ಮಲ್ಪೆ: ಪರಿಸರಕ್ಕೆ , ಜನರಿಗೆ ಮಾರಕವಾಗುವ ಯಾವುದೇ ಕೈಗಾರಿಕೆ ಅಥವಾ ಫಿಶ್‌ಮೀಲ್ ಘಟಕಗಳಿಗೆ ಅನುಮತಿ ನೀಡದಂತೆ ಗ್ರಾಮದ ವಿವಿಧ ಸಂಘಟನೆಗಳು, ನಾಗರಿಕರು ಸೇರಿ ಕಡೆಕಾರು ಗ್ರಾ.ಪಂ. ಅಧ್ಯಕ್ಷ ಹಾಗೂ ಪಂಚಾಯತ್ ಪಿಡಿಒಗೆ ಅವರಿಗೆ ಮನವಿ ನೀಡಿ ಆಗ್ರಹಿಸಿದರು.
ಉಡುಪಿ ತಾಲೂಕು ಕಡೆಕಾರು ಗ್ರಾ. ಪಂ. ವ್ಯಾಪ್ತಿಯ ಕಡೆಕಾರು 8ನೇ ವಾರ್ಡಿನಲ್ಲಿ ಫಿಶ್‌ಮೀಲ್ ಘಟಕ ಸ್ಥಾಪಿಸಲು ಗ್ರಾ. ಪಂ. ಅನುಮತಿಯನ್ನು ಪಡೆಯುವ ಬಗ್ಗೆ ಅರ್ಜಿ ಸಲ್ಲಿಸಲಾಗಿದ್ದು ಪರಿಸರಕ್ಕೆ ಊರಿನ ಜನರಿಗೆ ಮಾರಕವಾಗುವ
ಫಿಶ್‌ಮಿಲ್ ಘಟಕಕ್ಕೆ ಅನುಮತಿ ನೀಡಬಾರದು. ಪರಿಸರಕ್ಕೆ ಮಾರಕವಾಗುವ ಕೈಗಾರಿಕೆ ಅಥವಾ ಫಿಶ್‌ಮೀಲ್ ಘಟಕಗಳು ಪರಿಸರದಲ್ಲಿ ತೆರೆಯಲ್ಪಟ್ಟರೆ ಪರಿಸರದ ಜನರ ಆರೋಗ್ಯದ ಮೇಲೆ ನೇರ ದುಷ್ಪರಿಣಮಗಳು ಬೀರುತ್ತವೆ.
ಈಗಾಗಲೇ ಪಕ್ಕದ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಿಶ್‌ಮೀಲ್‌ನಿಂದಾಗಿ ಪರಿಸರದ ಜನರಿಗೆ ತೊಂದರೆಯಾಗುತ್ತಿದ್ದು ಕಿದಿಯೂರು, ಕಡೆಕಾರು, ಕುತ್ಪಾಡಿ ಗ್ರಾಮದಲ್ಲಿ ಯಾವುದಾದರೂ ಪರಿಸರಕ್ಕೆ ಮಾರಕ ವಾಗುವ ಕೈಗಾರಿಕೆ ಮತ್ತು ಫಿಶ್‌ಮೀಲ್‌ಗಳಿಗೆ ಯಾವುದೇ ಪರವಾನಿಗೆ ನೀಡಕೂಡದು. ಗ್ರಾಮಸ್ಥರ ಮನವಿಗೆ ಸ್ಪಂದಿಸದೆ ಫಿಶ್‌ಮಿಲ್ ಘಟಕಕ್ಕೆ ಲೈಸೆನ್ಸ್ ನೀಡಿದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಡೆಕಾರು 8ನೇ ವಾರ್ಡಿನ ಸದಸ್ಯರಾದ ತಾರಾನಾಥ್ ಆರ್. ಸುವರ್ಣ, ರೇಣುಕಾ, ಜತಿನ್ ಕಡೆಕಾರು ಹಾಗೂ ಕಡೆಕಾರು ಗ್ರಾಮದ ಕರಾವಳಿ ನ್ಪೋರ್ಟ್ಸ್ ಕ್ಲಬ್, ನಿಡಂಬೂರು ಯುವಕ ಮಂಡಲ, ವಿಠೊಭ ಭಜನ ಮಂದಿರ, ಹಾಲು ಉತ್ಪಾದಕರ ಮಹಿಳಾ ಸಂಘ, ಬ್ಯಾಡ್ಮಿಂಟನ್ ಕ್ಲಬ್, ದುರ್ಗಾಂಬಿಕಾ ಮಹಿಳಾ ಯಕ್ಷಗಾನ ಮಂಡಳಿ, ಶೀತಲ್ ಕ್ರಿಕೆಟರ್, ವಿಠಲ ರುಖುಮಾಯಿ ಸಂಘ, ಬಾಲಮಾರುತಿ ವ್ಯಾಯಾಮ ಶಾಲೆ, ನಿಸರ್ಗ ನ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್, ಮಹಾಕಾಳಿ ಗ್ರೂಪ್ ಸಹಕಾರ ಸಂಘ, ನವೋದಯ ಸ್ವಸಹಾಯ ಸಂಘ, ಸೌಜನ್ಯ ಆದಿತ್ಯ ಸಂಘ, ಅಟೋರಿಕ್ಷಾ ಚಾಲಕ ಮಾಲಕರ ಸಂಘ, ಶುಭೋದಯ ಮಹಿಳಾ ಸ್ವಸಹಾಯ, ಶ್ರೀಕೃಷ್ಣ ಮಹಿಳಾ ಸ್ವಸಹಾಯ, ವಿಠೊಭ ಸ್ವಸಹಾಯ, ಪಾಂಡುರಂಗ ಸ್ವಸಹಾಯ, ಶ್ರೀಲಕೀÒ$¾ ಸ್ವಸಹಾಯ ಸೇರಿದಂತೆ ವಿವಿಧ ಸಂಘಟನೆಗಳು ನೂರಾರು ಮಂದಿ ಪಾಲ್ಗೊಂಡಿದ್ದರು.