Advertisement
ಸುಪ್ರೀಂ ಕೋರ್ಟ್ ಮುಂದೆ ಸರಕಾರ ನೀಡಿರುವ ಹೇಳಿಕೆ ಪರಿಣಾಮ ಎಲ್ಲರೂ ಮೀಸಲಾತಿ ವಂಚನೆಗೆ ಒಳಗಾದಂತಾಗಿದೆ. ಯಾರೂ ಯಾವುದೇ ಮೀಸಲಾತಿ ಪಡೆಯಲು ಸಾಧ್ಯವಾಗುವುದಿಲ್ಲ. ಹಿಂದೆ ಇದ್ದಂತೆ ಲಿಂಗಾಯತರಿಗೆ 3ಬಿ, ಒಕ್ಕಲಿಗರಿಗೆ 3ಎ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕ್ರಮವಾಗಿ ಶೇ. 15 ಮತ್ತು ಶೇ. 3ಕ್ಕೆ ಸೀಮಿತಗೊಳ್ಳಲಿದೆ. ಇದು ಡಬಲ್ ಎಂಜಿನ್ ದೋಖಾ ಎಂದು ಟೀಕಿಸಿರುವ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಮಾಡದ ಸರಕಾರ ರಾಜ್ಯದ ಜನರೊಂದಿಗೆ ವಂಚನೆ ಆಟವಾಡಿದ್ದು ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ, ರಾಜ್ಯ ಸರಕಾರಗಳ ಮೀಸಲಾತಿ ವಂಚನೆಯ ಉದ್ಯೋಗ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಶೆಡ್ಯುಲ್‌ನಲ್ಲಿ ಯಾಕೆ ಸೇರಿಸಿಲ್ಲ?
2023ರ ಮಾ. 14ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೆಚ್ಚುವರಿ ಮೀಸಲಾತಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದು ಯಾಕೆ? ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕಾಗಿ ಹೆಚ್ಚಿದ ಮೀಸಲಾತಿಯ ಕಾನೂನನ್ನು ಕೇಂದ್ರವು ಸಂವಿಧಾನದ 9ನೇ ಶೆಡ್ಯುಲ್‌ನಲ್ಲಿ ಯಾಕೆ ಸೇರಿಸಲಿಲ್ಲ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.