ಹೊಸದಿಲ್ಲಿ: ತಮ್ಮ ಪಕ್ಷಕ್ಕೆ ಸಮಂಜಸವಾದ ಗೌರವ ನೀಡದಿದ್ದರೆ ಎನ್‌ಡಿಎಯಿಂದ ಹೊರನಡೆಯುತ್ತೇವೆ ಎಂದು ಬಿಹಾರದ ಆರ್‌ಎಲ್‌ಜೆಪಿ ಮುಖ್ಯಸ್ಥ ಕೇಂದ್ರ ಸಚಿವ ಪಶುಪತಿ ಪರಸ್ ಹೇಳಿದ್ದಾರೆ.
ಬಿಜೆಪಿ ತನ್ನ ಎಲ್‌ಜೆಪಿ ಬಣವನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ ಎಂದು ಶುಕ್ರವಾರ ಆರೋಪಿಸಿದ್ದು, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತೊರೆಯುವುದಾಗಿ ಹೇಳಿದ್ದಾರೆ.
ಹಾಜಿಪುರ ಕ್ಷೇತ್ರದಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಪ್ರತ್ಯೇಕ ಬಣವನ್ನು ಮುನ್ನಡೆಸುತ್ತಿರುವ ತಮ್ಮ ಸಂಬಂಧಿ ಚಿರಾಗ್ ಪಾಸ್ವಾನ್ ಅವರೊಂದಿಗೆ ಬಿಜೆಪಿ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದ್ದರಿಂದ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
“ನಾವು ಬಿಹಾರದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಅಧಿಕೃತ ಘೋಷಣೆಗಾಗಿ ಕಾಯುತ್ತೇವೆ ಮತ್ತು ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ.ಹಾಜಿಪುರ ಕ್ಷೇತ್ರದಲ್ಲಿ ನಾವು ಸ್ಪರ್ಧಿಸುವುದು ಖಚಿತ” ಎಂದು ಹೇಳಿದ್ದಾರೆ.
2020 ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ, ಲೋಕ ಜನಶಕ್ತಿ ಪಕ್ಷ ಎರಡು ಬಣಗಳಾಯಿತು.ಪಾಸ್ವಾನ್ ಅವರ ಸಹೋದರ ಪರಾಸ್, ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷವನ್ನು (RLJP) ಮುನ್ನಡೆಸುತ್ತಿದ್ದಾರೆ. ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಅವರು ಲೋಕ ಜನಶಕ್ತಿ ಪಕ್ಷವನ್ನು (ರಾಮ್ ವಿಲಾಸ್) ಮುನ್ನಡೆಸುತ್ತಿದ್ದಾರೆ, ಎರಡೂ ಬಣಗಳು ಬಿಜೆಪಿ ನೇತೃತ್ವದ NDA ಭಾಗವಾಗಿದೆ. ಹಾಜಿಪುರದಲ್ಲಿ 2014 ರಾಮ್ ವಿಲಾಸ್ ಪಾಸ್ವಾನ್ ಗೆದ್ದಿದ್ದರು.2019 ಪಶುಪತಿ ಕುಮಾರ್ ಪರಾಸ್ ಜಯ ಸಾಧಿಸಿದ್ದರು.