Advertisement
ಬ್ರಾಂಡೆಡ್ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವುದರಿಂದ ರಾಜ್ಯದಲ್ಲಿ ಅಕ್ಕಿ ವಹಿವಾಟು ಶೇ.50ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಬ್ರಾಂಡ್ ಹೊಂದಿರುವ ಉತ್ಪಾದಕರು, ವಿತರಕರು ಬ್ರಾಂಡ್‌ರಹಿತವಾಗಿ ಅದೇ ಅಕ್ಕಿ ಮಾರಾಟ ಮಾಡಲಾರಂಭಿಸಿದ್ದು, ಸದ್ಯ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬ್ರಾಂಡ್‌ರಹಿತ ಅಕ್ಕಿಪ್ರಮಾಣ ಶೇ.90ಕ್ಕಿಂತಲೂ ಹೆಚ್ಚು ಇದೆ ಎಂದು ಅಕ್ಕಿ ಗಿರಣಿ ಮಾಲೀಕರು ತಿಳಿಸಿದ್ದಾರೆ.
ಪದಾರ್ಥಗಳ ಮೇಲೆ ತೆರಿಗೆ ವಿಧಿಸಿದರೆ ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಬ್ರಾಂಡೆಡ್ ಪದಾರ್ಥಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿದೆ. ಇದರಿಂದ ಬ್ರಾಂಡೆಡ್ ಆಹಾರ ಪದಾರ್ಥಗಳ ವಹಿವಾಟು ಏರುಪೇರಾಗಿದೆ. ಬ್ರಾಂಡ್ ರದಟಛಿತಿಗೆ ಪ್ರಸ್ತಾವ ಹೆಚ್ಚಳ: ಬ್ರಾಂಡೆಡ್ ಆಹಾರ ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸುತ್ತಿರುವುದರಿಂದ ಬ್ರಾಂಡ್ ನೋಂದಣಿ ರದಟಛಿತಿಗೆ ಸಾಕಷ್ಟು ಸಂಸ್ಥೆಗಳು ಪ್ರಸ್ತಾವ ಸಲ್ಲಿಸಲಾರಂಭಿಸಿವೆ. ಆ.28ರವರೆಗೆ ರಾಜ್ಯದಿಂದ 50ಕ್ಕೂ ಹೆಚ್ಚು ಬ್ರಾಂಡ್ ನೋಂದಾಯಿತ ಸಂಸ್ಥೆಗಳು ರದಟಛಿತಿಗೆ ಮನವಿ ಸಲ್ಲಿಸಿವೆ. ಅದೇರೀತಿ ಈ ಹಿಂದೆ ಬ್ರಾಂಡ್
ನೋಂದಣಿಗೆ ಅರ್ಜಿ ಸಲ್ಲಿಸಿ ಅನುಮೋದನೆ ನಿರೀಕ್ಷೆಯಲ್ಲಿದ್ದವರ ಪೈಕಿ 150 ಮಂದಿ ಪ್ರಸ್ತಾವ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
Related Articles
Advertisement
ಸೆ. 9ರ ಸಭೆ ನಿರ್ಣಾಯಕ: ಬ್ರಾಂಡ್ ಹೊಂದಿರುವ ಆಹಾರ ಧಾನ್ಯ, ಪದಾರ್ಥಗಳಿಗೆ ಜಿಎಸ್‌ಟಿಯಡಿ ಶೇ.5ರಷ್ಟುತೆರಿಗೆ ವಿಧಿಸಿರುವುದರಿಂದ ವಹಿವಾಟಿನಲ್ಲಿ ವ್ಯತ್ಯಯವಾಗಿದೆ. ಈ ಸಂಬಂಧ ಸಾಕಷ್ಟು ಉದ್ದಿಮೆದಾರರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸೆ.9ರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ. ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಕಚೇರಿಯೂ ರದಟಛಿತಿ ಕೋರಿ ಎಷ್ಟೇ ಮನವಿ ಬಂದರೂ ತರಾತುರಿಯಲ್ಲಿ ಅನುಮೋದಿಸುವ ಬದಲಿಗೆ
ಸೆ.9ರ ಸಭೆ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. ಶೇ.50 ಕುಸಿತ: ಟ್ರೇಡ್ ಮಾರ್ಕ್ ನೋಂದಣಿಯಾಗಿರುವ ಆಹಾರ ಧಾನ್ಯ, ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಿರುವುದರಿಂದ ಅಕ್ಕಿ ಸೇರಿ ಇತರೆ ಆಹಾರ ಪದಾರ್ಥದ ವಹಿವಾಟಿ ನಲ್ಲಿ ಭಾರಿ ಕುಸಿತ ಉಂಟಾಗಿದೆ ಎಂದು
ಉತ್ಪಾದಕರು ಅಳಲು ತೋಡಿಕೊಂಡಿದ್ದಾರೆ. ಅಕ್ಕಿ ವಹಿವಾಟಿನಲ್ಲಿ ಶೇ.50ರಷ್ಟು ಕುಸಿತವಾಗಿದೆ ಎಂದು ಅಕ್ಕಿ ಗಿರಣಿ ಮಾಲೀಕರು ತಿಳಿಸಿದ್ದಾರೆ. ರಾಜ್ಯದಲ್ಲಿ 400ಕ್ಕೂ ಹೆಚ್ಚು ಬ್ರಾಂಡಿನ ಅಕ್ಕಿಗಳಿದ್ದು, ಜಿಎಸ್‌ಟಿಯಿಂದಾಗಿ ಉದ್ಯಮಕ್ಕೆ
ಹೊಡೆತ ಬಿದ್ದಿದೆ. ಇದರಿಂದ ಶೇ.90ಕ್ಕಿಂತ ಹೆಚ್ಚು ಉತ್ಪಾದಕರು, ವಿತರಕರು ಬ್ರಾಂಡ್‌ರಹಿತವಾಗಿ ಅಕ್ಕಿ ಮಾರಾಟ ಮಾಡಲಾರಂಭಿಸಿದ್ದಾರೆ. ಬ್ರಾಂಡ್‌ರಹಿತವಾಗಿ ಅದೇ ಗುಣಮಟ್ಟದ ಅಕ್ಕಿ ನೀಡಿದರೂ ಗ್ರಾಹಕರು ಅನುಮಾನದಿಂದ
ನೋಡುತ್ತಿದ್ದಾರೆ. ಬ್ರಾಂಡ್ ನೋಂದಣಿ ರದಟಛಿತಿ ಕೋರಿದ್ದರೂ ಅನುಮತಿ ಸಿಗುತ್ತಿಲ್ಲ ಎಂದು ಅಕ್ಕಿ ಗಿರಣಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.