Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

02:20 PM Jul 08, 2020 | Suhan S |

ಹುನಗುಂದ: ತಾಲೂಕಿನಲ್ಲಿ ಅಂಗವಿ ಕಲರಿಗೆ ಸ್ಥಗಿತಗೊಂಡಿರುವ ಮಾಸಾಶನ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಾ| ಪುಟ್ಟರಾಜ ಗವಾಯಿಗಳ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಪದಾಧಿಕಾರಿಗಳು ಗ್ರೇಡ್‌-2 ತಹಶೀಲ್ದಾರ್‌ ಆನಂದ ಕೋಲಾರ ಅವರಿಗೆ ಮನವಿ ಸಲ್ಲಿಸಿದರು.

Advertisement

ಅಂಗವಿಕಲರ ಸಂಘದ ಅಧ್ಯಕ್ಷ ಸಂಗಮೇಶ ಭಾವಿಕಟ್ಟಿ ಮಾತನಾಡಿ, ಕಳೆದ ಒಂದು ವರ್ಷಗಳಿಂದ ಅಂಗವಿಕಲರ ಮಾಸಾಶನ ಸ್ಥಗಿತಗೊಂಡಿದೆ. ಮಾಸಾಶನ ನಂಬಿಕೊಂಡ ಅಂಗವಿಲಕರು ತೊಂದರೆ ಅನುಭವಿಸುತ್ತಿದ್ದು, ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಪ್ರತಿ ತಿಂಗಳ ನೀಡುವ ಮಾಸಾಶನ 5000 ರೂ. ಗಳಿಗೆ ಏರಿಕೆ ಮಾಡಬೇಕು. ವಿಶ್ವ ಅಂಗವಿಕಲರ ದಿನಾಚರಣೆಯನ್ನು ಸರ್ಕಾರ ಡಾ| ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಆಚರಿಸಬೇಕು. ಅಂಗವಿಕಲರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಅಂಗವಿಕಲರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿ ಬ್ಯಾಂಕ್‌ಗಳಲ್ಲಿ 10 ಲಕ್ಷ ರೂ. ಸಾಲ ಮಂಜೂರು ಮಾಡುವಂತೆ ಸರ್ಕಾರ ಆದೇಶಿಸಬೇಕು. ಅಂಗವಿಲಕರ ಆಶ್ರಯ ಮನೆಗಳ ಸಂಖ್ಯೆ 25ರಿಂದ 50ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಅಂಗವಿಕಲರ ಮುಖಂಡ ರಘು ಹುಬ್ಬಳ್ಳಿ ಮಾತನಾಡಿ, ಪ್ರತಿ ವರ್ಷ ಅಂಗವಿಕಲರಿಗೆ ಮೀಸಲಿರುವ 20 ಲಕ್ಷ ಶಾಸಕರ ಅನುದಾನ ಕಳೆದ 2 ವರ್ಷಗಳಿಂದ ಬಳಕೆಯಾಗಿಲ್ಲ. ಅದನ್ನು ಶಾಸಕರು ಅಂಗವಿಕಲರ ಅಭಿವೃದ್ಧಿಗೆ ಬಳಕೆ ಮಾಡಬೇಕು. ಅಂಗವಿಕಲರ ಉದ್ಯೋಗ ಮಾಡುವರಿಗೆ ರಿಯಾಯತಿ ದರ ವಿದ್ಯುತ್‌ ನೀಡಬೇಕು. ಬೇಡಿಕೆಗಳಿಗೆ ಮೂರು ತಿಂಗಳಲ್ಲಿ ಪರಿಹಾರ ಮಾಡದಿದ್ದರೆ ತಹಶೀಲ್ದಾರ್‌ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು. ತಹಶೀಲ್ದಾರ್‌ ಕಚೇರಿಯವರಿಗೆ ಪ್ರತಿಭಟನಾ ಬೈಕ್‌ ರ್ಯಾಲಿ ನಡೆಯಿತು.

ಜಡಿಸಿದ್ದೇಶ್ವರ ಶ್ರೀ, ಕಾರ್ಯದರ್ಶಿ ರಹೆಮಾನ್‌, ಶಿವು ಶಿರಗುಂಪಿ, ಚಿದಾನಂದ ತತ್ರಾಣಿ, ಹುಸೇನಸಾಬ ಮುದಗಲ್ಲ, ಹೇಮಾ ದಾನಿ, ಮಹಾಂತೇಶ ಬೈಲಕೂರ, ಯಶೋಧಾ ವಣಕಿ, ಸುನೀಲ ಬಾಲಗಾವಿ, ರೇವಪ್ಪ ಮಾದರ, ಸೋಮು ಕುಷ್ಟಗಿ, ವೀರೇಶ ಮಾಳಿ, ಸುರೇಶ ಹಡಪದ, ಮಹಾಂತೇಶ ಉಳ್ಳೇಗಡ್ಡಿ, ಶರಣಮ್ಮ ತೆಂಗಿನಮಟ್ಟಿ, ಪಾರ್ವತೆವ್ವ ಚಲವಾದಿ, ವಿಜಯಲಕ್ಷ್ಮೀ ನಾಡಗೌಡ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next