Advertisement

ಜೈನ ವೀರನಿಷಿಧಿ-ಮಹಾಸತಿ ಕಲ್ಲುಗಳ ಸಂಶೋಧನೆ

12:11 PM Jul 27, 2020 | mahesh |

ಬಾಳೆಹೊನ್ನೂರು: ಪಟ್ಟಣದ ಮಾರ್ಕಾಂಡೇಶ್ವರ ದೇವಾಲಯದ ಆವರಣದಲ್ಲಿ ಸಾಂತರರ ಕಾಲದ ಒಂದು ಜೈನರ ವೀರನಿಷಿಧಿಗಲ್ಲು, ಬೈರವರಸರ ಕಾಲದ ಒಂದು ಮಹಾಸತಿಕಲ್ಲು, ಒಂದು ವೀರ ಮಹಾಸತಿಕಲ್ಲು ಹಾಗೂ ಎರಡು ಮಹಾಸತಿಕಲ್ಲನ್ನು ಜಿಲ್ಲೆಯ ಹವ್ಯಾಸಿ ಇತಿಹಾಸ ಸಂಶೋಧಕ ಎಚ್‌.ಆರ್‌. ಪಾಂಡುರಂಗ ಸಂಶೋಧನೆ ಮಾಡಿದ್ದಾರೆ.

Advertisement

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು, ಸಾಂತರರು ಹಾಗೂ ಬೈರವರಸರು ಮತ್ತು ಕೆಳದಿ ನಾಯಕರ ಕಾಲದಲ್ಲಿ ಐತಿಹಾಸಿಕ ವ್ಯಾಪಾರ ಕೇಂದ್ರವಾಗಿದ್ದ ಗ್ರಾಮ ಬಾಳೆಹೊನ್ನೂರಾಗಿದ್ದು, ಸಾಂತರರ ಕಾಲದ ಸಲ್ಲೇಖನ ವ್ರತಾಚರಣೆ ಹಾಗೂ ಬೈರವರಸರ ಕಾಲದ ಮಹಾಸತಿ ಆಚರಣೆಗಳ ಕುರಿತು ಸಂಶೋದಿಸಿ ಬಾಳೆಹೊನ್ನೂರಿನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಾಗಿದೆ ಎಂದು ತಿಳಿಸಿದ್ದಾರೆ.

ಜೈನ ವೀರನಿಷಿಧಿ ಕಲ್ಲು: ದೇವಾಲಯದ ಬಲಪಾರ್ಶ್ವದಲ್ಲಿರುವ 4.6 ಅಡಿ ಎತ್ತರದ ಕಣ ಶಿಲೆಯ ಈ ಸ್ಮಾರಕದಲ್ಲಿ ಮೂರು ಫಲಕಗಳಿದ್ದು ಕೆಳಗಿನ ಫಲಕದಲ್ಲಿ
ಶ್ವೇತಛತ್ರಿ ಸಹಿತ ಅಶ್ವಾರೋಹಿ ವೀರನೊಬ್ಬ ಸೈನಿಕರೊಂದಿಗೆ ಯುದ್ಧಕ್ಕೆ ಹೊರಟ ಶಿಲ್ಪದ ಚಿತ್ರಣವಿದೆ. ಮಧ್ಯದ ಫಲಕದಲ್ಲಿ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ವೀರನನ್ನು ಚಾಮರಧಾರಿ ದೇವಕನ್ಯೆಯರು ತಮ್ಮ ತೋಳುಗಳಲ್ಲಿ ಎತ್ತಿಕೊಂಡು ಸ್ವಗಕ್ಕೆ ಕೊಂಡೊಯ್ಯುವ ಚಿತ್ರಣವಿದೆ.

ದೇವಾಲಯದ ಎದುರು ಎಡಗಡೆ
ದಿಬ್ಬದ ಮೇಲೆ ದೇವಾಲಯಕ್ಕೆ ಅಭಿಮುಖವಾಗಿ ನಿಂತ 4.6 ಅಡಿ ಎತ್ತರದ ಕಣಶಿಲೆಯ ಮತ್ತೂಂದು ಮಹಾಸತಿ ಕಲ್ಲು ವಿಶೇಷವಾಗಿದ್ದು, ದೇವಾಲಯದ ಚಿತ್ರಕಂಬದ ರೂಪದಲ್ಲಿದ್ದು ಎರಡು ಭಾಗ ಹೊಂದಿದೆ. ಕಂಬದ ಕೆಳಗಿನ ಫಲಕ ಪೀಠಭಾಗವಾಗಿದೆ. ಇದೂ ಸಹ ಹದಿನೇಳನೆ ಶತಮಾನದ್ದಾಗಿದ್ದು, ಬೈರವರಸರ ಕಾಲದ ಸ್ಮಾರಕವಾಗಿದೆ.

ಮೇಲ್ಕಂಡಂತೆ ಸಲ್ಲೇಖನ ವ್ರತದ ಮೂಲಕ ಪ್ರಾಣ ತ್ಯಾಗ ಮಾಡಿದ ವೀರನ ವೀರನಿಷ ಧಿಗಲ್ಲು ಹಾಗೂ ಮಹಾಸತಿ ಆಚರಿಸಿ ಪತಿಯೊಡನೆ ಪ್ರಾಣತ್ಯಾಗ ಮಾಡಿದ ಸತಿಯರ ಮಹಾಸತಿಕಲ್ಲು ಸ್ಮಾರಕಗಳು ಹತ್ತನೇ ಶತಮಾನದಿಂದ ಹದಿನೇಳನೆ ಶತಮಾನದವರೆಗೂ ಬಾಳಿದ ಬಾಳೆಹೊನ್ನೂರಿನ ಮಹಾಪ್ರಜೆಗಳ ಪರಾಕ್ರಮ- ತ್ಯಾಗ- ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ ಎಂದು ಸಂಶೋಧಕ ಪಾಂಡುರಂಗ ತಿಳಿಸಿದ್ದಾರೆ.

Advertisement

ಈ ಸ್ಮಾರಕಗಳ ಅಧ್ಯಯನದಲ್ಲಿ ಮಾರ್ಗದರ್ಶನವನ್ನು ಇತಿಹಾಸ ವಿದ್ವಾಂಸಕ ಎಂ.ಜಿ. ಮಂಜುನಾಥ್‌, ಶೇಷ ಶಾಸ್ತ್ರಿಗಳು ಮಾಡಿದ್ದಾರೆ. ಕ್ಷೇತ್ರ ಕಾರ್ಯದಲ್ಲಿ
ಮಾರ್ಕಾಂಡೇಶ್ವರ ದೇಗುಲದ ಅರ್ಚಕ ಕುಂದೂರು ಪ್ರಕಾಶ್‌ ಭಟ್‌ ಅವರು ಸಹಕರಿಸಿದ್ದರು ಎಂದು ಪಾಂಡುರಂಗ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next