Advertisement

ಗಳಿಕೆ ರಜೆ ಮಂಜೂರಿಗೆ ಆಗ್ರಹಿಸಿ ಶಿಕ್ಷ ಕರಿಂದ ಮನವಿ

10:52 PM Jan 10, 2022 | Girisha |

ವಿಜಯಪುರ: ಬಿಎಲ್‌ಒ ಹಾಗೂ ಚೆಕ್‌ಪೋಸ್ಟ್‌ ಗಡಿಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರುಗಳಿಗೆ ಗಳಿಕೆ ರಜೆ ಮಂಜೂರು ಮಾಡಲು ಸಂಬಂ ಧಿಸಿದ ಶಿಕ್ಷಣ ಇಲಾಖೆ ಅಧಿ ಕಾರಿಗಳಿಗೆ ನಿರ್ದೇಶನ ನೀಡುವಂತೆ ತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ಗ್ರಾಮೀಣ ವಲಯದ ಶಿಕ್ಷಕ ಸಂಘ ಹಾಗೂ ನೌಕರ ಸಂಘದ ಪದಾ ಧಿಕಾರಿಗಳು ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಬಬಲೇಶ್ವರ, ವಿಜಯಪುರ ನಗರ, ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯ ವ್ಯಾಪ್ತಿಯಲ್ಲಿ ಶಿಕ್ಷಕರು ಭೂತ್‌ ಮಟ್ಟದ (ಬಿಎಲ್‌ಒ) ಅಧಿ ಕಾರಿಗಳಾಗಿ ವರ್ಷದ 365 ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಶಿಕ್ಷಕರು ರಜಾ ರಹಿತ ನೌಕರರೆಂದು ಪರಿಗಣಿಸಿ ಅವರಿಗೆ ವಾರ್ಷಿಕವಾಗಿ 30 ಗಳಿಕೆ ರಜೆ ಮಂಜೂರು ಮಾಡಬೇಕು. ಇದಕ್ಕಾಗಿ ಸಂಬಂ  ಧಿಸಿದ ಅ ಧಿಕಾರಿಗಳಿಗೆ ನಿರ್ದೇಶನ ನೀಡಿ ಗಳಿಕೆ ರಜೆ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಪದಾಧಿ ಕಾರಿಗಳು ಮನವಿ ಮಾಡಿಕೊಂಡರು.

ಪ್ರಮುಖರಾದ ಉಜ್ವಲ ಬನಸೋಡೆ, ವಿ.ಬಿ. ದಿವಾನಜಿ, ಎಂ.ಎ.ಬಿಸನಾಳ, ಪಿ.ಕೆ.ಪ್ರಭಾಕರ, ಅಲ್ಲಾಭಕ್ಷ ವಾಲೀಕಾರ, ಅರ್ಜುನ ಲಮಾಣಿ, ಹನುಮಂತ ಕೊಣದಿ, ಸಿ.ಟಿ. ಜತ್ತಿ, ಅಶೋಕ ಚನಬಸಗೋಳ, ಎ.ಬಿ. ದಡಕೆ, ಅಶೋಕ ಬೂದಿಹಾಳ, ಆರ್‌.ಎಂ. ಮೇತ್ರಿ, ಝಡ್‌.ಐ. ಇಂಡಿಕಾರ, ಬಿ.ಎಸ್‌. ಮಠ, ಅಶೋಕ ಭಜಂತ್ರಿ, ಆರ್‌.ಎಸ್‌. ದಿಕ್ಷಿತ್‌, ಎಸ್‌.ಬಿ. ಮಡಸನಾಳ, ಎಲ್‌. ಎಂ. ಬಡಿಗೇರ, ಸಿದರಾಯ ಅಥಣಿ, ವಿ.ಎಸ್‌. ಕಳಸಗೊಂಡ, ವೆಂಕಟೇಶ ಕಪಟಕರ, ಆರ್‌.ಎಸ್‌. ಮಸಳಿ, ಆರದ ಜಾಧವ, ಎಸ್‌.ಕೆ. ದೇಶಪಾಂಡೆ, ಎಂ.ಐ. ಕುಡಚಿ, ಐ.ಬಿ. ಅಡಳ್ಳಿ, ಎಸ್‌.ಬಿ. ಕೊಪ್ಪದ, ಎಂ.ಎಸ್‌. ಟಕ್ಕಳಕಿ, ಎನ್‌.ಜಿ. ತೆಗ್ಗಿನಮನಿ, ಪಿ.ಜೆ. ಇನಾಂದಾರ, ಎನ್‌.ಎಚ್‌. ಮುಜಾವರ, ಎಸ್‌. ಎನ್‌. ಬಾಗಲಕೋಟ, ಪರಸಪ್ಪ ಮಾದರ, ಎಚ್‌. ಎಂ. ಮುಲ್ಲಾ, ಬಿ.ವೈ. ಮೇಡೆಗಾರ, ಎಸ್‌.ಎಸ್‌. ಬಬಲೇಶ್ವರ ಸೇರಿದಂತೆ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next