Advertisement

ಕಾನೂನು ವಿವಿಯಲ್ಲಿ ಕನ್ನಡಿಗರಿಗೆ ಮೀಸಲಾತಿ

12:29 PM May 04, 2020 | Suhan S |

ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆ ಎಂದು ಕರೆಯಲ್ಪಡುವ “ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ’ಯಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು ಎಂಬ ಬೇಡಿಕೆಗೆ ಅಧಿಕೃತ ಮುದ್ರೆ ಬಿದ್ದಿದ್ದು, ಕನ್ನಡಿಗರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸುವ “ದಿ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ (ತಿದ್ದುಪಡಿ) ಅಧಿನಿಯಮ- 2020 ಇದಕ್ಕೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದೆ.

Advertisement

ವಿಧಾನಸಭೆಯ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದ ತಿದ್ದುಪಡಿ ಅಧಿನಿಯಮಕ್ಕೆ ಏ.27ರಂದು ರಾಜ್ಯಪಾಲರು ಒಪ್ಪಿಗೆ ನೀಡಿದ್ದು ರಾಜ್ಯ ಸರ್ಕಾರ ಅಧಿಕೃತ ರಾಜ್ಯಪತ್ರದಲ್ಲಿ ತಿದ್ದುಪಡಿ ಅಧಿನಿಯಮವನ್ನು ಪ್ರಕಟಿಸಿದೆ. ತಿದ್ದುಪಡಿ ಅಧಿನಿಯದಂತೆ ರಾಷ್ಟ್ರೀಯ ಕಾನೂನು ವಿವಿಯು ಕರ್ನಾಟಕದ ವಿದ್ಯಾರ್ಥಿ ಗಳಿಗೆ ಶೇ.25ರಷ್ಟು ಸೀಟುಗಳನ್ನು ಸಮತಲವಾಗಿ ಮೀಸ ಲಿರಿಸತಕ್ಕದ್ದು. ರಾಜ್ಯಪಾಲರ ಒಪ್ಪಿಗೆ ಸಿಕ್ಕಿರುವುದಕ್ಕೆ ರಾಷ್ಟ್ರೀಯ ಕಾನೂನು ವಿವಿ ಶೈಕ್ಷಣಿಕ ಸಮಿತಿ ಸದಸ್ಯರಾಗಿರುವ ಹೈಕೋರ್ಟ್‌ ವಕೀಲ ಅರುಣ್‌ ಶ್ಯಾಂ ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next