Advertisement

ಫಲಿತಾಂಶಕ್ಕೆ ಮೊದಲೇ ಸಂದೇಹಗಳಿಗೆ ಪರಿಹಾರ

12:54 AM May 18, 2022 | Team Udayavani |

ಮಂಗಳೂರು: ಎಸೆಸೆಲ್ಸಿ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ ಇರುವಾಗಲೇ ಮುಂದೇನು ಮಾಡಬೇಕು, ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿದ್ಯಾರ್ಥಿಗಳ, ಹೆತ್ತವರ ಗೊಂದಲ ಅನುಮಾನ ಬಗೆಹರಿಸಲು “ಉದಯವಾಣಿ’ ಮಂಗಳವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ಎಸೆಸೆಲ್ಸಿ ಅನಂತರ ಎಷ್ಟೆಲ್ಲ ಅವಕಾಶ ಎಂಬ ಕಾರ್ಯಕ್ರಮ ನೆರವಾಯಿತು.

Advertisement

ಉರ್ವ ಕೆನರಾ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಆಳ್ವಾಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಕುರಿಯನ್‌, ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಡಾ| ಅನಂತ ಜಿ. ಪ್ರಭು, ಮೂಲ್ಕಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ವಾಸುದೇವ ಬೆಳ್ಳೆ ಮಾಹಿತಿಯಿತ್ತರು.

ಮುಖ್ಯವಾಗಿ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವ ಮೊದಲು ವಿದ್ಯಾರ್ಥಿಗಳು ತಮ್ಮ ಶಕ್ತಿಯೇನು, ದೌರ್ಬಲ್ಯಗಳೇನು ಎನ್ನುವುದನ್ನು ಅರಿತುಕೊಂಡು ಮುಂದಿನ ಹೆಜ್ಜೆ ಇರಿಸಬೇಕು ಎಂಬ ಒಟ್ಟು ಅಭಿಪ್ರಾಯದೊಂದಿಗೆ ವಿಜ್ಞಾನ, ಕಲೆ ಹಾಗೂ ವಾಣಿಜ್ಯ ಅಲ್ಲದೆ ಐಟಿಐ, ಡಿಪ್ಲೊಮಾ ಕೋರ್ಸ್‌ಗಳನ್ನು ಯಾವ ರೀತಿ ಸೇರಿಕೊಂಡು ಮುಂದಡಿ ಇಡಬಹುದು ಎಂಬ ಬಗ್ಗೆ ಪರಿಣಿತರು ಸಮಗ್ರ ಮಾಹಿತಿ ನೀಡಿದರು.

ಹೆತ್ತವರು, ವಿದ್ಯಾರ್ಥಿಗಳು ಪ್ರಶ್ನೋತ್ತರದಲ್ಲಿ ಭಾಗಿಯಾಗುವ ಮೂಲಕ ಅನುಮಾನಗಳನ್ನು ಬಗೆಹರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next