Advertisement

ಹಿಂದುಳಿದ‌ ವರ್ಗಕ್ಕೆ ಮೀಸಲು-ಬಿಜೆಪಿ ಸಂಭ್ರಮಾಚರಣೆ

11:38 AM Jan 12, 2019 | |

ವಿಜಯಪುರ: ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ. 10 ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರದ ನೀತಿ ಬೆಂಬಲಿಸಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿದ್ದೇಶ್ವರ ದೇವಸ್ಥಾನದ ಎದುರು ಸಿಹಿ ಹಂಚಿ ಸಂಭ್ರಮ ಅಚರಿಸಿದರು.

Advertisement

ಈ ವೇಳೆ ಮಾತನಾಡಿದ ಮುಖಂಡರು, ದೇಶದಲ್ಲಿ ರಾಜಕೀಯ ಪಕ್ಷಗಳ ರಾಜಕೀಯ ಇಚ್ಛಾಶಕ್ತಿ ಕೊರತೆ ಪರಿಣಾಮ ಹಲವು ವರ್ಷಗಳಿಂದ ದೇಶದ ಅರ್ಥಿಕ ಹಿಂದುಳಿದ ವರ್ಗಗಳ ಬಡ ಯುವಕರು ಮೀಸಲಾತಿ ಸೌಲಭ್ಯ ಇಲ್ಲದೇ ಆವಕಾಶ ವಂಚಿತರಾಗುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಹಿಂದುಳಿದ ವರ್ಗಗಳ ಜನರ ಸಂಕಷ್ಟ ಅರಿತು ಪ್ರಸಕ್ತ ಸಂಸತ್‌ ಅಧಿವೇಶನದಲ್ಲೇ ಹಿಂದುಳಿದ ವರ್ಗಗಳಿಗೆ ಶೇ. 10 ಮೀಸಲಾತಿ ಮಸೂದೆ ಮಂಡಿಸಿ ಆನುಮೋದನೆ ಪಡೆಯುವ ಮೂಲಕ ಐತಿಹಾಸಿಕ ಹೆಜ್ಜೆ ಇರಿಸಿದ್ದಾರೆ. ಅ ಮೂಲಕ ಪ್ರಧಾನಿ ಮೋದಿ ಅವರು ದೇಶದ ಜನರ ಆಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ವಾಲಿ ಮಾತನಾಡಿ, 1947ರ ನಂತರ ದೇಶದಲ್ಲಿ ಬಹುಪಾಲು ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸಿದ್ದರೂ ಸ್ವಾತಂತ್ರ್ಯ ನಂತರದ 72 ವರ್ಷಗಳಾದರು ಅರ್ಥಿಕ ಹಿಂದುಳಿದ ವರ್ಗಗಳ ಜನರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ. ತಮ್ಮ ಓಟ್ ಬ್ಯಾಂಕ್‌ ರಾಜಕಾರಣಕ್ಕಾಗಿ ಕೆಲವು ಜಾತಿಗಳಿಗೆ ಮಾತ್ರ ಮೀಸಲಾತಿ ನೀಡಿ ತುಷ್ಟೀಕರಣ ರಾಜಕಾರಣ ಮಾಡುತ್ತಿತ್ತು. ಅ ಮೂಲಕ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಸಮಾಜ, ಜಾತಿಗಳನ್ನು ಒಡೆದಾಳುವ ನೀತಿ ಅನುಸರಿಸುತ್ತಿತ್ತು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಇರುವ ಮೀಸಲಾತಿ ಪದ್ಧತಿ ಮತ್ತು ಜಾತಿ ಸಮೀಕರಣ ಬದಲಿಸದೆ, ಈಗಿರುವ ಯಾವ ಮೀಸಲು ಸಮುದಾಯಕ್ಕೂ ಆನ್ಯಾಯವಾಗದಂತೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ. 10 ಮೀಸಲಾತಿ ಕಲ್ಪಿಸಿ ಇತಿಹಾಸ ಬರೆದಿದ್ದಾರೆ ಎಂದು ಬಣ್ಣಿಸಿದರು.

ಯಾವ ಜಾತಿ ಹಾಗೂ ರಾಜಕೀಯ ಪಕ್ಷಗಳು ವಿರೋಧ ಮಾಡದ ಮೀಸಲಾತಿ ಪದ್ಧತಿ ಇದಾಗಿದ್ದು, ಲೋಕಸಭೆ, ರಾಜ್ಯಸಭೆ ಎರಡರಲ್ಲೂ ಅಂಗೀಕಾರ ಪಡೆದಿದೆ. ಇದರಿಂದ ದೇಶದ ಬಹುಪಾಲು ಜನರಿಗೆ ಸಂತಸವಾಗಿದ್ದು, ಸಾಮಾನ್ಯ ವರ್ಗದಲ್ಲಿ ಬರುವ ಅರ್ಥಿಕ ಹಿಂದುಳಿದ ಜಾತಿಗಳಿಗೆ ಯುವ ಸಮೂಹಕ್ಕೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಅನುಕೂಲವಾಗಲಿದೆ. ಐತಿಹಾಸಿಕವಾದ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ದೇಶದ ಜನರ ಹಲವು ದಶಕಗಳ ಕನಸು ನನಸಾಗಿದ್ದಾರೆ ಎಂದು ಶ್ಲಾ ಸಿದರು.

Advertisement

ಯುವ ಮೋರ್ಚಾ ಪದಾಧಿಕಾರಿಗಳಾದ ಕಾಂತು ಶಿಂಧೆ, ಮಹೇಳ ಒಡೆಯರ್‌, ರಾಜು ಹುನ್ನೂರ, ಸಚೀನ ಪಾಟೀಲ, ಪ್ರಶಾಂತ ಅಗಸರ, ಅನೀಲ ಉಪ್ಪಾರ, ಬಸಯ್ನಾ ಗೊಳಸಂಗಿಮಠ, ಕೃಷ್ಣಾ ಗುನ್ನಾಳಕರ, ಗುರುರಾಜ ರಾವ್‌, ಸತೀಶ ಪೀರನಾಯಕ್‌, ವಿನಾಯಕ ದಹಿಂದೆ, ಶಿವಾಜಿ ಪಾಟೀಲ, ಸನ್ನಿ ಗವಿಮಠ, ಶರಣು ಲಾಳಸಂಗಿ, ಶರತಸಿಂಗ್‌ ರಜಪೂತ, ವಿಜಯ ಹಿರೇಮಠ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next