Advertisement

ಸಂತ್ರಸ್ತರಿಗೆ ಸ್ಪಂದಿಸಿ: ಎಂ.ಬಿ. ಪಾಟೀಲ್‌

11:17 PM Sep 16, 2019 | Lakshmi GovindaRaju |

ಬೆಂಗಳೂರು: ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲಾಗದೇ ತನ್ನ ವೈಫ‌ಲ್ಯತೆಯನ್ನು ಮುಚ್ಚಿಕೊಳ್ಳಲು ಹಗರಣಗಳ ತನಿಖೆ ಹೆಸರಲ್ಲಿ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್‌ ಆರೋಪಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹದಿಂದ ರೈತರು, ಬಡವರು ಬೀದಿಗೆ ಬಿದ್ದಿದ್ದಾರೆ. ಊಟಕ್ಕಿಲ್ಲದೇ ಪರದಾಡುತ್ತಿದ್ದಾರೆ.

Advertisement

ಗೊತ್ತುಗುರಿಯಿಲ್ಲದ ಈ ಸರ್ಕಾರದಲ್ಲಿ ಯಾರು ಈ ಕುರಿತು ತಡೆಕೆಡಿಸಿಕೊಳ್ಳುತ್ತಿಲ್ಲ. ಇದೊಂದು ಅತ್ಯಂತ ಕೆಟ್ಟ ಸರ್ಕಾರ ಎಂದು ಟೀಕಿಸಿದರು. ಪ್ರವಾಹ ಪೀಡಿತರಿಗೆ ಸರಿಯಾದ ಪರಿಹಾರ ನೀಡಲಾಗದೇ ವೈಫ‌ಲ್ಯವನ್ನು ಮುಚ್ಚಿಕೊಳ್ಳಲು ತನಿಖೆ ಹೆಸರಿನಲ್ಲಿ ವಿಷಯಾಂತರ ಮಾಡುತ್ತಿದ್ದಾರೆ. ಈ ಸರ್ಕಾರ ಏನೇ ತಂತ್ರ ಬಳಸಿದರೂ ಸರ್ಕಾರಕ್ಕೆ ಜನರ ಶಾಪ ತಟ್ಟುವುದು ಖಚಿತ ಎಂದರು.

ನಾಚಿಕೆಗೇಡು: ಈಶ್ವರಪ್ಪಅವರಂಥ ಹಿರಿಯರು ಮುಸಲ್ಮಾನರಿಗೆ ಅವಮಾನ ವಾಗುವ ರೀತಿ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಸರ್ಕಾರ ಸಂತ್ರಸ್ತರಿಗೆ ಮೊದಲು ಬದುಕು ಕಟ್ಟಿಕೊಡಬೇಕು. ಕೇಂದ್ರದಿಂದ ಹೆಚ್ಚಿನ ಪರಿಹಾರ ದೊರೆಯುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಒತ್ತಡ ಹೇರಬೇಕು. ದೂರವಾಣಿ ಕದ್ದಾಲಿಕೆ, ಸಿಬಿಐ ತನಿಖೆ ಎಂದು ಪಲಾಯಾನವಾದ ಮಾಡಬಾರದು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next