Advertisement

ಆಶ್ರಯ ಫಲಾನುಭವಿ ಆಯ್ಕೆ ಪಟ್ಟಿ ರದ್ದುಗೊಳಿಸಲು ಮನವಿ

03:00 PM Jun 11, 2020 | Suhan S |

ಮುಂಡರಗಿ ನಿವೇಶನ ಹಂಚಿಕೆಯ ಫಲಾನುಭವಿಗಳ ಆಯ್ಕೆಯ ಪ್ರಕ್ರಿಯೆ:ಯಲ್ಲಿ ತಾರತಮ್ಯ ಎಸಗಲಾಗಿದೆ. ಆದ್ದರಿಂದ ಪುರಸಭೆ ಆಡಳಿತ ಮಂಡಳಿ ರಚನೆಯಾಗುವರೆಗೂ ನಿವೇಶನ ಹಂಚಿಕೆಯ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸರಕಾರ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಪುರಸಭೆ ಸದಸ್ಯರು ಹಾಗೂ ನಿವೇಶನ ವಂಚಿತ ಫಲಾನುಭವಿಗಳು ತಹಶೀಲ್ದಾರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.

Advertisement

ಪುರಸಭೆ ವ್ಯಾಪ್ತಿಯ ನಿವೇಶನ ರಹಿತ ಸುಮಾರು 3000ಕ್ಕೂ ಹೆಚ್ಚು ಫಲಾನುಭವಿಗಳು ಆಶ್ರಯ ನಿವೇಶನ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರಕಾರವು 25 ಎಕರೆ ಭೂಮಿ ನೀಡಿದ್ದು, ಆ ಭೂಮಿಯಲ್ಲಿ ಕೇವಲ 1050 ನಿವೇಶನ ಮಾಡಲು ಸಾಧ್ಯವಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿವೇಶನ ನೀಡಬೇಕು. ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದರ ಬದಲಾಗಿ ತಮಗೆ ಬೇಕಾಗಿರುವ, ಶ್ರೀಮಂತರನ್ನು ಸೇರಿಸಿ ಏಕ ಪಕ್ಷೀಯವಾಗಿ 844 ಜನ ಯಾದಿ ಪ್ರಕಟಿಸಲಾಗಿದೆ. ಈ ಯಾದಿಯು ಕಾನೂನು ಬಾಹಿರ್‌ ಮತ್ತು ಅವೈಜ್ಞಾನಿಕವಾಗಿದೆ. ಅದರಲ್ಲಿಯೂ ಒಂದೇ ಕುಟುಂಬದ ಮೂರ್‍ನಾಲ್ಕು ಜನರಿಗೆ, ರಾಜಕೀಯ ಹಿಂಬಾಲಕರಿಗೆ, ಮನೆ ಇದ್ದವರಿಗೆ, ಆಸ್ತಿ ಇದ್ದವರಿಗೆ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.

ತಾಲೂಕು ಶಿರಸ್ತೇದಾರ್‌ ಎಸ್‌.ಎಸ್‌. ಬಿಚ್ಚಾಲಿ ಮನವಿ ಸ್ವೀಕರಿಸಿದರು. ಪುರಸಭೆ ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ಮಹ್ಮದ ರಫೀಕ್‌ ಮುಲ್ಲಾ, ಸಂತೋಷ ಹಿರೇಮನಿ, ರಾಜಾಭಕ್ಷಿ ಬೆಟಗೇರಿ, ರೆಹಮಾನಸಾಬ್‌ ಮಲ್ಲನಕೇರಿ, ನಬಿಸಾಬ್‌ ಕೆಲೂರ, ಮಂಜಪ್ಪ ದಂಡಿನ, ಅಮೀರ ಭಾಷಾ ಚೌಕಾಸಿ, ಎಂ.ಕೆ. ತಳಗಡೆ, ಮೈನುದ್ದಿನ್‌ ರಾಟಿ, ಮಹಮ್ಮದ ರಫಿ ವಡ್ಡಟ್ಟಿ, ರಾಜಾಬಿ ಹಾತಲಗೇರಿ, ಬೀಬಿಜಾನ್‌ ಹಲಗೇರಿ, ಮಂಜುಳಾ ಬಗರಿಕಾರ, ಶಾಂತವ್ವ ಕಲ್ಲಕುಟಗರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next