Advertisement

ವಸತಿ ನಿಲಯ ಕಟ್ಟಡ ಕಾಮಗಾರಿ ಶೀಘ್ರ ಆರಂಭ

04:10 PM Aug 30, 2017 | |

ಹಗರಿಬೊಮ್ಮನಹಳ್ಳಿ: ನಿವೇಶನದ ಸಮಸ್ಯೆಯಿಂದ ತಾಲೂಕಿನ ತೆಲುಗೋಳಿ ಗ್ರಾಮದ ಹಿಂದುಳಿದ ವರ್ಗಗಳ  ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡ ನಿರ್ಮಾಣ ನೆನಗುದಿಗೆ ಬಿದ್ದಿತ್ತು. ಆದರೆ, ಗ್ರಾಮದ ದಾನಿ ಬಳಿಗೇರ್‌ ವಿರೂಪಾಕ್ಷಪ್ಪ 1 ಎಕ್ಕರೆ ಜಮೀನು ದಾನವಾಗಿ ನೀಡುವ ಮೂಲಕ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ನೆರವಾಗಿದ್ದಾರೆ.

Advertisement

ತಾಪಂ ಸದಸ್ಯ ಪಾಂಡುನಾಯ್ಕ ಮಾತನಾಡಿ, ವಸತಿ ನಿಲಯ ನಿರ್ಮಾಣಕ್ಕೆ ಗ್ರಾಮದ ಪ್ರೌಢಶಾಲೆ ಬಳಿಯ 1 ಎಕರೆ ವಿಸ್ತೀರ್ಣದ ಪ್ರದೇಶವನ್ನು ಗ್ರಾಮದ ಬಳಿಗೇರ್‌ ವಿರೂಪಾಕ್ಷಪ್ಪ ಇವರು ದಾನವಾಗಿ ನೀಡಿದ್ದಾರೆ. ಅಲ್ಲದೆ ಈಗಾಗಲೇ ನಿವೇಶನವನ್ನು ಕಟ್ಟಡ ನಿರ್ಮಾಣದ ಉದ್ದೇಶಕ್ಕೆ ರಾಜ್ಯಪಾಲರಿಗೆ ತಹಶೀಲ್ದಾರ್‌ ಮೂಲಕ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಗ್ರಾಮದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ತೆಲುಗೋಳಿ ಗ್ರಾಮಸ್ಥರು ಕೂಡಲೇ ವಸತಿ ನಿಲಯ ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಶಾಸಕ ಭೀಮಾನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ದಾನಿ ವಿರೂಪಾಕ್ಷಪ್ಪ ಅವರಿಗೆ ಶಾಸಕ ಭೀಮಾನಾಯ್ಕ ಸನ್ಮಾನಿಸಿದರು. ಈ ಸಂದ ರ್ಭದಲ್ಲಿ ಮಾತನಾಡಿದ ಶಾಸಕರು, ಶೀಘ್ರದಲ್ಲೆ 2.53 ಕೋಟಿ ರೂ.ವೆಚ್ಚದಲ್ಲಿ ವಸತಿ ನಿಲಯ ಕಟ್ಟಡಕ್ಕೆ ಚಾಲನೆ ನೀಡಲಾಗುವುದು. ವಿರೂಪಾಕ್ಷಪ್ಪ ಕಟ್ಟಡ ನಿರ್ಮಾಣಕ್ಕೆ ನಿವೇಶನ ದಾನ ಮಾಡಿರುವುದು ಸ್ವಾಗತಾರ್ಹ ಎಂದರು.

ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್‌, ದಳಪತಿ ಕೊಟ್ರಯ್ಯ, ಕೆ.ಪಾಂಡುರಂಗ, ಗ್ರಾಪಂ ಸದಸ್ಯರಾದ ರೇಖಾ ರಮೇಶ್‌, ಕೆ.ಜಂಬಣ್ಣ, ರೇಣುಕಾ ಯಂಕರೆಡ್ಡಿ, ಜೆ.ರವಿಯಪ್ಪ, ಅಂಬಿಗರ ನಿಂಗಪ್ಪ, ಮಲ್ಲಿಕಾರ್ಜುನಗೌಡ, ರಾಜಶೇಖರರೆಡ್ಡಿ, ಮ್ಯಗೇರಿ ಬಸವರಾಜ, ಕರ್ಕಿಹಳ್ಳಿ ಪಾಂಡಪ್ಪ, ದಾಸರ ಗಿರೀಶ್‌, ನಿಂಗಪ್ಪ, ಬೀಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next