Advertisement

Coastal: ಕಾರ್‌ಲ್ಯಾಂಡ್‌ ಯೋಜನೆ ಅನುದಾನಕ್ಕೆ ಗುರ್ಮೆ ಸುರೇಶ್‌ ಶೆಟ್ಟಿ ಆಗ್ರಹ

10:56 PM Feb 14, 2024 | Pranav MS |

ಬೆಂಗಳೂರು: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಪು, ಕೈಪುಂಜಾಲು, ಉಳಿಯಾರಗೋಳಿ, ಮಟ್ಟು, ಅಳಿಂಜೆ, ತೆಂಕು ಕೊಪ್ಪಳ, ಬಡಗು ಕೊಪ್ಪಳ, ಕಲ್ತಟ್ಟ, ದಡ್ಡಿ, ಪಾಂಗಾಳ ಗುಡ್ಡೆ ಪರಿಸರದಲ್ಲಿ ಪಾಂಗಾಳ ನದಿ ದಂಡೆಯ ಕೊರೆತಕ್ಕೊಳಗಾದ ಆಯ್ದ ಭಾಗಗಳಲ್ಲಿ ಕಾರ್‌ಲ್ಯಾಂಡ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಅನುದಾನ ಮಂಜೂರು ಮಾಡುವಂತೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ವಿಧಾನಸಭೆಯಲ್ಲಿ ಸದನದ ಗಮನ ಸೆಳೆದರು.

Advertisement

ಇಲ್ಲಿನ ನೂರಾರು ಕುಟುಂಬಗಳು ಉಡುಪಿ ಶ್ರೀ ಕೃಷ್ಣಮಠದ ಯತಿಗಳಾದ ಶ್ರೀ ಸೋದೆ ವಾದಿರಾಜ ಸ್ವಾಮೀಜಿ ಯವರು ಪ್ರಸಾದ ರೂಪದಲ್ಲಿ ನೀಡಿದ ಬೀಜವನ್ನು ಬಿತ್ತಿ ಮಟ್ಟುಗುಳ್ಳವನ್ನು ಬೆಳೆಯುತ್ತಿದ್ದು, ಮಟ್ಟುಗುಳ್ಳ ಇಲ್ಲಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಜಿ.ಐ. ಟ್ಯಾಗ್‌ ಮಾನ್ಯತೆ ಹೊಂದಿದ ಮಟ್ಟುಗುಳ್ಳ ವಿಭಿನ್ನ ತರಕಾರಿ ಬೆಳೆಯಾಗಿದ್ದು, ಇದಕ್ಕೆ ದೇಶ-ವಿದೇಶಗಳಲ್ಲಿ ಬಹು ಬೇಡಿಕೆಯಿದೆ. ಈ ಭಾಗದಲ್ಲಿ ಮಟ್ಟುಗುಳ್ಳ ಮಾತ್ರವಲ್ಲದೇ ಭತ್ತ, ತರಕಾರಿ ಸಹಿತ ಧವಸ ಧಾನ್ಯ ಹಾಗೂ ತೆಂಗು ಬೆಳೆಯನ್ನು ಬೆಳೆಸುತ್ತಿದ್ದು ಉಪ್ಪು ನೀರಿನ ಹಾವಳಿಯಿಂದಾಗಿ ನಿರಂತರವಾಗಿ ಬೆಳೆಹಾನಿ ಯುಂಟಾ ಗುತ್ತಿದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಹರಿಯುವ ಪಾಂಗಾಳ ನದಿಗೆ ಕಾರ್‌ಲ್ಯಾಂಡ್‌ ಯೋಜನೆ ಯಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುದಾನ ಮಂಜೂರು ಮಾಡುವಂತೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ಸದನದ ಗಮನ ಸೆಳೆದರು.

ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಬಂಧಪಟ್ಟ ಸಚಿವರು ಕಾಪು ಶಾಸಕರಿಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next