Advertisement

ರಾಜ್ಯಕ್ಕೆ1 ಕೋಟಿ ಕೋವಿಡ್‌ ಲಸಿಕೆ ನೀಡಲು ಕೋರಿಕೆ

04:50 PM Sep 02, 2021 | Team Udayavani |

ಕೋಲಾರ: “ಮುಖ್ಯಮಂತ್ರಿಗಳೊಂದಿಗೆ ಕಳೆದ ಆ.26 ರಂದು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ 1 ಕೋಟಿ ಕೋವಿಡ್‌ ಲಸಿಕೆ ಕೊಡಬೇಕೆಂದು ಕೇಳಿದ್ದೇವೆ.ಪ್ರಸ್ತುತ 1.12 ಕೋಟಿ ಲಸಿಕೆ ಇದ್ದು, ಈವರೆಗೆ 4.39 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ’ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್‌ ತಿಳಿಸಿದರು.

Advertisement

ತಾಲೂಕಿನ ಮುದುವಾಡಿಯಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರು. ಜಿಲ್ಲೆಗೆ ಬಂದಾಗ ಚಿಕ್ಕಬಳ್ಳಾಪುರ-ಕೋಲಾರದಿಂದ ಬೇರೆ ಆಗಿದೆ ಎನಿಸುವುದಿಲ್ಲ ಎಂದ ಅವರು, ಕೇಂದ್ರಕ್ಕೆ ತೆರಳಿದ್ದ ವೇಳೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆಯೂ ಸಿಎಂ ಬೊಮ್ಮಾಯಿ ಜತೆ ಚರ್ಚಿಸಿದ್ದಾಗಿ ನುಡಿದರು.

ಸುದೀರ್ಘ‌ವಾದ ರಾಜಕೀಯ ಬದ್ಧತೆ ಮತ್ತು ಅನುಭವದ ಆಧಾರದ ಮೇಲೆ ಕೆ.ಸಿ.ವ್ಯಾಲಿ, ಎಚ್‌. ಎನ್‌.ವ್ಯಾಲಿ,ಎತ್ತಿನಹೊಳೆಯೋಜನೆಗೆ ಪರ್ಯಾಯವಾಗಿ ಹೊಸಯೋಜನೆ ರೂಪಿಸುವಂತೆ ಮನವಿ ಮಾಡಿದಾಗ, ಸಿಎಂಕೇಂದ್ರ ನೀರಾವರಿ ಸಚಿವರ ಜತೆ ಚರ್ಚಿಸಿದ್ದಾರೆ.

ಉಚಿತ ಲಸಿಕೆ: ಜನತೆಗೆ ಲಸಿಕೆ ನೀಡುವುದು ರಾಜ್ಯದ ವಿಷಯ. ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಸರ್ಕಾರ ಇದೆ. ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಭಾರತೀಯರಿಗೆ ಲಸಿಕೆ ಸಿಗಲಿ ಎಂದು35 ಸಾವಿರಕೋಟಿ ಮೀಸಲಿರಿಸಿ ಉಚಿತವಾಗಿ ಲಸಿಕೆ ನೀಡುತ್ತಿದೆ ಎಂದರು.

ಲಸಿಕೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಿ, ಸುಳ್ಳು ಪ್ರಚಾರ ಮಾಡಿದವರು ಯಾರು ಎಂಬುದನ್ನು ಮತ್ತೆ ಪ್ರಸ್ತಾಪಿಸುವುದಿಲ್ಲ. ಯಾರು ಏನು ಹೇಳಿದರೂ ಜನ ನಂಬಲ್ಲ. 2 ಡೋಸ್‌ ಪಡೆದರೆ ಕ್ಷೇಮ ಎಂದು ತೀರ್ಮಾನ ಮಾಡಿದ್ದಾರೆ. ಮೋದಿ ಬಿಜೆಪಿ ಲಸಿಕೆ ಎನ್ನಲಿ,ಕ್ಯೂ ಮಾತ್ರ ಕಡಿಮೆ ಆಗಲ್ಲ. ಜಿಲ್ಲಾಡಳಿತ, ಗ್ರಾಪಂ ಮಟ್ಟದ ಕಾರ್ಯಪಡೆ ಬಳಸಿ ಜನರಿಗೆ ಅರಿವು ಮೂಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

Advertisement

ಇದನ್ನೂ ಓದಿ:ಬಿಗ್ ಬಾಸ್ ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೂ ಮುನ್ನ ರಾತ್ರಿ ನಡೆದಿದ್ದೇನು?

ವೈದ್ಯರ ನೇಮಕ: ರಾಜ್ಯದಲ್ಲಿ ಹೊಸ ಮಾದರಿಯಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುತ್ತಿದೆ. ಈಗ 2 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ. ಮುಂಬರುವ ಆರೊಗ್ಯ ಕೇಂದ್ರಗಳನ್ನು ಉತ್ಕೃಷ್ಟವಾಗಿ 7 ರಿಂದ 8 ಕೋಟಿ ವೆಚ್ಚದಲ್ಲಿ 12 ಹಾಸಿಗೆ ಸಾಮರ್ಥ್ಯ ಹೊಂದಿರುತ್ತದೆ, ಐಸಿಯು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು 3 ವೈದ್ಯರನ್ನು ನೇಮಕ ಮಾಡಲಾಗುವುದು ಎಂದರು.

ಕಳೆದ 4-5 ತಿಂಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. 4000 ವೈದ್ಯರನ್ನು ನೇಮಿಸಲಾಗಿದೆ. ಕಳೆದ 30 ವರ್ಷದಿಂದ ಯಾವುದೇ ಸರ್ಕಾರ ಈ ಕೆಲಸ ಮಾಡಿಲ್ಲ.ಕೋವಿಡ್‌ ಆರಂಭಕ್ಕಿಂತ ಮುಂಚೆ 4500 ಆಮ್ಲಜನಕ ಹಾಸಿಗೆ ಇತ್ತು. 12 ತಿಂಗಳಲ್ಲೇ 45 ಸಾವಿರ ಹಾಸಿಗೆಗೆ ಹೆಚ್ಚಿಸಲಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಮೂಲ ಸೌಲಭ್ಯ ಹೆಚ್ಚಿಸಲಾಗಿದೆ ಎಂದರು.

ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಜಿಲ್ಲೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಉಸ್ತುವಾರಿ ಸಚಿವರು ಎಲ್ಲಾ ತಾಲೂಕು ಗಳಲ್ಲಿ ಕಚೇರಿ ತೆರೆದು ಕುಂದುಕೊರತೆ ಆಲಿಸಲು ಕ್ರಮ ಕೈಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಜಿಲ್ಲಾಧಿಕಾರಿಡಾ.ಆರ್‌.ಸೆಲ್ವಮಣಿ, ಜಿಪಂ ಸಿಇಒ ಎನ್‌.ಎಂ. ನಾಗರಾಜ್‌, ಎಸ್ಪಿ ಡಿ ಕಿಶೋರ್‌ಬಾಬು, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಆರೋಗ್ಯ ಇಲಾಖೆ ನಿರ್ದೇಶಕ ಅಪ್ಪಾಸಾಹೇಬ್‌, ಡಿಎಚ್‌ಒ ಡಾ.ಜಗದೀಶ್‌ ಇತರರು ಇದ್ದರು.

ಎತ್ತಿನಹೊಳೆ ಯೋಜನೆಗೆ ವೇಗ ನೀಡುವ ಜತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂರಾಮನಗರ ಜಿಲ್ಲೆಗೆ ಕೃಷ್ಣಾನದಿ ನೀರು ಹರಿಸುವಬಗ್ಗೆ ಆಲೋಚನೆ ಮತ್ತುಬದ್ಧತೆಯನ್ನು ಸರ್ಕಾರ ಹೊಂದಿದೆ.
– ಸುಧಾಕರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next