Advertisement

ಶೇ. 7.5ರಷ್ಟು ಮೀಸಲಾತಿ ನೀಡಲು ಆಗ್ರಹಿಸಿ ಮನವಿ

07:38 PM Nov 01, 2020 | Suhan S |

ಕುರುಗೋಡು: ನ್ಯಾ. ನಾಗಮೋಹನ್‌ ದಾಸ್‌ ಅವರ ವರದಿ ಪ್ರಕಾರವಾಗಿ ರಾಜ್ಯ ಸರ್ಕಾರವು ಶೀಘ್ರವಾಗಿ ಶೇ. 7.5ರಷ್ಟು ಮೀಸಲಾತಿಯನ್ನು ಹೆಚ್ಚಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವಾಲ್ಮೀಕಿ ಜನಾಂಗದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರಿಗಳ ವಿರುದ್ಧ ಮತ್ತು ಪಡೆಯುವವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜರುಗಿಸಬೇಕು ಎಂದು ಕುಡಿತಿನಿ ಪಟ್ಟಣದ ವಾಲ್ಮೀಕಿ ಸಂಘದ ಅಧ್ಯಕ್ಷ ಹಾಗೂ ವಕೀಲ ಕೆ.ಪ್ರಕಾಶ್‌ ಹೇಳಿದರು.

Advertisement

ಸಮೀಪದ ಕುಡಿತಿನಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿನ ಪರಿಶಿಷ್ಟ ಪಂಗಡ ಜನಾಂಗದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ನಿರ್ಮಿಸಬೇಕು ಹಾಗೂ ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ನಾಮಕರಣ ಮಾಡಬೇಕು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಎ. ಗಣೇಶ್‌ ಮಾತನಾಡಿ, ಮಹರ್ಷಿ ವಾಲ್ಮೀಕಿಯು ವಿಶ್ವದ ಮಾನವ ಕುಲಕ್ಕೆ ದಾರಿದೀಪ ಹಾಗೂ ಜ್ಞಾನ ದೀಪರಾಗಿದ್ದಾರೆ. ಜಗತ್ತಿಗೆ ಆದರ್ಶ ರಾಮನನ್ನು ಪರಿಚಯಿಸಿದ ದಾರ್ಶನಿಕರಾಗಿದ್ದಾರೆ ಎಂದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ವೆಂಕಟರಮಣಬಾಬು, ಹಾಲಪ್ಪ, ದೊಡ್ಡಬಸಪ್ಪ, ಮುಖಂಡರಾದ ಕನ್ನಿಕೇರಿ ದೊಡ್ಡ ಈರಣ್ಣ, ಅಲ್ಲಿಪುರ ಶಿವರಾಮಪ್ಪ, ನಾಗರಾಜ್‌, ಗ್ಯಾಂಗಿ ಹನುಮಂತಪ್ಪ, ದೇವೆಂದ್ರಪ್ಪ, ನಾಗೇಶ್‌, ಹನುಮೇಶ್‌, ಅಮರ್‌, ಅಂಚೆ ನಾಗರಾಜ್‌, ಯಲ್ಲಪ್ಪ, ಮಂಜು ಇದ್ದರು.

ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟ :

Advertisement

ಕಂಪ್ಲಿ: ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಅಖೀಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಶನಿವಾರ ಸರಳವಾಗಿ ಆಚರಿಸಲಾಯಿತು.

ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್‌ ಗೌಸಿಯಾಬೇಗಂ, ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶ ಸಂದೇಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿವೆ. ವಾಲ್ಮೀಕಿ ಸಮುದಾಯದವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು ಎಂದರು.

ಅಖೀಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕಂಪ್ಲಿ ತಾಲ್ಲೂಕು ಅಧ್ಯಕ್ಷ ಬಿ.ನಾರಾಯಣಪ್ಪ ಮಾತನಾಡಿ, ಎಸ್ಟಿ ಜನಾಂಗದ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಹೆಚ್ಚಿಸಬೇಕೆಂದು ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದರೂ, ರಾಜ್ಯ ಸರ್ಕಾರ ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಲು ಮೀನಮೇಷ ಎಣಿಸುತ್ತಿದೆ. ಶೀಘ್ರ ಸರ್ಕಾರ ಮೀಸಲಾತಿ ಘೋಷಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಎಸ್ಟಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಬರೆದ ಮನವಿಯನ್ನು ತಹಶೀಲ್ದಾರ್‌ ಗೌಸಿಯಾಬೇಗಂಗೆ ನೀಡಿ ಒತ್ತಾಯಿಸಲಾಯಿತು. ಕಂಪ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ನೀಟಿ ವಿರೇಶ್‌,

ಸಿಪಿಐ ಸುರೇಶ್‌ ಎಚ್‌. ತಳವಾರ್‌, ಉಪ ತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌, ಆರ್‌ಐ ಎ. ಗಣೇಶ್‌, ಪ್ರಥಮ ದರ್ಜೆ ಸಹಾಯಕರಾದ ಮಾಲತೇಶ್‌ ದೇಶಪಾಂಡೆ, ಮೌನೇಶ್‌, ಪುರಸಭೆ ಸದಸ್ಯ ಎನ್‌. ರಾಮಾಂಜಿನೇಯಲು, ದೇವರಮನೆ ಯಲ್ಲಪ್ಪ, ಮುಖಂಡರಾದ ಡಾ| ವೆಂಕಟೇಶ್‌ ಭರಮಕ್ಕನವರು, ಬೂದಗುಂಪಿ ಅಂಬಣ್ಣ, ವಾಲ್ಮೀಕಿ ಈರಣ್ಣ, ಕರಿಯಪ್ಪ ನಾಯಕ, ಮಂಜುನಾಥ, ಹುಲುಗಪ್ಪ, ಮರಿಯ ಪ್ಪನಾಯಕ, ರವಿಚಂದ್ರ, ಈರಣ್ಣ ಇದ್ದರು.

ಪುರಸಭೆ: ಪುರಸಭೆ ಸಭಾಂಗಣದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮುಖ್ಯಾಧಿಕಾರಿ ರಮೇಶ್‌ ಬಡಿಗೇರ್‌, ಅನಂತ್‌ ರಾವ್‌, ಪ್ರಕಾಶ್‌ಬಾಬು, ಮಲ್ಲಿಕಾರ್ಜುನ, ರಮೇಶ್‌, ಕುಬೇರ, ವಸಂತಮ್ಮ, ಮಧುಮತಿ, ರಾಧಿಕಾ, ರೇಣುಕಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next