Advertisement

ಫೆ. 1ರಿಂದ ಮೀಸಲಾತಿ

12:30 AM Jan 25, 2019 | |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ, ಸಾಮಾನ್ಯ ವರ್ಗದ ಬಡವರಿಗೆ ಶೇ. 10ರ ಮೀಸಲಾತಿ ಕಲ್ಪಿಸುವ ನಿಯಮವು ಫೆ.1ರಿಂದ ರಾಷ್ಟ್ರವ್ಯಾಪಿ ಜಾರಿಗೆ ಬರಲಿದೆ. ಅಂದಿನಿಂದ ಕೇಂದ್ರ ಸರಕಾರಿ ಹುದ್ದೆಗಳ ನೇಮಕದಲ್ಲಿ ಈ ಮೀಸಲಾತಿ ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸಿಬಂದಿ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ, ಮೀಸಲಾತಿ ಮಾರ್ಗಸೂಚಿಗಳನ್ನು ಹಾಗೂ ಜಾತಿ ಆಧಾರಿತ ಕೋಟಾಗಳ ಬಗ್ಗೆ ಮಾಹಿತಿಯನ್ನು ಮತ್ತೂಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ. 

Advertisement

ಸಾಮಾನ್ಯ ವರ್ಗದ ಆದಾಯದ ಪ್ರಮಾಣ ಪತ್ರಗಳು ಆಯಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ತಹಶೀಲ್ದಾರ್‌ರಿಂದ ಕಡ್ಡಾಯ ವಾಗಿ ಪ್ರಮಾಣೀಕರಿಸಿರಬೇಕೆಂದು ಸೂಚಿಸಿದೆ. ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿಗೆ ಜ.9ರಂದು ಸಂಸತ್‌ ಒಪ್ಪಿಗೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next