಿತೀಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.